Lumina
Psalms

How Amiable Are Thy Tabernacles

Psalms 84·Kannada Bible

1ಸೈನ್ಯಗಳ ಓ ಕರ್ತನೇ, ನಿನ್ನ ನಿವಾಸಗಳು ಎಷ್ಟೋ ರಮ್ಯವಾಗಿವೆ!

2ಕರ್ತನ ಅಂಗಳ ಗಳಿಗಾಗಿ ನನ್ನ ಪ್ರಾಣವು ಬಯಸಿ, ಹೌದು, ಅದು ಕುಂದುತ್ತದೆ; ನನ್ನ ಹೃದಯವೂ ಶರೀರವೂ ಜೀವ ವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ.

3ಸೈನ್ಯಗಳ ಓ ಕರ್ತನೇ, ನನ್ನ ಅರಸನೇ, ನನ್ನ ದೇವರೇ, ಹೌದು ಗುಬ್ಬಿಯು ಮನೆಯನ್ನೂ ಬಾನಕ್ಕೀಯು ತನ್ನ ಮರಿಗ ಳನ್ನಿಡುವ ಗೂಡನ್ನೂ ನಿನ್ನ ಬಲಿಪೀಠಗಳ ಬಳಿಯಲ್ಲಿ ಕಂಡುಕೊಂಡವೆ.

4ನಿನ್ನ ಆಲಯದಲ್ಲಿ ವಾಸವಾಗಿ ರುವವರು ಭಾಗ್ಯವಂತರು; ಇನ್ನೂ ನಿನ್ನನ್ನು ಅವರು ಸ್ತುತಿಸುವರು ಸೆಲಾ.

5ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು; ಯಾರಲ್ಲಿ ಆತನ ಮಾರ್ಗಗಳು ಇವೆಯೋ ಅವನೇ ಧನ್ಯನು.

Psalms 84 illustration - Psalms Chapter 84

6ಬಾಕಾ ತಗ್ಗನ್ನು ದಾಟುವಾಗ ಅದನ್ನು ಬುಗ್ಗೆಯಾಗಿ ಮಾಡುತ್ತಾರೆ; ಮಳೆಯು ಕೊಳಗಳನ್ನು ತುಂಬುತ್ತದೆ.

7ಅವರು ಬಲದಿಂದ ಬಲಕ್ಕೆ ಹೋಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.

8ಸೈನ್ಯಗಳ ದೇವರಾದ ಓ ಕರ್ತನೇ, ನನ್ನ ಪ್ರಾರ್ಥನೆ ಯನ್ನು ಕೇಳು; ಯಾಕೋಬನ ಓ ದೇವರೇ, ಕಿವಿ ಗೊಡು ಸೆಲಾ.

9ನಮ್ಮ ಗುರಾಣಿಯಾಗಿರುವ ಓ ದೇವರೇ, ನೋಡು; ನಿನ್ನ ಅಭಿಷಿಕ್ತನ ಮುಖವನ್ನು ದೃಷ್ಟಿಸು.

10ಸಾವಿರ ದಿವಸಗಳಿಗಿಂತ ನಿನ್ನ ಅಂಗಳಗ ಳಲ್ಲಿ ಇರುವ ಒಂದು ದಿನವು ಒಳ್ಳೇದಾಗಿದೆ; ದುಷ್ಟರ ಗುಡಾರಗಳಲ್ಲಿ ವಾಸಮಾಡುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯುವವನಾಗಿರುವದು ನನಗೆ ಒಳ್ಳೆಯದು.

Psalms 84 illustration - Psalms Chapter 84

11ದೇವರಾದ ಕರ್ತನು ಸೂರ್ಯ ನೂ ಗುರಾಣಿಯೂ ಆಗಿದ್ದಾನೆ; ಕರ್ತನು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾನೆ; ಸಂಪೂರ್ಣವಾಗಿ ನಡೆದುಕೊಳ್ಳುವವರಿಗೆ ಆತನು ಯಾವ ಒಳ್ಳೇದನ್ನು ಹಿಂದೆಗೆಯುವದಿಲ್ಲ.

12ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.

Chapter Complete

You have read Psalms 84

12 verses