Lumina
Numbers

Israel's Journeys

Numbers 33·Kannada Bible

1ಮೋಶೆ ಆರೋನರ ಕೈಕೆಳಗೆ ಐಗುಪ್ತ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲ್‌ ಮಕ್ಕಳ ಪ್ರಯಾಣಗಳು ಇವೇ.

2ಮೋಶೆಯು ಕರ್ತನ ಆಜ್ಞೆಯ ಪ್ರಕಾರ ಅವರ ಪ್ರಯಾಣಗಳ ಹೊರಡೋಣಗಳನ್ನು ಬರೆದನು.

3ಅವರ ಪ್ರಯಾಣಗಳ ಹೊರಡೋಣಗಳು ಯಾವ ವೆಂದರೆ--ಅವರು ಮೊದಲನೇ ತಿಂಗಳಿನ ಹದಿನೈದನೇ ದಿವಸದಲ್ಲಿ ಪಸ್ಕ ಹಬ್ಬದ ಮರು ದಿವಸದಲ್ಲಿ ರಮ್ಸೇಸಿ ನಿಂದ ಹೊರಟರು; ಇಸ್ರಾಯೇಲ್‌ ಮಕ್ಕಳು ಸಮಸ್ತ ಐಗುಪ್ತ್ಯರ ಎದುರಿನಲ್ಲೇ ಜಯೋತ್ಸವದಿಂದ ಹೊರಟು ಹೋದರು.

4ಹೇಗಂದರೆ ಕರ್ತನು ಅವರಲ್ಲಿ ಸಮಸ್ತ ಚೊಚ್ಚಲಿನವರನ್ನು ಹೊಡೆದದ್ದರಿಂದ ಐಗುಪ್ತ್ಯರು ಹೂಣಿಡುತ್ತಿದ್ದರು; ಕರ್ತನು ಅವರ ದೇವರುಗಳಿಗೂ ತೀರ್ಪು ಮಾಡಿದನು.

5ಇಸ್ರಾಯೇಲ್‌ ಮಕ್ಕಳು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು.

Numbers 33 illustration - Numbers Chapter 33

6ಸುಕ್ಕೋತಿನಿಂದ ಹೊರಟು ಅರಣ್ಯದ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದು ಕೊಂಡರು.

7ಏತಾಮಿನಿಂದ ಹೊರಟು ಬಾಳ್ಚೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು.

8ಪೀಹ ಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಅರಣ್ಯಕ್ಕೆ ದಾಟಿದರು; ಆಗ ಅವರು ಮೂರು ದಿವಸದ ಪ್ರಯಾಣ ಮಾಡಿ ಏತಾಮೆಂಬ ಅರಣ್ಯದಲ್ಲಿ ನಡೆದು ಮಾರಾದಲ್ಲಿ ಇಳಿದರು.

9ಮಾರಾದಿಂದ ಹೊರಟು ಏಲೀಮಿಗೆ ಬಂದರು; ಏಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ ಎಪ್ಪತ್ತು ಖರ್ಜೂರ ಮರಗಳೂ ಇದ್ದದ ರಿಂದ ಅಲ್ಲಿ ಇಳಿದುಕೊಂಡರು.

10ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದು ಕೊಂಡರು.

Numbers 33 illustration - Numbers Chapter 33

11ಕೆಂಪುಸಮುದ್ರದಿಂದ ಹೊರಟು ಸೀನೆಂಬ ಅರಣ್ಯದಲ್ಲಿ ಇಳಿದುಕೊಂಡು,

12ಸೀನೆಂಬ ಅರಣ್ಯದಿಂದ ಹೊರಟು ದೊಪ್ಕದಲ್ಲಿ ಇಳಿದು ಕೊಂಡರು.

13ದೊಪ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು.

14ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವದಕ್ಕೆ ನೀರು ಇದ್ದಿಲ್ಲ;

15ರೆಫೀ ದೀಮಿನಿಂದ ಹೊರಟು ಸೀನಾಯಿ ಅರಣ್ಯದಲ್ಲಿ ಇಳಿದುಕೊಂಡರು.

Numbers 33 illustration - Numbers Chapter 33

16ಸೀನಾಯಿ ಅರಣ್ಯದಿಂದ ಹೊರಟು ಕಿಬ್ರೋತ್‌ಹತಾವದಲ್ಲಿ ಇಳಿದುಕೊಂಡರು.

