Lumina
Proverbs

Righteousness Exalts a Nation

Proverbs 11·Kannada Bible

1ಮೋಸದ ತಕ್ಕಡಿ ಕರ್ತನಿಗೆ ಅಸಹ್ಯವಾಗಿದೆ; ನ್ಯಾಯದ ತೂಕ ಆತನ ಆನಂದವು.

2ಗರ್ವ ಬಂದಾಗ ನಾಚಿಕೆಯೂ ಬರುತ್ತದೆ; ದೀನರಲ್ಲಿ ಜ್ಞಾನವಿದೆ.

3ಯಥಾರ್ಥವಂತರ ಪ್ರಾಮಾಣಿಕತೆ ಅವರನ್ನು ನಡಿಸುವದು; ಅಪರಾಧದ ಮೂರ್ಖತನವು ಅವರನ್ನು ನಾಶಪಡಿಸುವದು.

4ಉಗ್ರತೆಯ ದಿನದಲ್ಲಿ ಐಶ್ವರ್ಯವು ಲಾಭಕರವಾಗುವದಿಲ್ಲ; ನೀತಿಯು ಮರಣ ದಿಂದ ಬಿಡಿಸುತ್ತದೆ.

5ಸಂಪೂರ್ಣನ ನೀತಿಯು ಅವನ ಮಾರ್ಗವನ್ನು ಸರಾಗಮಾಡುವದು; ದುಷ್ಟನು ತನ್ನ ದುಷ್ಟತ್ವದಿಂದಲೇ ಬೀಳುವನು.

Proverbs 11 illustration - Proverbs Chapter 11

6ಯಥಾರ್ಥವಂತರ ನೀತಿಯು ಅವರನ್ನು ಬಿಡಿಸುವದು; ತಮ್ಮ ಸ್ವಂತ ತುಂಟ ತನದಲ್ಲಿ ದೋಷಿಗಳು ಸಿಕ್ಕಿಬೀಳುವರು.

7ದುಷ್ಟನು ಸಾಯುವಾಗ ಅವನ ನಿರೀಕ್ಷೆಗಳು ಹಾಳಾಗುವವು; ಅನೀತಿವಂತನ ನಿರೀಕ್ಷೆಯು ನಾಶವಾಗುವದು.

8ನೀತಿವಂತನು ಇಕ್ಕಟ್ಟಿನಿಂದ ತಪ್ಪಿಸಿಕೊಳ್ಳುತ್ತಾನೆ; ಅವನ ಸ್ಥಳದಲ್ಲಿ ದುಷ್ಟನು ಬರುತ್ತಾನೆ.

9ಒಬ್ಬ ಕಪಟಿಯು ಬಾಯಿಂದ ತನ್ನ ನೆರೆಯವನನ್ನು ಹಾಳುಮಾಡುತ್ತಾನೆ; ತಿಳುವಳಿಕೆಯ ಮೂಲಕ ನೀತಿವಂತನು ಬಿಡಿಸಲ್ಪ ಡುವನು.

10ನೀತಿವಂತರು ಚೆನ್ನಾಗಿದ್ದರೆ ಪಟ್ಟಣವು ಉಲ್ಲಾಸಿಸುತ್ತದೆ; ದುಷ್ಟರು ನಾಶವಾದರೆ ಆರ್ಭಟವಿರು ತ್ತದೆ.

Proverbs 11 illustration - Proverbs Chapter 11

11ಯಥಾರ್ಥವಂತರ ಆಶೀರ್ವಾದದಿಂದ ಪಟ್ಟ ಣವು ಹೆಚ್ಚಿಸಲ್ಪಡುತ್ತದೆ. ದುಷ್ಟರ ಬಾಯಿಂದ ಅದು ಕೆಡವಲ್ಪಡುತ್ತದೆ.

12ಜ್ಞಾನವಿಲ್ಲದವನು ತನ್ನ ನೆರೆಯ ವನನ್ನು ಹೀನೈಸುತ್ತಾನೆ; ವಿವೇಕಿಯು ಮೌನವಾಗಿರು ತ್ತಾನೆ.

13ಚಾಡಿಕೋರನು ರಹಸ್ಯಗಳನ್ನು ಬಹಿರಂಗ ಪಡಿಸುತ್ತಾನೆ. ನಂಬಿಕೆಯ ಆತ್ಮವುಳ್ಳವನು ಸಂಗತಿಯನ್ನು ಮುಚ್ಚುತ್ತಾನೆ.

14ಆಲೋಚನೆ ಇಲ್ಲದಿರುವಲ್ಲಿ ಜನರು ಬೀಳುತ್ತಾರೆ; ಸಲಹೆಗಾರರ ಸಮೂಹದಲ್ಲಿ ಭದ್ರತೆ ಇದೆ.

15ಅನ್ಯನಿಗೆ ಹೊಣೆಯಾಗುವವನು ಹಾನಿಗೆ ಗುರಿಯಾಗುತ್ತಾನೆ; ಹೊಣೆಗಾರತ್ವವನ್ನು ಹಗೆಮಾಡಿ ಕೊಳ್ಳುವವನು ಭದ್ರವಾಗಿರುವನು.

Proverbs 11 illustration - Proverbs Chapter 11

16ಕೃಪೆಯುಳ್ಳ ಸ್ತ್ರೀಯು ತನ್ನ ಗೌರವವನ್ನು ಕಾಪಾಡಿಕೊಳ್ಳುತ್ತಾಳೆ. ಬಲಿಷ್ಠರು ಐಶ್ವರ್ಯವನ್ನು ಕಾಪಾಡಿಕೊಳ್ಳುತ್ತಾರೆ.

