Lumina
Psalms

Praise Ye the LORD

Psalms 106·Kannada Bible

1ನೀವು ಕರ್ತನನ್ನು ಸ್ತುತಿಸಿರಿ, ಕರ್ತನಿಗೆ ಉಪಕಾರ ಸ್ತುತಿಮಾಡಿರಿ; ಆತನು ಒಳ್ಳೆಯವನು, ಆತನ ಕರುಣೆಯು ಶಾಶ್ವತ ವಾಗಿರುವದು.

2ಕರ್ತನ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸುವವನಾರು? ಆತನ ಸ್ತೋತ್ರಗಳನ್ನು ಪ್ರಸಿದ್ಧಿ ಪಡಿಸುವವನಾರು?

3ನ್ಯಾಯವನ್ನು ಕೈಕೊಂಡು ಎಲ್ಲಾ ಕಾಲದಲ್ಲಿ ನೀತಿಯನ್ನು ಮಾಡುವವರು ಧನ್ಯರು.

4ಓ ಕರ್ತನೇ, ನಿನ್ನ ಜನರ ಮೇಲಿರುವ ಕಟಾಕ್ಷದಿಂದ ನನ್ನನ್ನೂ ಜ್ಞಾಪಿಸಿಕೋ; ನಿನ್ನ ರಕ್ಷಣೆಯಿಂದ ನನ್ನನ್ನು ದರ್ಶಿಸು.

5ಕರ್ತನೇ, ನೀನು ಆದುಕೊಂಡವರ ಸುಖವನ್ನು ನಾನು ನೋಡಿ ನಿನ್ನ ಜನಾಂಗದ ಸಂತೋಷ ದೊಂದಿಗೆ ಸಂತೋಷಿಸಿ ನಿನ್ನ ಬಾಧ್ಯತೆಯ ಸಂಗಡ ಹೊಗಳಿಕೊಳ್ಳುವೆನು.

Psalms 106 illustration - Psalms Chapter 106

6ನಮ್ಮ ತಂದೆಗಳ ಸಂಗಡ ನಾವು ಪಾಪಮಾಡಿದ್ದೇವೆ, ಅಕ್ರಮಮಾಡಿದ್ದೇವೆ, ದುಷ್ಟತ್ವವನ್ನು ನಡಿಸಿದ್ದೇವೆ.

7ನಮ್ಮ ತಂದೆಗಳು ಐಗುಪ್ತದಲ್ಲಿ ನಿನ್ನ ಅದ್ಭುತಗಳನ್ನು ತಿಳಿಯದೆ ನಿನ್ನ ಕರುಣಾತಿಶಯವನ್ನು ನೆನಸದೆ, ಸಮುದ್ರದ ಬಳಿಯಲ್ಲಿ, ಅಂದರೆ ಕೆಂಪು ಸಮುದ್ರದ ಹತ್ತಿರ ನಿನಗೆ ತಿರುಗಿ ಬಿದ್ದರು.

8ಆದಾಗ್ಯೂ ಆತನು ತನ್ನ ಮಹಾಶಕ್ತಿಯನ್ನು ಅವರಿಗೆ ತಿಳಿಯ ಮಾಡುವ ಹಾಗೆ ತನ್ನ ಹೆಸರಿನ ನಿಮಿತ್ತ ಅವರನ್ನು ರಕ್ಷಿಸಿದನು.

9ಆತನು ಕೆಂಪು ಸಮುದ್ರವನ್ನು ಗದರಿಸಲು ಅದು ಒಣಗಿ ಹೋಯಿತು. ಹೀಗೆ ಜಲಾಗಾಧದಲ್ಲಿ, ಅರಣ್ಯ ದಲ್ಲಿದ್ದ ಹಾಗೆಯೇ ಆತನು ಅವರನ್ನು ನಡಿಸಿದನು.

10ವೈರಿಯ ಕೈಯೊಳಗಿಂದ ಅವರನ್ನು ರಕ್ಷಿಸಿ, ಶತ್ರು ವಿನ ಕೈಯಿಂದ ಅವರನ್ನು ಬಿಡುಗಡೆ ಮಾಡಿದನು.

Psalms 106 illustration - Psalms Chapter 106

11ನೀರುಗಳು ಅವರ ವೈರಿಗಳನ್ನು ಮುಚ್ಚಿಬಿಟ್ಟವು; ಅವರಲ್ಲಿ ಒಬ್ಬನಾದರೂ ಉಳಿಯಲಿಲ್ಲ.

12ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು.

13ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು.

14ಅರಣ್ಯದಲ್ಲಿ ದುರಾಶೆಯಿಂದ ಆಶಿಸಿ ಮರುಭೂಮಿ ಯಲ್ಲಿ ದೇವರನ್ನು ಪರೀಕ್ಷಿಸಿದರು.

