Lumina
Psalms

Until I Entered the Sanctuary

Psalms 73·Kannada Bible

1ನಿಜವಾಗಿ ದೇವರು ಇಸ್ರಾಯೇಲಿಗೂ ಶುದ್ಧ ಹೃದಯದವರಿಗೂ ಒಳ್ಳೆಯವನು.

2ನನ್ನ ಪಾದಗಳ ಮಟ್ಟಿಗಾದರೋ ಅವು ತಪ್ಪುವ ಹಾಗಿದ್ದವು, ನನ್ನ ಹೆಜ್ಜೆಗಳು ಜಾರುವದಕ್ಕೆ ಬಹು ಸವಿಾಪವಾಗಿದ್ದವು.

3ದುಷ್ಟರ ಅಭಿವೃದ್ಧಿಯನ್ನು ನೋಡಿದಾಗ ಮೂರ್ಖರ ಮೇಲೆ ಹೊಟ್ಟೇಕಿಚ್ಚು ಪಟ್ಟೆನು.

4ಅವರ ಮರಣಕ್ಕೆ ಬಂಧನಗಳು ಇಲ್ಲ; ಅವರ ತ್ರಾಣವು ಸ್ಥಿರವಾಗಿದೆ.

5ಬೇರೆ ಮನುಷ್ಯರಂತೆ ಅವರು ಕಷ್ಟದಲ್ಲಿಲ್ಲ. ಇಲ್ಲವೆ ಬೇರೆ ಮನುಷ್ಯರ ಹಾಗೆ ಅವರಿಗೆ ವ್ಯಾಧಿಯೂ ಇಲ್ಲ;

Psalms 73 illustration - Psalms Chapter 73

6ಆದದರಿಂದ ಗರ್ವವು ಅವರಿಗೆ ಕಂಠಮಾಲೆಯಂತೆ ಅವರನ್ನು ಸುತ್ತಿದೆ, ಬಲಾತ್ಕಾರವು ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತದೆ.

7ಅವರ ಕಣ್ಣುಗಳು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ಹೃದಯವು ಆಶಿಸುವದಕ್ಕಿಂತಲೂ ಹೆಚ್ಚಾಗಿ ಅವರಿಗೆ ಇವೆ.

8ಅವರು ಕೆಟ್ಟುಹೋದವರು. ಸಂಕಟ ಪಡುವವರ ವಿಷಯ ಕೆಟ್ಟದ್ದಾಗಿಯೂ ಗರ್ವದಿಂದಲೂ ಮಾತನಾಡುತ್ತಾರೆ.

9ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು.

10ಆದದರಿಂದ ಅವನ ಜನರು ಇಲ್ಲಿಗೆ ತಿರುಗಿ ಕೊಳ್ಳುತ್ತಾರೆ; ಅವರಿಗೆ ಪಾನವು ಯಥೇಚ್ಚವಾಗಿ ದೊರೆಯುತ್ತದೆ.

Psalms 73 illustration - Psalms Chapter 73

11ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ.

12ಇಗೋ, ಇಹಲೋಕದಲ್ಲಿ ವೃದ್ಧಿಯಾಗುವ ದುಷ್ಟರು ಇವರೇ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.

13ನಿಶ್ಚಯವಾಗಿ ನನ್ನ ಹೃದಯವನ್ನು ವ್ಯರ್ಥವಾಗಿ ನಿರ್ಮಲ ಮಾಡಿಕೊಂಡು ನನ್ನ ಕೈಗಳನ್ನು ನಿರಪರಾಧ ದಲ್ಲಿ ತೊಳೆದಿದ್ದೇನೆ.

14ನಾನು ದಿನವೆಲ್ಲಾ ವ್ಯಾಧಿ ಪೀಡಿತನಾಗಿದ್ದೇನೆ; ಪ್ರತಿ ಉದಯದಲ್ಲಿ ನನಗೆ ಶಿಕ್ಷೆ ಯಾಯಿತು.

15ಹೀಗೆ ನಾನು ಮಾತನಾಡುವೆನೆಂದು ಹೇಳಿದರೆ, ಇಗೋ, ನಿನ್ನ ಮಕ್ಕಳ ವಂಶಕ್ಕೆ ವಿರೋಧ ವಾಗಿ ಆತಂಕ ಮಾಡುವೆನು.