17ಕರುಣೆಯುಳ್ಳವನು ತನ್ನ ಪ್ರಾಣಕ್ಕೆ ಒಳ್ಳೇದನ್ನು ಮಾಡಿಕೊಳ್ಳುತ್ತಾನೆ; ಕಠೋರಿಯು ತನ್ನ ಶರೀರವನ್ನು ಬಾಧಿಸಿಕೊಳ್ಳುತ್ತಾನೆ.

18ದುಷ್ಟನು ಮೋಸದ ಕೃತ್ಯವನ್ನು ಮಾಡುತ್ತಾನೆ; ನೀತಿಯನ್ನು ಬಿತ್ತುವವನಿಗೆ ನಿಸ್ಸಂದೇಹ ವಾಗಿ ಬಹುಮಾನವಿರುವದು.

19ನೀತಿಯು ಜೀವಕ್ಕೆ ಒಲಿಯುತ್ತದೆ; ಕೆಟ್ಟದ್ದನ್ನು ಹಿಂದಟ್ಟುವವನು ತನ್ನ ಮರ ಣಕ್ಕೆ ಹಿಂದಟ್ಟುತ್ತಾನೆ.

20ಮೂರ್ಖ ಹೃದಯವುಳ್ಳವರು ಕರ್ತನಿಗೆ ಅಸಹ್ಯವಾದವರು; ತಮ್ಮ ಮಾರ್ಗದಲ್ಲಿ ಯಥಾರ್ಥವಾಗಿ ಇರುವವರು ಆತನ ಆನಂದವಾಗಿ ದ್ದಾರೆ.

Proverbs 11 illustration - Proverbs Chapter 11

21ಕೈಗೆ ಕೈ ಕೊಟ್ಟರೂ ದುಷ್ಟನು ಶಿಕ್ಷಿಸಲ್ಪಡದೆ ಇರುವದಿಲ್ಲ; ನೀತಿವಂತರ ವಂಶವು ತಪ್ಪಿಸಿಕೊಳ್ಳುವದು.

22ಹಂದಿಯ ಮೂಗಿನಲ್ಲಿರುವ ಬಂಗಾರದ ಒಡವೆಯು ಹೇಗೋ ಹಾಗೆಯೇ ವಿವೇಕವಿಲ್ಲದ ಸುಂದರವಾದ ಸ್ತ್ರೀಯು ಇರುವಳು.

23ನೀತಿವಂತರು ಒಳ್ಳೇಯದನ್ನು ಮಾತ್ರ ಅಪೇಕ್ಷಿಸುತ್ತಾರೆ; ದುಷ್ಟರ ಅಪೇಕ್ಷೆಯು ಕೋಪ ವಾಗಿದೆ.

24ಚದುರಿಸಿದಾಗ್ಯೂ ವೃದ್ಧಿಯಾಗುತ್ತದೆ; ಬೇಕಾದದ್ದಕ್ಕಿಂತ ಹೆಚ್ಚಿನದನ್ನು ಬಿಗಿಹಿಡಿಯುವಂಥದ್ದು ಬಡತನಕ್ಕೆ ನಡಿಸುತ್ತದೆ.

25ಉದಾರಿಯು ಪುಷ್ಠನಾಗು ವನು; ನೀರು ಹಾಯಿಸುವವನಿಗೆ ನೀರು ದೊರೆಯು ವದು.

Proverbs 11 illustration - Proverbs Chapter 11

26ಧಾನ್ಯವನ್ನು ಬಿಗಿಹಿಡಿಯುವವನನ್ನು ಜನರು ಶಪಿಸುವರು; ಅದನ್ನು ಮಾರುವವನ ತಲೆಯ ಮೇಲೆ ಆಶೀರ್ವಾದವು ನೆಲೆಯಾಗಿರುವದು.

27ಒಳ್ಳೇದನ್ನು ಸೂಕ್ಷ್ಮವಾಗಿ ಹುಡುಕುವವನು ದಯೆಯನ್ನು ಹೊಂದು ತ್ತಾನೆ; ಆದರೆ ಕೇಡನ್ನು ಹುಡುಕುವವನಿಗೆ ಕೇಡೇ ಆಗುವದು.

28ತನ್ನ ಐಶ್ವರ್ಯವನ್ನು ನಂಬಿದವನು ಬಿದ್ದುಹೋಗುವನು; ನೀತಿವಂತರು ಕೊಂಬೆಯ ಹಾಗೆ ಚಿಗುರುವರು.

29ತನ್ನ ಮನೆಯವರನ್ನು ಬಾಧಿಸುವವನು ಗಾಳಿಯನ್ನು ಬಾಧ್ಯವಾಗಿ ಹೊಂದುವನು; ಜ್ಞಾನವುಳ್ಳ ಹೃದಯದವನಿಗೆ ಅವಿವೇಕಿಯು ಸೇವಕನಾಗಿರುವನು.

30ನೀತಿವಂತರ ಫಲವು ಜೀವವೃಕ್ಷ; ಆತ್ಮಗಳನ್ನು ಗೆಲ್ಲು ವವನು ಜ್ಞಾನಿಯಾಗಿದ್ದಾನೆ.

Proverbs 11 illustration - Proverbs Chapter 11

31ಇಗೋ, ಭೂಮಿಯ ಮೇಲೆ ನೀತಿವಂತರು ಪ್ರತಿಫಲವನ್ನು ಹೊಂದುವರು; ದುಷ್ಟನೂ ಪಾಪಿಯೂ ಎಷ್ಟೋ ಹೆಚ್ಚಾಗಿ ಪ್ರತಿಫಲ ವನ್ನು ಹೊಂದುತ್ತಾರೆ.

Chapter Complete

You have read Proverbs 11

31 verses