Lumina
Job

God's Majesty

Job 37·Kannada Bible

11 ಇದಕ್ಕೋಸ್ಕರ ನನ್ನ ಹೃದಯವು ನಡುಗಿ ತನ್ನ ಸ್ಥಳದಿಂದ ಕದಲುತ್ತದೆ.

2ಆತನ ಬಾಯಿಂದ ಹೊರಡುವ ಧ್ವನಿಯ ಶಬ್ದದ ಸ್ವರವನ್ನು ಲಕ್ಷ್ಯಕೊಟ್ಟು ಕೇಳಿರಿ.

3ಎಲ್ಲಾ ಆಕಾಶದ ಕೆಳಗೆ ಆತನು ಅದನ್ನು ನಡಿಸುತ್ತಾನೆ. ತನ್ನ ಮಿಂಚನ್ನು ಭೂಮಿಯ ಅಂಚುಗಳ ವರೆಗೆ ನಡಿಸುತ್ತಾನೆ.

4ಅದರ ತರುವಾಯ ಶಬ್ದವು ಗರ್ಜಿಸುತ್ತದೆ; ತನ್ನ ಮಹತ್ತಿನ ಶಬ್ದದಿಂದ ಗುಡುಗುತ್ತಾನೆ. ಆತನ ಶಬ್ದ ಕೇಳಲ್ಪಡುವಾಗ ಅವು ಗಳನ್ನು ಹಿಂದೆಗೆಯುವದಿಲ್ಲ.

5ದೇವರು ಆಶ್ಚರ್ಯವಾಗಿ ತನ್ನ ಶಬ್ದದಿಂದ ಗುಡುಗುತ್ತಾನೆ; ನಾವು ಗ್ರಹಿಸದ ಮಹತ್ತುಗಳನ್ನು ಆತನು ಮಾಡುತ್ತಾನೆ.

Job 37 illustration - Job Chapter 37

6ಆತನು ಹಿಮಕ್ಕೂ ಮಳೆಗರಿಯುವಿಕೆಗೂ ಮಳೆಯ ಬಲವಾದ ಹೊಯ್ಯುವಿಕೆಗೂ ಭೂಮಿಯ ಮೇಲೆ ಬೀಳು ಅನ್ನಲಾಗಿ

7ಆತನ ಕೃತ್ಯವನ್ನು ಜನರೆಲ್ಲರು ತಿಳುಕೊಳ್ಳುವ ಹಾಗೆ ಎಲ್ಲಾ ಮನುಷ್ಯರ ಕೈಯನ್ನು ಮುದ್ರಿಸುತ್ತಾನೆ

8ಆಗ ಮೃಗಗಳು ಗವಿಗಳಲ್ಲಿ ಸೇರಿ ತಮ್ಮ ಸ್ಥಳದಲ್ಲಿ ಉಳಿಯುತ್ತವೆ.

9ದಕ್ಷಿಣದಿಂದ ಬಿರು ಗಾಳಿಯೂ ಉತ್ತರದಿಂದ ಚಳಿಯೂ ಬರುತ್ತದೆ.

10ದೇವರ ಶ್ವಾಸದಿಂದ ನೀರು ಗಡ್ಡೆ ಆಗುವದು; ವಿಸ್ತಾರವಾದ ನೀರು ಮುದುರಿಕೊಳ್ಳುವದು.

Job 37 illustration - Job Chapter 37

11ನೀರು ಹೊಯ್ಯುವಿಕೆಯಿಂದ ಮೋಡವನ್ನು ಭಾರಮಾಡುತ್ತಾನೆ; ಆತನು ತನ್ನ ಬೆಳಕಿನ ಮೇಘವನ್ನು ಚದರಿಸುತ್ತಾನೆ.

12ಆತನು ಆಜ್ಞಾಪಿಸುವ ಪ್ರಕಾರ ಭೂಲೋಕದ ಮೇಲೆ ಆತನು ಅವುಗಳಿಗೆ ನೇಮಿಸಿದ ಎಲ್ಲಾ ಕೆಲಸ ಮಾಡುವದಕ್ಕೆ ಅದು ಸುತ್ತಲೂ ತಿರು ಗುತ್ತದೆ.

