Lumina
Psalms

Prayer for the King

Psalms 20·Kannada Bible

1ಕರ್ತನು ಇಕ್ಕಟ್ಟಿನ ದಿವಸದಲ್ಲಿ ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ಹೆಸರು ನಿನ್ನನ್ನು ಕಾಪಾಡಲಿ.

2ಪರಿಶುದ್ಧ ಸ್ಥಳದೊಳಗಿಂದ ನಿನಗೆ ಸಹಾಯ ಕಳುಹಿಸಲಿ; ಚೀಯೋ ನಿನಿಂದ ನಿನ್ನನ್ನು ಬಲಪಡಿಸಲಿ.

3ನಿನ್ನ ಅರ್ಪಣೆಗಳನ್ನೆಲ್ಲಾ ಜ್ಞಾಪಕಮಾಡಿ ನಿನ್ನ ದಹನಬಲಿಯನ್ನು ಅಂಗೀಕರಿಸಲಿ. ಸೆಲಾ.

4ನಿನ್ನ ಸ್ವಂತ ಹೃದಯದ ಪ್ರಕಾರ ನಿನಗೆ ಕೊಡಲಿ; ನಿನ್ನ ಆಲೋ ಚನೆಯನ್ನೆಲ್ಲಾ ಪೂರೈಸಲಿ.

5ನಾವು ನಿನ್ನ ರಕ್ಷಣೆಯಲ್ಲಿ ಹರ್ಷಿಸಿ ನಮ್ಮ ದೇವರ ಹೆಸರಿನಲ್ಲಿ ಧ್ವಜ ಎತ್ತುವೆವು; ಕರ್ತನು ನಿನ್ನ ಬಿನ್ನಹಗಳನ್ನೆಲ್ಲಾ ಪೂರೈ ಸಲಿ.

Psalms 20 illustration - Psalms Chapter 20

6ಕರ್ತನು ತನ್ನ ಅಭಿಷಕ್ತನನ್ನು ರಕ್ಷಿಸುತ್ತಾ ನೆಂದೂ ತನ್ನ ಪರಿಶುದ್ಧ ಪರಲೋಕದೊಳಗಿಂದ ತನ್ನ ಬಲಗೈಯ ರಕ್ಷಣಕರವಾದ ಪರಾಕ್ರಮದಿಂದ ಅವನಿಗೆ ಉತ್ತರ ಕೊಡುವನೆಂದೂ ಈಗ ನಾನು ಬಲ್ಲೆನು.

7ಕೆಲವರು ರಥಗಳಲ್ಲಿಯೂ ಕೆಲವರು ಕುದುರೆಗಳ ಲ್ಲಿಯೂ ಭರವಸವಿಡುತ್ತಾರೆ; ಆದರೆ ನಾವು ನಮ್ಮ ದೇವರಾದ ಕರ್ತನ ಹೆಸರನ್ನು ಜ್ಞಾಪಕಮಾಡುತ್ತೇವೆ.

8ಅವರು ಬೊಗ್ಗಿ ಬೀಳುತ್ತಾರೆ; ಆದರೆ ನಾವು ಎದ್ದು ನಿಂತುಕೊಳ್ಳುತ್ತೇವೆ.

9ಕರ್ತನೇ, ರಕ್ಷಿಸು; ನಾವು ಕರೆ ಯುವಾಗ ಅರಸನು ನಮಗೆ ಉತ್ತರ ಕೊಡಲಿ.

Chapter Complete

You have read Psalms 20

9 verses