1ಇಸ್ರಾಯೇಲ್ ಈಗ ಹೇಳುವದೇನಂದರೆ: ಕರ್ತನು ನಮ್ಮ ಪಕ್ಷ ಇಲ್ಲದಿದ್ದರೆ,
2ಮನುಷ್ಯರು ನಮಗೆ ವಿರೋಧವಾಗಿ ಏಳುವಾಗ, ಕರ್ತನು ನಮಗಿಲ್ಲದಿದ್ದರೆ ನಮ್ಮ ಮೇಲೆ ಅವರ ಕೋಪವು ಉರಿದು,
3ಅವರು ನಮ್ಮನ್ನು ಜೀವಿತರಾಗಿ ನುಂಗಿಬಿಡುತ್ತಿದ್ದರು.
4ಆಗ ನೀರುಗಳು ನಮ್ಮನ್ನು ಮುಣುಗಿಸುತ್ತಿದ್ದವು; ತೊರೆಯು ನಮ್ಮ ಪ್ರಾಣದ ಮೇಲೆ ಹರಿಯುತ್ತಿತ್ತು.
5ಆಗ ನಮ್ಮ ಪ್ರಾಣದ ಮೇಲೆ ಗರ್ವದ ನೀರುಗಳು ಹರಿಯುತ್ತಿ ದ್ದವು.

6ಆದರೆ ನಮ್ಮನ್ನು ಅವರ ಹಲ್ಲುಗಳಿಗೆ ಬೇಟೆ ಯಾಗಿ ಕೊಡದೆ ಇದ್ದ ಕರ್ತನಿಗೆ ಸ್ತೋತ್ರವಾಗಲಿ.
7ನಮ್ಮ ಪ್ರಾಣವು ಪಕ್ಷಿಯ ಹಾಗೆ ಬೇಟೆಗಾರರ ಉರ್ಲಿನಿಂದ ತಪ್ಪಿಸಿಕೊಂಡಿತು; ಬಲೆಯು ಹರಿಯಿತು; ನಾವು ತಪ್ಪಿಸಿಕೊಂಡೆವು.
8ನಮ್ಮ ಸಹಾಯವು ಆಕಾ ಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನ ಹೆಸರಿನಲ್ಲಿ ಇದೆ.
You have read Psalms 124
8 verses