13ಶಿಕ್ಷೆಗಾಗಲಿ ಅವನ ಭೂಮಿಗಾಗಲಿ ಕರು ಣೆಗಾಗಲಿ ಆತನು ಅದನ್ನು ಬರಮಾಡುತ್ತಾನೆ.

14ಓ ಯೋಬನೇ, ಇದಕ್ಕೆ ಕಿವಿಗೊಡು, ಮೌನ ವಾಗಿ ನಿಂತು ದೇವರ ಅದ್ಭುತಗಳನ್ನು ಗ್ರಹಿಸಿಕೋ.

15ದೇವರು ಅವುಗಳಿಗೆ ಅಪ್ಪಣೆ ಕೊಡುವದನ್ನೂ ಆತನ ಮೇಘದ ಬೆಳಕು ಹೊಳೆಯುವದನ್ನೂ ನೀನು ತಿಳು ಕೊಳ್ಳುತ್ತೀಯೋ?

Job 37 illustration - Job Chapter 37

16ಮೋಡಗಳ ತೂಗಾಟವನ್ನೂ ತಿಳುವಳಿಕೆಯಲ್ಲಿ ಸಂಪೂರ್ಣನ ಅದ್ಭುತಗಳನ್ನೂ ತಿಳು ಕೊಳ್ಳುತ್ತೀಯೋ?

17ದಕ್ಷಿಣ ಗಾಳಿಯಿಂದ ಭೂಮಿಯು ಕಾಯುವಾಗ ನಿನ್ನ ವಸ್ತ್ರಗಳು ಹೇಗೆ ಬಿಸಿಯಾಗುತ್ತವೆ?

18ಎರಕ ಹೊಯ್ದ ಕನ್ನಡಿಯ ಹಾಗೆ ಬಲವಾಗಿರುವ ಆಕಾಶವನ್ನು ಆತನ ಸಂಗಡ ಮಂಡಲವಾಗಿ ನೀನು ವಿಸ್ತರಿಸಿದ್ದೀಯೋ?

19ಆತನಿಗೆ ಏನು ಹೇಳಬೇಕೆಂದು ನಮಗೆ ತಿಳಿಸು. ಕತ್ತಲೆಗೋಸ್ಕರ ನಾವು ಸಿದ್ಧವಾಗಿ ರುವದಿಲ್ಲ.

20ನಾನು ಮಾತಾಡುತ್ತೇನೆಂದು ಆತನಿಗೆ ತಿಳಿಸಲ್ಪಡಬೇಕೋ? ಮನುಷ್ಯನು ಮಾತಾಡಿದರೆ ನಿಜ ವಾಗಿ ನುಂಗಲ್ಪಡುವನು.

Job 37 illustration - Job Chapter 37

21ಆದರೆ ಈಗ ಅವರು ಮೋಡಗಳಲ್ಲಿ ಹೊಳೆಯುವ ಬೆಳಕನ್ನು ನೋಡುವದಿಲ್ಲ; ಗಾಳಿಯು ಹಾದು ಅವು ಗಳನ್ನು ನಿರ್ಮಲ ಮಾಡುವದು.

22ಉತ್ತರದಿಂದ ಉತ್ತಮ ಹವಾಮಾನ ಬರುತ್ತದೆ; ದೇವರ ಬಳಿಯಲ್ಲಿ ಭಯಂಕರವಾದ ಘನ ಉಂಟು.

23ಸರ್ವ ಶಕ್ತನನ್ನು ನಾವು ಕಂಡುಕೊಳ್ಳುವದಿಲ್ಲ; ಆತನು ಶಕ್ತಿಯಲ್ಲಿಯೂ ನ್ಯಾಯತೀರ್ಪಿನಲ್ಲಿಯೂ ಬಹುನೀತಿಯಲ್ಲಿಯೂ ಉನ್ನ ತನಾಗಿದ್ದಾನೆ; ಆತನು ಶ್ರಮೆಪಡಿಸುವದಿಲ್ಲ.

24ಆದ ದರಿಂದ ಮನುಷ್ಯರು ಆತನಿಗೆ ಭಯಪಡುತ್ತಾರೆ; ಹೃದಯದಲ್ಲಿ ಜ್ಞಾನಿಗಳಾದವರೆಲ್ಲರನ್ನು ಆತನು ಲಕ್ಷಿಸುವದಿಲ್ಲ.

Chapter Complete

You have read Job 37

24 verses