17ಕಿಬ್ರೋತ್‌ಹತಾವದಿಂದ ಹೊರಟು ಹಚೇರೋತಿ ನಲ್ಲಿ ಇಳಿದುಕೊಂಡರು.

18ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.

19ರಿತ್ಮದಿಂದ ಹೊರಟು ರಿಮ್ಮೋನ್‌ ಪೆರೆಚನಲ್ಲಿ ಇಳಿದುಕೊಂಡರು.

20ರಿಮ್ಮೋನ್‌ ಪೆರೆಚನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.

Numbers 33 illustration - Numbers Chapter 33

21ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.

22ರಿಸ್ಸದಿಂದ ಹೊರಟು ಕೆಹೇಲಾತಿ ನಲ್ಲಿ ಇಳಿದುಕೊಂಡರು.

23ಕೆಹೇಲಾತಿನಿಂದ ಹೊರಟು ಶೆಫೆರ್‌ ಪರ್ವತದಲ್ಲಿ ಇಳಿದುಕೊಂಡರು.

24ಶೆಫೆರ್‌ ಪರ್ವತದಿಂದ ಹೊರಟು ಹರಾದದಲ್ಲಿ ಇಳಿದು ಕೊಂಡರು.

25ಹರಾದದಿಂದ ಹೊರಟು ಮಖೇ ಲೋತಿನಲ್ಲಿ ಇಳಿದುಕೊಂಡರು.

Numbers 33 illustration - Numbers Chapter 33

26ಮಖೇಲೋತಿ ನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.

27ತಹತಿನಿಂದ ಹೊರಟು ತೆರಹದಲ್ಲಿ ಇಳಿದು ಕೊಂಡರು.

28ತೆರಹದಿಂದ ಹೊರಟು ಮಿತ್ಕದಲ್ಲಿ ಇಳಿದುಕೊಂಡರು.

29ಮಿತ್ಕದಿಂದ ಹೊರಟು ಹಷ್ಮೋನದಲ್ಲಿ ಇಳಿದುಕೊಂಡರು.

30ಹಷ್ಮೋನ ದಿಂದ ಹೊರಟು ಮೋಸೇರೋತಿನಲ್ಲಿ ಇಳಿದು ಕೊಂಡರು.

Numbers 33 illustration - Numbers Chapter 33

31ಮೋಸೇರೋತಿನಿಂದ ಹೊರಟು ಬೆನೇ ಯಾಕಾನಿನಲ್ಲಿ ಇಳಿದುಕೊಂಡರು.

32ಬೆನೇಯಾ ಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದು ಕೊಂಡರು.

33ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.

34ಯೊಟ್ಬಾತ ದಿಂದ ಹೊರಟು ಅಬ್ರೋನದಲ್ಲಿ ಇಳಿದುಕೊಂಡರು.

35ಅಬ್ರೋನದಿಂದ ಹೊರಟು ಎಚ್ಯೋನ್ಗೆಬೆರಿನಲ್ಲಿ ಇಳಿದುಕೊಂಡರು.

Numbers 33 illustration - Numbers Chapter 33

36ಎಚ್ಯೋನ್ಗೆಬೆರಿನಿಂದ ಹೊರಟು ಕಾದೇಶೆಂಬ ಜಿನ್‌ ಅರಣ್ಯದಲ್ಲಿ ಇಳಿದುಕೊಂಡರು.

37ಕಾದೇಶಿನಿಂದ ಹೊರಟು ಎದೋಮ್‌ ದೇಶದ ಅಂಚಿನಲ್ಲಿರುವ ಹೋರ್‌ ಗುಡ್ಡದಲ್ಲಿ ಇಳಿದುಕೊಂಡರು.

38ಆಗ ಯಾಜಕನಾದ ಆರೋನನು ಕರ್ತನ ಆಜ್ಞೆಯ ಪ್ರಕಾರ ಹೋರ್‌ ಗುಡ್ಡದ ಮೇಲೆ ಏರಿ ಅಲ್ಲಿ ಇಸ್ರಾಯೇಲ್‌ ಮಕ್ಕಳು ಐಗುಪ್ತ ದೇಶದಿಂದ ಹೊರಟ ನಾಲ್ವತ್ತನೇ ವರುಷದ ಐದನೇ ತಿಂಗಳಿನ ಮೊದಲನೇ ದಿವಸದಲ್ಲಿ ಸತ್ತನು.

