Lumina
Psalms

God the Judge

Psalms 75·Kannada Bible

1ನಿನ್ನನ್ನು ಕೊಂಡಾಡುತ್ತೇವೆ; ಓ ದೇವರೇ, ನಿನ್ನನ್ನು ಕೊಂಡಾಡುತ್ತೇವೆ; ಪ್ರಕಟ ವಾಗುವ ನಿನ್ನ ಅದ್ಭುತ ಕಾರ್ಯಗಳಿಗೆ ನಿನ್ನ ನಾಮವು ಸವಿಾಪವಾಗಿದೆ.

2ನಾನು ಸಭೆಯನ್ನು ಅಂಗೀಕರಿಸು ವಾಗ ಸರಿಯಾಗಿ ನ್ಯಾಯತೀರಿಸುವೆನು;

3ಭೂಮಿಯೂ ಅದರ ನಿವಾಸಿಗಳೆಲ್ಲರೂ ಕರಗಿದ್ದಾರೆ; ನಾನು ಅದರ ಸ್ಥಂಭಗಳನ್ನು ನಿಲ್ಲಿಸುತ್ತೇನೆ ಸೆಲಾ.

4ಮೂರ್ಖತನದಿಂದ ವರ್ತಿಸಬೇಡಿರಿ ಎಂದು ಮೂರ್ಖರಿಗೆ ಹೇಳುತ್ತೇನೆ. ಕೊಂಬು ಎತ್ತಬೇಡಿರಿ ಎಂದು ದುಷ್ಟರಿಗೆ ಹೇಳಿದೆನು.

5ನಿಮ್ಮ ಕೊಂಬನ್ನು ಉನ್ನತಕ್ಕೆ ಎತ್ತಬೇಡಿರಿ; ಬೊಗ್ಗದ ಕುತ್ತಿಗೆಯಿಂದ ಮಾತಾಡಬೇಡಿರಿ.

Psalms 75 illustration - Psalms Chapter 75

6ಉದ್ಧಾರವು ಮೂಡಣದಿಂದಲೂ ಪಡುವಣದಿಂದಲೂ ಅಲ್ಲ; ಇಲ್ಲವೆ ದಕ್ಷಿಣದಿಂದಲೂ ಬರುವದಿಲ್ಲ.

7ಆದರೆ ದೇವರು ನ್ಯಾಯತೀರಿಸುವಾ ತನಾಗಿದ್ದಾನೆ; ಒಬ್ಬನನ್ನು ತಗ್ಗಿಸುತ್ತಾನೆ; ಇನ್ನೊಬ್ಬನನ್ನು ಎತ್ತುತ್ತಾನೆ.

8ಕರ್ತನ ಕೈಯಲ್ಲಿ ಪಾತ್ರೆಯು ಉಂಟು; ದ್ರಾಕ್ಷಾರಸವು ಕೆಂಪಾಗಿದೆ. ಕಲಬೆರಿಕೆಯಿಂದ ತುಂಬಿ ಅದೆ; ಅದರಿಂದ ಆತನು ಹೊಯ್ಯುತ್ತಾನೆ; ಅದರ ಮಡ್ಡಿಯನ್ನು ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.

9ಆದರೆ ನಾನು ಎಂದೆಂದಿಗೂ ಪ್ರಕಟಿಸುವೆನು, ಯಾಕೋಬನ ದೇವರ ಸ್ತುತಿಗಳನ್ನು ಹಾಡುವೆನು;

10ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳು ಎತ್ತಲ್ಪಡುವವು.

Chapter Complete

You have read Psalms 75

10 verses