Psalms 73 illustration - Psalms Chapter 73

16ಇದನ್ನು ತಿಳಿಯು ವದಕ್ಕೆ ನಾನು ಯೋಚಿಸಿದಾಗ, ನಾನು ದೇವರ ಪರಿಶುದ್ಧ ಸ್ಥಳಗಳಿಗೆ ಬರುವ ವರೆಗೆ

17ಅದು ನನ್ನ ದೃಷ್ಟಿಗೆ ಕಷ್ಟವಾಗಿತ್ತು. ಅವರ ಅಂತ್ಯವನ್ನು ಗ್ರಹಿಸಿ ಕೊಂಡೆನು.

18ನಿಶ್ಚಯವಾಗಿ ನೀನು ಅವರನ್ನು ಜಾರುವ ಸ್ಥಳಗಳಲ್ಲಿ ಇಟ್ಟಿದ್ದೀ; ಅವರನ್ನು ನಾಶನಕ್ಕೆ ಕೆಳಗೆ ದೊಬ್ಬಿದ್ದೀ.

19ಕ್ಷಣಮಾತ್ರದಲ್ಲಿ ಹೀಗೆ ನಾಶನಕ್ಕೆ ಅವರನ್ನು ಬರಮಾಡಿದಿ. ಅವರು ದಿಗಿಲುಗಳಿಂದ ಸಂಪೂರ್ಣವಾಗಿ ನಾಶವಾಗಿದ್ದಾರೆ.

20ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ.

Psalms 73 illustration - Psalms Chapter 73

21ಹೀಗೆ ನನ್ನ ಹೃದಯವು ವ್ಯಥೆಗೊಂಡಾಗ ನನ್ನ ಅಂತರಿಂದ್ರಿಯಗಳಿಗೆ ತಿವಿಯಲ್ಪಟ್ಟವು.

22ಆಗ ನಾನು ಮೂರ್ಖನಾಗಿ ಏನೂ ತಿಳಿಯದೆ ನಿನ್ನ ಮುಂದೆ ಪಶು ವಿನಂತೆ ಇದ್ದೆನು.

23ಆದಾಗ್ಯೂ ನಾನು ನಿನ್ನ ಸಂಗಡ ಯಾವಾಗಲೂ ಇದ್ದೇನೆ; ನೀನು ನನ್ನ ಬಲಗೈಯನ್ನು ಹಿಡಿದಿದ್ದೀ.

24ನಿನ್ನ ಆಲೋಚನೆಯಂತೆ ನನ್ನನ್ನು ನಡಿಸಿದ ತರು ವಾಯ ಮಹಿಮೆಗೆ ನನ್ನನ್ನು ಅಂಗೀಕರಿಸುವಿ.

25ಪರ ಲೋಕದಲ್ಲಿ ನನಗೆ ನೀನಲ್ಲದೆ ಮತ್ತಾರಿದ್ದಾರೆ? ನಿನ್ನ ಹೊರತಾಗಿ ಭೂಮಿಯಲ್ಲಿ ನಾನು ಅಪೇಕ್ಷಿಸುವವರು ಯಾರೂ ಇಲ್ಲ.

Psalms 73 illustration - Psalms Chapter 73

26ನನ್ನ ಮಾಂಸವೂ ಹೃದಯವೂ ಕುಂದುತ್ತದೆ; ಆದರೆ ದೇವರು ಯುಗಯುಗಕ್ಕೂ ನನ್ನ ಹೃದಯದ ಬಲವೂ ಪಾಲೂ ಆಗಿದ್ದಾನೆ.

27ಇಗೋ, ನಿನಗೆ ದೂರವಾಗಿರುವವರು ನಾಶವಾಗುವರು, ನಿನ್ನನ್ನು ಬಿಟ್ಟು ಜಾರತ್ವ ಮಾಡುವವರೆಲ್ಲ ರನ್ನು ಸಂಹರಿಸಿದ್ದೀ.

28ನನಗಾದರೋ ದೇವರ ಸವಿಾಪಕ್ಕೆ ಬರುವದೇ ಒಳ್ಳೇದಾಗಿದೆ; ನಿನ್ನ ಕ್ರಿಯೆ ಗಳನ್ನೆಲ್ಲಾ ಸಾರುವದಕ್ಕೆ ಕರ್ತನಾದ ದೇವರಲ್ಲಿ ನನ್ನ ಭರವಸವನ್ನು ಇಟ್ಟಿದ್ದೇನೆ.

Chapter Complete

You have read Psalms 73

28 verses