Lumina
Psalms

Morning Prayer of Trust

Psalms 3·Kannada Bible

1ಕರ್ತನೇ, ನನ್ನನ್ನು ಕಳವಳಪಡಿಸುವವರು ಹೆಚ್ಚಿದ್ದಾರೆ! ನನಗೆ ವಿರೋಧವಾಗಿ ಏಳುವವರು ಅನೇಕರು.

2ದೇವರಲ್ಲಿ ಇವನಿಗೆ ಯಾವ ಸಹಾಯವೂ ಇಲ್ಲವೆಂದು ನನ್ನ ವಿಷಯದಲ್ಲಿ ಅನೇಕರು ಹೇಳುತ್ತಾರೆ. ಸೆಲಾ.

3ಆದರೆ ಓ ನನ್ನ ಕರ್ತನೇ, ನನಗೆ ಗುರಾಣಿಯೂ ನನ್ನ ಘನವೂ ನನ್ನ ತಲೆ ಎತ್ತುವವನೂ ನೀನೇ.

4ನನ್ನ ಧ್ವನಿಯೆತ್ತಿ ಕರ್ತನಿಗೆ ಮೊರೆಯಿಟ್ಟೆನು; ಆತನು ತನ್ನ ಪರಿಶುದ್ಧ ಪರ್ವತದಿಂದ ನನ್ನ ಮೊರೆಯನ್ನು ಕೇಳಿದನು. ಸೆಲಾ.

5ಕರ್ತನೇ ನನ್ನನ್ನು ಕಾಪಾಡಿದ್ದರಿಂದ ನಾನು ಮಲಗಿ ನಿದ್ದೆಗೈದು ಎಚ್ಚತ್ತೆನು.

Psalms 3 illustration - Psalms Chapter 3

6ನನಗೆ ವಿರೋಧವಾಗಿ ಸುತ್ತಲೂ ಮುತ್ತಿದ ಹತ್ತು ಸಾವಿರ ಜನರಿಗೆ ಭಯಪಡೆನು.

7ಓ ಕರ್ತನೇ, ಏಳು; ಓ ನನ್ನ ದೇವರೇ, ನನ್ನನ್ನು ರಕ್ಷಿಸು. ನೀನು ನನ್ನ ಶತ್ರುಗಳೆಲ್ಲರ ದವಡೆಯ ಮೇಲೆ ಹೊಡೆದು ಭಕ್ತಿಹೀನರ ಹಲ್ಲುಗಳನ್ನು ಮುರಿದಿದ್ದೀ.

8ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು. ಸೆಲಾ.

Chapter Complete

You have read Psalms 3

8 verses