Lumina
Psalms

His Mercy Endureth For Ever

Psalms 136·Kannada Bible

1ಕರ್ತನನ್ನು ಕೊಂಡಾಡಿರಿ, ಆತನು ಒಳ್ಳೆಯವನು; ಆತನ ಕರುಣೆಯು ಎಂದೆಂದಿಗೂ ಅದೆ.

2ದೇವರುಗಳ ದೇವರನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

3ಕರ್ತರ ಕರ್ತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

4ಒಬ್ಬನಾಗಿ ದೊಡ್ಡ ಅದ್ಭುತಗಳನ್ನು ಮಾಡುವಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

5ಆಕಾಶ ವನ್ನು ಜ್ಞಾನದಿಂದ ಉಂಟುಮಾಡಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

Psalms 136 illustration - Psalms Chapter 136

6ಭೂಮಿಯನ್ನು ನೀರಿನ ಮೇಲೆ ಹಾಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

7ದೊಡ್ಡ ಬೆಳಕುಗಳನ್ನು ಉಂಟು ಮಾಡಿದಾತ ನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

8ಹಗಲನ್ನು ಆಳುವದಕ್ಕೆ ಸೂರ್ಯನನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

9ಇರುಳನ್ನು ಆಳುವದಕ್ಕೆ ಚಂದ್ರ ನಕ್ಷತ್ರಗಳನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

10ಐಗುಪ್ತದ ಚೊಚ್ಚಲಾದವುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

Psalms 136 illustration - Psalms Chapter 136

11ಇಸ್ರಾಯೇಲನನ್ನು ಅವರ ಮಧ್ಯದಲ್ಲಿಂದ ಹೊರಗೆ ಬರಮಾಡಿದಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.

12ಬಲವಾದ ಕೈಯಿಂ ದಲೂ ಚಾಚಿದ ತೋಳಿನಿಂದಲೂ ಅವರನ್ನು ಹೊರಗೆ ತಂದನು; ಆತನ ಕರುಣೆಯು ಎಂದೆಂದಿಗೂ ಅದೆ.

13ಕೆಂಪು ಸಮುದ್ರವನ್ನು ವಿಭಾಗಿಸಿದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

14ಇಸ್ರಾಯೇಲನ್ನು ಅದರ ನಡುವೆ ನಡಿಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

15ಫರೋಹನನ್ನೂ ಅವನ ಸೈನ್ಯವನ್ನೂ ಕೆಂಪು ಸಮು ದ್ರದಲ್ಲಿ ಕೆಡವಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

Psalms 136 illustration - Psalms Chapter 136

16ತನ್ನ ಜನರನ್ನು ಅರಣ್ಯದಲ್ಲಿ ನಡೆಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

17ದೊಡ್ಡ ಅರಸುಗಳನ್ನು ಹೊಡೆದಾತನನ್ನು ಕೊಂಡಾ ಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

18ಪ್ರಸಿ ದ್ಧರಾದ ಅರಸುಗಳನ್ನು ಕೊಂದುಹಾಕಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

19ಅಮೋರಿಯರ ಅರಸನಾದ ಸೀಹೋನನು ಒಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ.

20ಬಾಷಾ ನಿನ ಅರಸನಾದ ಓಗನೊಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ.

Psalms 136 illustration - Psalms Chapter 136

21ಅವರ ದೇಶವನ್ನು ಬಾಧ್ಯತೆ ಯಾಗಿ ಕೊಟ್ಟಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.

22ತನ್ನ ಸೇವಕನಾದ ಇಸ್ರಾಯೇಲಿಗೆ ಅದು ಬಾಧ್ಯತೆಯಾಗಿದೆ; ಆತನ ಕರುಣೆಯು ಎಂದೆಂದಿಗೂ ಅದೆ.

23ನಮ್ಮ ದೀನಸ್ಥಿತಿಯಲ್ಲಿ ನಮ್ಮನ್ನು ನೆನಸಿ ಕೊಂಡಾ ತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂ ದಿಗೂ ಅದೆ.

24ನಮ್ಮ ವೈರಿಗಳಿಂದ ನಮ್ಮನ್ನು ಬಿಡಿ ಸಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

25ಮನುಷ್ಯರಿಗೆಲ್ಲಾ ಆಹಾರ ಕೊಡುವಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

Psalms 136 illustration - Psalms Chapter 136

26ಪರಲೋಕದ ದೇವರನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.

Chapter Complete

You have read Psalms 136

26 verses