Lumina
Psalms

Who Shall Abide?

Psalms 15·Kannada Bible

1ಕರ್ತನೇ, ನಿನ್ನ ಗುಡಾರದಲ್ಲಿ ತಂಗುವವನು ಯಾರು? ನಿನ್ನ ಪರಿಶುದ್ಧ ಪರ್ವತ ದಲ್ಲಿ ವಾಸಮಾಡುವವನು ಯಾರು?

2ಯಥಾರ್ಥವಾಗಿ ನಡೆದು ನೀತಿಯನ್ನು ನಡಿಸಿ ತನ್ನ ಹೃದಯದಲ್ಲಿ ಸತ್ಯವನ್ನಾಡುವವನೇ.

3ಅವನು ತನ್ನ ನಾಲಿಗೆಯಿಂದ ಚಾಡಿ ಹೇಳುವದಿಲ್ಲ; ತನ್ನ ನೆರೆಯವನನ್ನು ನಿಂದಿಸು ವದಿಲ್ಲ;

4ಅವನ ಕಣ್ಣುಗಳಿಗೆ ನೀಚನು ತಿರಸ್ಕರಿಸಲ್ಪ ಟ್ಟಿದ್ದಾನೆ. ಆದರೆ ಕರ್ತನಿಗೆ ಭಯಪಡುವವರನ್ನು ಗೌರವಿಸುತ್ತಾನೆ, ಆಣೆಯಿಂದ ನಷ್ಟವಾದರೂ ಬದಲಾ ಯಿಸದವನು.

5ತನ್ನ ಹಣವನ್ನು ಬಡ್ಡಿಗೆ ಕೊಡುವದಿಲ್ಲ; ನಿರಪರಾಧಿಗೆ ವಿರೋಧವಾಗಿ ಲಂಚ ತಕ್ಕೊಳ್ಳುವದಿಲ್ಲ. ಇವುಗಳನ್ನು ಮಾಡುವವನು ಎಂದೆಂದಿಗೂ ಕದಲದೆ ಇರುವನು.

Chapter Complete

You have read Psalms 15

5 verses