15ಆಗ ಅವರ ಬೇಡಿಕೆಯಂತೆ ಅವರಿಗೆ ಆತನು ಕೊಟ್ಟನು; ಆದರೆ ಅವರ ಪ್ರಾಣದಲ್ಲಿ ಕ್ಷೀಣತೆಯನ್ನು ಕಳುಹಿಸಿದನು.

Psalms 106 illustration - Psalms Chapter 106

16ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ ಕರ್ತನ ಪರಿಶುದ್ದನಾದ ಆರೋನನ ಮೇಲೆಯೂ ಹೊಟ್ಟೇಕಿಚ್ಚು ಪಟ್ಟರು.

17ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು.

18ಬೆಂಕಿಯು ಅವರ ಗುಂಪಿನಲ್ಲಿ ಉರಿದು, ಜ್ವಾಲೆಯು ದುಷ್ಟರನ್ನು ಸುಟ್ಟಿತು.

19ಅವರು ಹೋರೇಬಿ ನಲ್ಲಿ ಕರುವನ್ನು ಮಾಡಿ ಎರಕದ ವಿಗ್ರಹಕ್ಕೆ ಅಡ್ಡ ಬಿದ್ದರು.

20ತಮ್ಮ ಘನವನ್ನು ಹುಲ್ಲು ತಿನ್ನುವ ಎತ್ತಿನ ರೂಪಕ್ಕೆ ಬದಲಾಯಿಸಿದರು.

Psalms 106 illustration - Psalms Chapter 106

21ತಮ್ಮ ರಕ್ಷಕನಾಗಿ ಐಗುಪ್ತದೇಶದಲ್ಲಿ ದೊಡ್ಡ ಕೆಲಸಗಳನ್ನೂ

22ಹಾಮನ ದೇಶದಲ್ಲಿ ಅದ್ಭುತಗಳನ್ನೂ ಕೆಂಪು ಸಮುದ್ರದ ಬಳಿ ಯಲ್ಲಿ ಭಯಂಕರವಾದವುಗಳನ್ನೂ ಮಾಡಿದ ದೇವ ರನ್ನು ಅವರು ಮರೆತರು.

23ಆದದರಿಂದ ಆತನು ಅವರನ್ನು ನಾಶಮಾಡುತ್ತೇನೆಂದು ಹೇಳಿದನು. ಆದರೆ ಆತನು ಆದುಕೊಂಡ ಮೋಶೆಯು ಆತನ ಕೋಪ ವನ್ನು ತಿರುಗಿಸುವ ಹಾಗೆ ಆಪತ್ತಿನಲ್ಲಿ ಆತನ ಮುಂದೆ ನಿಂತುಕೊಂಡನು.

24ಹೌದು, ಅವರು, ಮನೋಹರವಾದ ದೇಶ ವನ್ನು ಅಸಹ್ಯಿಸಿಬಿಟ್ಟು ಆತನ ಮಾತನ್ನು ನಂಬದೆ ಹೋದರು.

25ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ ಕರ್ತನ ಸ್ವರವನ್ನು ಕೇಳದೆ ಹೋದರು.

Psalms 106 illustration - Psalms Chapter 106

26ಆದದರಿಂದ ಅವರನ್ನು ಅರಣ್ಯದಲ್ಲಿ ಕೆಡವುವದಕ್ಕೂ

27ಅವರ ಸಂತತಿಯನ್ನು ಜನಾಂಗಗಳಲ್ಲಿ ಕೆಡವಿ, ಅವರನ್ನು ದೇಶಗಳಲ್ಲಿ ಚದರಿಸುವದಕ್ಕೂ ಆತನು ತನ್ನ ಕೈಯನ್ನು ಅವರ ಮೇಲೆತ್ತಿದನು.

28ಬಾಳ್‌ಪೆಗೊ ಯೋರಿಗೆ ಕೂಡಿಕೊಂಡು ಸತ್ತವರಿಗೆ ಅರ್ಪಿಸಿದ ಬಲಿಗಳನ್ನು ತಿಂದು

29ತಮ್ಮ ಕ್ರಿಯೆಗಳಿಂದ ಆತನಿಗೆ ಕೋಪವನ್ನು ಎಬ್ಬಿಸಿದರು; ಆದದರಿಂದ ವ್ಯಾಧಿಯು ಅವರಲ್ಲಿ ಹೊಕ್ಕಿತು.

30ಆಗ ಫೀನೆಹಾಸನು ನಿಂತು ಕೊಂಡು ನ್ಯಾಯತೀರಿಸಿದ್ದರಿಂದ ವ್ಯಾಧಿಯು ನಿಂತು ಹೋಯಿತು.

