Lumina
Psalms

The LORD Reigneth

Psalms 97·Kannada Bible

1ಕರ್ತನು ಆಳುತ್ತಾನೆ; ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋ ಷಿಸಲಿ.

2ಮೇಘಗಳೂ ಕಾರ್ಗತ್ತಲೂ ಆತನ ಸುತ್ತಲು ಅವೆ; ನೀತಿಯೂ ನ್ಯಾಯವೂ ಆತನ ಸಿಂಹಾಸನದ ಸ್ಥಳವಾಗಿದೆ.

3ಬೆಂಕಿಯು ಆತನ ಮುಂದೆ ಹೋಗಿ ಆತನ ವೈರಿಗಳನ್ನು ಸುತ್ತಲೂ ದಹಿಸುವದು.

4ಆತನ ಮಿಂಚುಗಳು ಲೋಕವನ್ನು ಬೆಳಗಿಸುತ್ತವೆ; ಭೂಮಿಯು ನೋಡಿ, ನಡುಗುತ್ತದೆ.

5ಕರ್ತನ ಸನ್ನಿಧಿಯಲ್ಲಿ ಸಮಸ್ತ ಭೂಮಿಯು ಕರ್ತನ ಮುಂದೆ ಬೆಟ್ಟಗಳು ಮೇಣದ ಹಾಗೆ ಕರಗುತ್ತವೆ.

Psalms 97 illustration - Psalms Chapter 97

6ಆಕಾಶಗಳು ಆತನ ನೀತಿಯನ್ನು ತಿಳಿಸುತ್ತವೆ; ಎಲ್ಲಾ ಜನಗಳು ಆತನ ಘನವನ್ನು ನೋಡುತ್ತಾರೆ.

7ಕೆತ್ತಿದ ವಿಗ್ರಹಗಳನ್ನು ಸೇವಿಸಿ, ವಿಗ್ರಹಗಳಲ್ಲಿ ಹೆಮ್ಮೆಪಡುವ ವರೆಲ್ಲರು ನಾಚಿಕೆಪಡಲಿ; ಎಲ್ಲಾ ದೇವರುಗಳೇ, ಆತನನ್ನು ಆರಾಧಿಸಿರಿ.

8ಚೀಯೋನ್‌ ಇದನ್ನು ಕೇಳಿ ಸಂತೋಷಿಸಿತು. ಓ ಕರ್ತನೇ, ನಿನ್ನ ನ್ಯಾಯಗಳ ನಿಮಿತ್ತ ಯೆಹೂದದ ಕುಮಾರ್ತೆಗಳು ಉಲ್ಲಾಸಿಸುತ್ತಾರೆ.

9ಕರ್ತನೇ, ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ; ಎಲ್ಲಾ ದೇವರುಗಳ ಮೇಲೆ ಬಹಳವಾಗಿ ಹೆಚ್ಚಿಸಲ್ಪಟ್ಟಿದ್ದೀ.

10ಕರ್ತನನ್ನು ಪ್ರೀತಿಮಾಡುವವರು ಕೆಟ್ಟದ್ದನ್ನು ಹಗೆ ಮಾಡುವರು; ಆತನು ತನ್ನ ಪರಿಶುದ್ಧರ ಪ್ರಾಣ ಗಳನ್ನು ಕಾಪಾಡಿ ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.

Psalms 97 illustration - Psalms Chapter 97

11ಬೆಳಕು ನೀತಿವಂತನಿಗೋಸ್ಕರವೂ ಸಂತೋಷವು ಯಥಾರ್ಥ ಹೃದಯದವರಿಗೋಸ್ಕರವೂ ಬಿತ್ತಲ್ಪಟ್ಟಿವೆ.

12ನೀತಿವಂತರೇ, ಕರ್ತನಲ್ಲಿ ಸಂತೋ ಷಿಸಿರಿ; ಆತನ ಪರಿಶುದ್ಧತ್ವವನ್ನು ಜ್ಞಾಪಕಮಾಡಿ ಕೊಂಡಾಡಿರಿ.

Chapter Complete

You have read Psalms 97

12 verses