Lumina
Job

Behemoth

Job 40·Kannada Bible

1ಕರ್ತನು ಯೋಬನಿಗೆ ಉತ್ತರ ಕೊಟ್ಟು--

2ಸರ್ವಶಕ್ತನ ಸಂಗಡ ವಾದಿಸುವವನು ಆತನಿಗೆ ಶಿಕ್ಷಣ ಕೊಡುವನೋ? ದೇವರನ್ನು ಗದರಿಸು ವವನು ಅದಕ್ಕೆ ಉತ್ತರಕೊಡಲಿ ಎಂದು ಹೇಳಿದನು.

3ಆಗ ಯೋಬನು ಕರ್ತನಿಗೆ ಉತ್ತರಕೊಟ್ಟು--

4ಇಗೋ, ನೀಚನಾಗಿದ್ದೇನೆ; ನಿನಗೆ ಏನು ಪ್ರತ್ಯುತ್ತರ ಕೊಡಲಿ? ನನ್ನ ಕೈಯಿಂದ ಬಾಯಿ ಮುಚ್ಚಿಕೊಳ್ಳುತ್ತೇನೆ.

5ಒಂದು ಸಾರಿ ಮಾತಾಡಿದೆನು, ಆದರೆ ಉತ್ತರ ಕೊಡೆನು; ಹೌದು, ಎರಡು ಸಾರಿ. ಆದರೆ ಹೆಚ್ಚು ಮಾತಾಡೆನು ಅಂದೆನು.

Job 40 illustration - Job Chapter 40

6ಆಗ ಕರ್ತನು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರ ಕೊಟ್ಟು--

7ಈಗ ಪುರುಷನ ಹಾಗೆ ನಿನ್ನ ನಡುವನ್ನು ಕಟ್ಟಿಕೋ; ನಿನ್ನನ್ನು ಕೇಳುವೆನು,ನನಗೆ ತಿಳಿಸು.

8ನೀನು ನನ್ನ ನ್ಯಾಯತೀರ್ವಿಕೆಯನ್ನು ತೆಗೆದುಹಾಕುವಿಯೋ? ನೀನು ನೀತಿವಂತ ನಾಗುವ ಹಾಗೆ ನನ್ನನ್ನು ಖಂಡಿಸುವಿಯೋ?

9ಇಲ್ಲವೆ ದೇವರ ಹಾಗೆ ತೋಳುಳ್ಳವನಾಗಿದ್ದೀಯೋ? ಇಲ್ಲವೆ ಆತನ ಹಾಗೆ ಗುಡುಗಿನಿಂದ ಆರ್ಭಟ ಮಾಡು ವಿಯೋ?

10ಗಾಂಭೀರ್ಯದಿಂದಲೂ ಘನತೆಯಿಂದ ಲೂ ನಿನ್ನನ್ನು ಅಲಂಕರಿಸಿಕೋ; ಮಹಿಮೆಯನ್ನೂ ಪ್ರಭೆಯನ್ನೂ ಧರಿಸಿಕೋ.

Job 40 illustration - Job Chapter 40

11ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು.

12ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು.

13ಅವ ರನ್ನು ಒಟ್ಟಾಗಿ ಧೂಳಿಯಲ್ಲಿ ಅಡಗಿಸು; ಅವರ ಮುಖಗಳನ್ನು ಗುಪ್ತದಲ್ಲಿ ಕಟ್ಟಿಹಾಕು.

14ಆಗ ನಾನೂ ನಿನ್ನ ಬಲಗೈ ನಿನ್ನನ್ನು ರಕ್ಷಿಸಿತೆಂದು ನಿನಗೆ ಅರಿಕೆ ಮಾಡುವೆನು.

15ನಾನು ನಿನ್ನ ಕೂಡ ನಿರ್ಮಿಸಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ಮೇಯುತ್ತದೆ.

Job 40 illustration - Job Chapter 40

16ಇಗೋ, ಅದರ ಸೊಂಟದಲ್ಲಿರುವ ಅದರ ಶಕ್ತಿ ಯನ್ನೂ ಅದರ ಹೊಟ್ಟೆಯ ನರಗಳಲ್ಲಿರುವ ಅದರ ತ್ರಾಣವನ್ನೂ ನೋಡು.

17ತನ್ನ ಬಾಲವನ್ನು ದೇವ ದಾರಿನ ಹಾಗೆ ಬೊಗ್ಗಿಸುತ್ತದೆ; ಅದರ ಸೊಂಟದ ನರಗಳು ಸುತ್ತಿ ಹೆಣೆದು ಕೊಂಡಿವೆ.

18ಅದರ ಎಲುಬುಗಳು ಹಿತ್ತಾಳೆಯ ಸಲಿಕೆಗಳಂತೆ ಬಲವಾಗಿವೆ; ಅಸ್ತಿವಾರಗಳು ಕಬ್ಬಿಣದ ಕಂಬಿಗಳ ಹಾಗೆ ಅವೆ.

19ಅದೇ ದೇವರ ಮಾರ್ಗಗಳಲ್ಲಿ ಪ್ರಾಮುಖ್ಯವಾ ದ್ದದು; ಅದನ್ನು ನಿರ್ಮಿಸಿದವನು ಅದರ ಖಡ್ಗವು ಅವನನ್ನು ಸಂಧಿಸುವಂತೆ ಮಾಡಬಲ್ಲನು.

20ನಿಶ್ಚಯ ವಾಗಿ ಪರ್ವತಗಳು ಅದಕ್ಕೆ ಮೇವು ಕೊಡುತ್ತವೆ; ಅಡವಿಯ ಎಲ್ಲಾ ಮೃಗಗಳು ಅಲ್ಲಿ ಆಡುತ್ತವೆ.

Job 40 illustration - Job Chapter 40

21ನೆರಳಾದ ಗಿಡಗಳ ಕೆಳಗೆ ಆಪಿನ ಮರೆಯಲ್ಲಿಯೂ ಕೆಸರಿನಲ್ಲಿಯೂ ಮಲಗುತ್ತದೆ.

22ನೆರಳಾದ ಗಿಡಗಳು ತಮ್ಮ ನೆರಳಾಗಿ ಅದನ್ನು ಮುಚ್ಚಿಕೊಳ್ಳುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ.

23ಇಗೋ, ನದಿಯಲ್ಲಿ ಅವನು ಕುಡಿಯುತ್ತಾನೆ. ಅವಸರ ಮಾಡನು. ಯೊರ್ದನ್‌ ತನ್ನ ಬಾಯಿಯಲ್ಲಿ ಎಳೆಯುವಂತೆ ಅದು ಭರವಸೆ ಇಟ್ಟಿದೆ.

24ಅದು ಅದನ್ನು ತನ್ನ ಕಣ್ಣುಗಳಿಂದ ತೆಗೆದುಬಿಡುತ್ತದೆ; ಅದರ ಮೂಗು ಉರ್ಲುಗಳಿಂದ ತಿವಿಯುತ್ತದೆ.

Chapter Complete

You have read Job 40

24 verses