Psalms 106 illustration - Psalms Chapter 106

31ಇದು ತಲತಲಾಂತರಕ್ಕೂ ಯುಗ ಯುಗಕ್ಕೂ ಆತನಿಗೆ ನೀತಿಯೆಂದು ಎಣಿಸಲ್ಪಟ್ಟಿತು.

32ಅವರು ವಿವಾದದ ನೀರಿನ ಬಳಿಯಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು; ಅವರ ನಿಮಿತ್ತ ಮೋಶೆಗೆ ಕೇಡು ಬಂತು.

33ಅವರು ದೇವರಾತ್ಮನನ್ನು ಕೆಣ ಕಿದರು; ಆದದರಿಂದ ಅವನು ಬುದ್ಧಿಹೀನತೆಯಿಂದ ಮಾತನಾಡಿದನು.

34ಕರ್ತನು ಅವರಿಗೆ ಹೇಳಿದ ಜನಗಳನ್ನು ಅವರು ನಾಶಮಾಡದೆ ಹೋದರು.

35ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು.

Psalms 106 illustration - Psalms Chapter 106

36ಅವರ ವಿಗ್ರಹಗಳಿಗೆ ಸೇವೆ ಮಾಡಿದರು ಅವು ಅವರಿಗೆ ನೇಣು ಆದವು.

37ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು.

38ಇದಲ್ಲದೆ ತಮ್ಮ ಗಂಡು ಹೆಣ್ಣು ಮಕ್ಕಳ ನಿರಪರಾ ಧದ ರಕ್ತವನ್ನು ಚೆಲ್ಲಿ, ಕಾನಾನಿನ ವಿಗ್ರಹಗಳಿಗೆ ಅರ್ಪಿಸಿ; ದೇಶವನ್ನು ರಕ್ತದಿಂದ ಅಶುದ್ಧಮಾಡಿದರು.

39ಹೀಗೆ ತಮ್ಮ ಕೆಲಸಗಳಿಂದ ತಮ್ಮನ್ನು ಹೊಲೆಮಾಡಿಕೊಂಡು, ತಮ್ಮ ಕ್ರಿಯೆಗಳಿಂದ ಜಾರರಾದರು.

40ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು

Psalms 106 illustration - Psalms Chapter 106

41ಅವರನ್ನು ಅನ್ಯಜನಾಂಗಗಳ ಕೈಗೆಕೊಟ್ಟನು; ಅವರ ಹಗೆಯವರು ಅವರನ್ನು ಆಳಿದರು.

42ಅವರ ಶತ್ರುಗಳು ಅವರನ್ನು ಬಾಧೆಪಡಿಸಿದರು; ಅವರ ಕೈಕೆಳಗೆ ಅಧೀನರಾದರು.

43ಬಹಳ ಸಾರಿ ಆತನು ಅವರನ್ನು ಬಿಡಿಸಿದನು; ಆದರೆ ಅವರು ತಮ್ಮ ಆಲೋಚನೆಯಿಂದ ಆತನಿಗೆ ಕೋಪವನ್ನೆಬ್ಬಿಸಿದರು. ತಮ್ಮ ಅಕ್ರಮದಿಂದ ಅವರು ಕುಗ್ಗಿಹೋದರು.

44ಆದಾಗ್ಯೂ ಅವರ ಕೂಗನ್ನು ಆತನು ಕೇಳಿದಾಗ ಅವರ ಇಕ್ಕಟ್ಟಿನ ಮೇಲೆ ಲಕ್ಷ್ಯವಿಟ್ಟು

45ಅವರಿಗಾಗಿ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಂಡು ತನ್ನ ಅತಿಶಯವಾದ ಕರು ಣೆಯ ಪ್ರಕಾರ ಪಶ್ಚಾತ್ತಾಪಪಟ್ಟನು.

Psalms 106 illustration - Psalms Chapter 106

46ಅವರನ್ನು ಸೆರೆಹಿಡಿದವರ ಮುಂದೆ ಅವರು ಕರುಣೆ ಹೊಂದುವಂತೆ ಮಾಡಿದನು.

47ಓ ನಮ್ಮ ದೇವರಾದ ಕರ್ತನೇ, ನಾವು ನಿನ್ನ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ ನಿನ್ನ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸು. ಅನ್ಯಜನಾಂಗಗಳೊಳಗಿಂದ ನಮ್ಮನ್ನು ಹೊರಗೆ ಬರಮಾಡು.

48ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಾಂತರಕ್ಕೂ ಸ್ತುತಿಯುಂಟಾಗಲಿ. ಜನರೆಲ್ಲಾ ಆಮೆನ್‌ ಎಂದು ಹೇಳಲಿ. ನೀವು ಕರ್ತನನ್ನು ಸ್ತುತಿಸಿರಿ.

Chapter Complete

You have read Psalms 106

48 verses