Lumina
Psalms

Sit Thou at My Right Hand

Psalms 110·Kannada Bible

1ಕರ್ತನು ನನ್ನ ಕರ್ತನಿಗೆ ಹೇಳಿದ್ದೇನೆಂದರೆ ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಪೀಠವಾಗಿ ಮಾಡುವ ತನಕ ನನ್ನ ಬಲ ಪಾರ್ಶ್ವದಲ್ಲಿ ಕುಳಿತುಕೋ,

2ನಿನ್ನ ಬಲಕ್ಕಾಗಿ ಚೀಯೋ ನಿನಿಂದ ಕರ್ತನು ದಂಡವನ್ನು ಕಳುಹಿಸುವನು; ನಿನ್ನ ಶತ್ರುಗಳ ಮಧ್ಯದಲ್ಲಿ ದೊರೆತನಮಾಡು.

3ಪರಿಶುದ್ಧ ತೆಯ ಸೌಂದರ್ಯಗಳಲ್ಲಿ ಉದಯದ ಗರ್ಭದಲ್ಲಿಂದ ನಿನ್ನ ಜನರು ಬಲದ ದಿವಸದಲ್ಲಿ ಸ್ವಇಷ್ಟವುಳ್ಳವ ರಾಗಿರುವರು; ಇಬ್ಬನಿಯಂತೆ ನಿನ್ನ ಯೌವನವು ನಿನಗೆ ಇರುವದು.

4ನೀನು ಎಂದೆಂದಿಗೂ ಮೆಲ್ಕೀಜೆದೇಕನ ತರದ ಯಾಜಕನಾಗಿದ್ದೀ ಎಂದು ಕರ್ತನು ಆಣೆಯಿಟ್ಟು ನುಡಿ ದಿದ್ದಾನೆ; ಪಶ್ಚಾತ್ತಾಪಪಡನು.

5ಕರ್ತನು ನಿನ್ನ ಬಲ ಪಾರ್ಶ್ವದಲ್ಲಿದ್ದು ತನ್ನ ಕೋಪದ ದಿವಸದಲ್ಲಿ ಅರಸ ರನ್ನು ಹೊಡೆಯುವನು.

Psalms 110 illustration - Psalms Chapter 110

6ಆತನು ಅನ್ಯಜನರಲ್ಲಿ ನ್ಯಾಯತೀರಿಸಿ ಹೆಣಗಳಿಂದ ತುಂಬಿಸುವನು; ಬಹು ದೇಶಗಳ ಮೇಲಿರುವ ತಲೆ ಗಳನ್ನು ಗಾಯಮಾಡುವನು.

7ದಾರಿಯಲ್ಲಿ ಹಳ್ಳದ ನೀರು ಕುಡಿಯುವನು; ಆದದರಿಂದ ಆತನು ತಲೆ ಎತ್ತುವನು.

Chapter Complete

You have read Psalms 110

7 verses