Lumina
Psalms

Shepherd of Israel

Psalms 80·Kannada Bible

11 ಯೋಸೇಫ್ಯರನ್ನು ಮಂದೆಯಂತೆ ನಡಿಸುವಾತನೇ, ಇಸ್ರಾಯೇಲ್ಯರ ಕುರುಬನೇ, ಕಿವಿಗೊಡು; ಕೆರೂಬಿಗಳ ಮಧ್ಯದಲ್ಲಿ ವಾಸಿಸುವಾತನೇ, ಪ್ರಕಾಶಿಸು.

2ಎಫ್ರಾಯಾಮ್‌ ಬೆನ್ಯಾವಿಾನ್‌ ಮನಸ್ಸೆ ಯರ ಮುಂದೆ ನಿನ್ನ ಪರಾಕ್ರಮವನ್ನು ತೋರಿಸಿ ನಮ್ಮನ್ನು ರಕ್ಷಿಸು.

3ಓ ದೇವರೇ, ನಮ್ಮನ್ನು ಮತ್ತೆ ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸುವಂತೆ ಮಾಡು; ಆಗ ನಾವು ರಕ್ಷಿಸಲ್ಪಡುವೆವು.

4ಸೈನ್ಯಗಳ ದೇವರಾದ ಓ ಕರ್ತನೇ, ಎಷ್ಟರವರೆಗೆ ನಿನ್ನ ಜನರ ಪ್ರಾರ್ಥನೆಗೆ ವಿರೋಧವಾಗಿ ಕೋಪ ಗೊಳ್ಳುತ್ತೀ?

5ಕಣ್ಣೀರಿನ ರೊಟ್ಟಿಯನ್ನು ಅವರಿಗೆ ತಿನ್ನಿಸಿ, ದೊಡ್ಡ ಅಳತೆಯಿಂದ ಕಣ್ಣೀರನ್ನು ಕುಡಿಯಲು ಕೊಡುತ್ತೀ.

Psalms 80 illustration - Psalms Chapter 80

6ನಮ್ಮ ನೆರೆಯವರಿಗೆ ನೀನು ನಮ್ಮನ್ನು ವಿವಾದಕ್ಕೆ ಕಾರಣ ಮಾಡುತ್ತೀ; ನಮ್ಮ ಶತ್ರುಗಳು ತಮ್ಮಲ್ಲಿ ತಾವೇ ನಗುತ್ತಾರೆ.

7ಸೈನ್ಯಗಳ ಓ ದೇವರೇ, ನೀನು ನಮ್ಮನ್ನು ಮತ್ತೆ ತಿರಿಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.

8ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ.

9ಅದರ ಮುಂದೆ ಸ್ಥಳ ಸಿದ್ಧಮಾಡಿದಿ; ಆಗ ಅದು ಬೇರೂರಿ ದೇಶವನ್ನು ತುಂಬಿತು.

10ಅದರ ನೆರಳಿನಿಂದ ಬೆಟ್ಟ ಗಳೂ ಕೊಂಬೆಗಳಿಂದ ದೇವದಾರುಗಳೂ ಮುಚ್ಚಲ್ಪ ಟ್ಟವು.

Psalms 80 illustration - Psalms Chapter 80

11ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು.

12ಮಾರ್ಗ ದಲ್ಲಿ ಹಾದು ಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಯಾಕೆ ಅದರ ಬೇಲಿಗಳನ್ನು ನೀನು ಮುರಿದು ಬಿಟ್ಟಿದ್ದೀ?

13ಅಡವಿಯಿಂದ ಬಂದ ಹಂದಿಯು ಅದನ್ನು ಹಾಳುಮಾಡುತ್ತದೆ ಕಾಡಿನ ಮೃಗವು ಅದನ್ನು ಮೇಯ್ದು ಬಿಡುತ್ತದೆ.

14ಓ ಸೈನ್ಯಗಳ ದೇವರೇ, ತಿರುಗಿಕೋ ಎಂದು ನಾವು ನಿನ್ನನ್ನು ಬೇಡುತ್ತೇವೆ. ಆಕಾಶದಿಂದ ದೃಷ್ಟಿಸಿ ನೋಡು; ಈ ದ್ರಾಕ್ಷೇಗಿಡವನ್ನೂ

15ನಿನ್ನ ಬಲಗೈ ನೆಟ್ಟ ಸಸಿಯನ್ನೂ ನೀನು ನಿನಗೆ ಬಲಪಡಿಸಿ ಕೊಂಡ ಕೊಂಬೆಯನ್ನೂ ಪರಾಮರಿಸು.

Psalms 80 illustration - Psalms Chapter 80

16ಅದು ಈಗ ಕೊಯ್ಯಲ್ಪಟ್ಟು ಬೆಂಕಿಯಿಂದ ಸುಡಲ್ಪಟ್ಟಿದೆ; ನಿನ್ನ ಬಾಯಿ ಗದರಿಕೆಯಿಂದ ಅವರು ನಾಶವಾಗುತ್ತಾರೆ.

17ನಿನ್ನ ಬಲಗೈ ಮನುಷ್ಯನ ಮೇಲೆ ಹೌದು, ನೀನು ನಿನಗೆ ಬಲಪಡಿಸಿಕೊಂಡ ಮನುಷ್ಯ ಪುತ್ರನ ಮೇಲೆ ನಿನ್ನ ಕೈ ಇರಲಿ.

18ಆಗ ನಾವು ನಿನ್ನಿಂದ ಹಿಂದಿರು ಗುವದಿಲ್ಲ; ನಮ್ಮನ್ನು ಬದುಕಿಸು, ಆಗ ನಿನ್ನ ಹೆಸರನ್ನು ಕರೆಯುವೆವು.

19ಸೈನ್ಯಗಳ ದೇವರಾದ ಓ ಕರ್ತನೇ, ಮತ್ತೆ ನಮ್ಮನ್ನು ತಿರುಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.

Chapter Complete

You have read Psalms 80

19 verses