39ಆರೋನನು ಹೋರ್‌ ಗುಡ್ಡ ದಲ್ಲಿ ಸಾಯುವಾಗ ಅವನು ನೂರ ಇಪ್ಪತ್ತು ಮೂರು ವರುಷದವನಾಗಿದ್ದನು.

40ಆಗ ಇಸ್ರಾಯೇಲ್‌ ಮಕ್ಕಳು ಬರುವದನ್ನು ಕಾನಾನ್‌ ದೇಶದ ದಕ್ಷಿಣದಲ್ಲಿ ವಾಸವಾಗಿದ್ದ ಕಾನಾನ್ಯ ರಿಗೆ ಅರಸನಾದ ಅರಾದನು ಕೇಳಿದನು.

Numbers 33 illustration - Numbers Chapter 33

41ಹೋರ್‌ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.

42ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.

43ಪೂನೋನಿ ನಿಂದ ಹೊರಟು ಒಬೋತಿನಲ್ಲಿ ಇಳಿದುಕೊಂಡರು.

44ಒಬೋತಿನಿಂದ ಹೊರಟು ಮೋವಾಬಿನ ಮೇರೆ ಯಲ್ಲಿರುವ ಇಯ್ಯಾಮಿನಲ್ಲಿ ಇಳಿದುಕೊಂಡರು.

45ಇಯ್ಯಾಮಿನಿಂದ ಹೊರಟು ದೀಬೋನ್ಗಾದಿನಲ್ಲಿ ಇಳಿದುಕೊಂಡರು.

Numbers 33 illustration - Numbers Chapter 33

46ದೀಬೋನ್‌ಗಾದಿನಿಂದ ಹೊರಟು ಅಲ್ಮೋನ್‌ ದಿಬ್ಲಾತಯಿಮಿನಲ್ಲಿ ಇಳಿದು ಕೊಂಡರು.

47ಅಲ್ಮೋನ್‌ ದಿಬ್ಲಾತಯಿಮಿನಿಂದ ಹೊರಟು ನೇಬೋವಿಗೆದುರಾಗಿರುವ ಅಬಾರೀಮ್‌ ಗುಡ್ಡಗಳಲ್ಲಿ ಇಳಿದುಕೊಂಡರು.

48ಅಬಾರೀಮ್‌ ಗುಡ್ಡಗಳಿಂದ ಹೊರಟು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲು ಗಳಲ್ಲಿ ಇಳಿದುಕೊಂಡರು.

49ಅವರು ಯೊರ್ದನ್‌ ನದಿಯ ಬಳಿಯಲ್ಲಿರುವ ಬೇತ್‌ಯೆಷೀಮೋತಿನಿಂದ ಮೋವಾಬಿನ ಬೈಲುಗಳಲ್ಲಿರುವ ಆಬೇಲ್‌ಶಿಟ್ಟೀಮಿನ ಪರ್ಯಂತರದ ವರೆಗೂ ಇಳಿದುಕೊಂಡರು.

50ಕರ್ತನು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬೈಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ--

Numbers 33 illustration - Numbers Chapter 33

51ಇಸ್ರಾಯೇಲ್‌ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇ ನಂದರೆ--ನೀವು ಯೊರ್ದನನ್ನು ದಾಟಿ ಕಾನಾನ್‌ ದೇಶಕ್ಕೆ ಬರುವಾಗ

52ನೀವು ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ ಅವರ ಚಿತ್ರಗಳನ್ನೂ ಅವರ ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ ಅವರ ಸಮಸ್ತ ಮೇಡುಗಳನ್ನೂ ಹಾಳುಮಾಡಬೇಕು.

53ನೀವು ಆ ದೇಶವನ್ನು ತಕ್ಕೊಂಡು ಅದರಲ್ಲಿ ವಾಸಮಾಡಿರಿ; ಯಾಕಂದರೆ ಅದನ್ನು ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.

54ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.

55ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿ ಗಳನ್ನು ಹೊರಡಿಸದಿದ್ದರೆ ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ ನಿಮ್ಮ ಪಾರ್ಶ್ವಗಳಲ್ಲಿ ಕಂಟಕಗಳಾಗಿಯೂ ಇರುವರು; ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.

Numbers 33 illustration - Numbers Chapter 33

56ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.

Chapter Complete

You have read Numbers 33

56 verses