Lumina
Job

Job's Final Defense

Job 31·Kannada Bible

1ನನ್ನ ಕಣ್ಣುಗಳೊಡನೆ ಒಡಂಬಡಿಕೆ ಮಾಡಿದೆನು; ಕನ್ನಿಕೆಯ ಮೇಲೆ ಲಕ್ಷ್ಯವಿಡುವದು ಹೇಗೆ?

2ಮೇಲಿನಿಂದ ದೇವರ ಭಾಗವೂ ಉನ್ನತ ವಾದ ಸ್ಥಳಗಳಿಂದ ಸರ್ವಶಕ್ತನ ಬಾಧ್ಯತೆಯೂ ಯಾವದು?

3ದುಷ್ಟನಿಗೆ ನಾಶವಿಲ್ಲವೋ? ಅಪಕಾರ ಮಾಡುವವರಿಗೆ ಕಠಿಣ ಶಿಕ್ಷೆಯಿಲ್ಲವೋ?

4ಆತನು ನನ್ನ ಮಾರ್ಗಗಳನ್ನು ನೋಡಿ, ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುವಾತನಲ್ಲವೋ?

5ನಾನು ವ್ಯರ್ಥವಾಗಿ ನಡೆದುಕೊಂಡಿದ್ದರೆ ಮೋಸಕ್ಕೆ ನನ್ನ ಕಾಲು ತ್ವರೆಪಟ್ಟರೆ

Job 31 illustration - Job Chapter 31

6ಆತನು ನೀತಿಯ ತ್ರಾಸಿನಲ್ಲಿ ನನ್ನನ್ನು ತೂಗಲಿ; ದೇವರು ನನ್ನ ಸಂಪೂರ್ಣತೆಯನ್ನು ತಿಳಿದುಕೊಳ್ಳಲಿ.

7ನನ್ನ ಹೆಜ್ಜೆಯು ದಾರಿಯಿಂದ ತೊಲಗಿದ್ದರೆ, ನನ್ನ ಕಣ್ಣುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, ನನ್ನ ಅಂಗೈಗಳಲ್ಲಿ ದೋಷ ಹತ್ತಿದ್ದರೆ,

8ನಾನು ಬಿತ್ತುವದನ್ನು ಬೇರೊಬ್ಬನು ತಿನ್ನಲಿ; ಹೌದು, ನನ್ನ ಸಂತತಿಯು ನಿರ್ಮೂಲವಾಗಲಿ.

9ನನ್ನ ಹೃದಯವು ಸ್ತ್ರೀಗೋಸ್ಕರ ಮರುಳು ಗೊಂಡಿದ್ದರೆ, ನನ್ನ ನೆರೆಯವನ ಬಾಗಲ ಹತ್ತಿರ ನಾನು ಹೊಂಚಿಕೊಂಡಿದ್ದರೆ,

10ನನ್ನ ಹೆಂಡತಿ ಮತ್ತೊಬ್ಬನಿ ಗೊಸ್ಕರ ಬೀಸಲಿ; ಮತ್ತೊಬ್ಬರು ಅವಳ ಮೇಲೆ ಒರಗಲಿ.

Job 31 illustration - Job Chapter 31

11ಯಾಕಂದರೆ ಅದು ಮಹಾ ಪಾಪವೂ ಹೌದು, ನ್ಯಾಯಾಧಿಪತಿಗಳಿಗೆ ಬರುವ ಅಕ್ರಮವೂ ಆಗಿರುವದು.

12ಅದು ನಾಶವಾಗುವ ವರೆಗೆ ದಹಿ ಸುವಂಥ, ಆದಾಯವನ್ನೆಲ್ಲಾ ನಿರ್ಮೂಲ ಮಾಡು ವಂಥ ಆಗ್ನಿಯಾಗಿರುವದು.

13ಅವರು ನನ್ನ ಸಂಗಡ ವಾದಿಸುವಾಗ ನಾನು ನನ್ನ ದಾಸನ, ದಾಸಿಯ ನ್ಯಾಯವನ್ನು ತಿರಸ್ಕರಿಸಿದ್ದರೆ,

14ದೇವರು ಏಳುವಾಗ ನಾನು ಏನು ಮಾಡುವೆನು? ಆತನು ವಿಚಾರಿಸುವಾಗ, ಆತನಿಗೆ ಏನು ಉತ್ತರ ಕೊಡುವೆನು?

15ಗರ್ಭದಲ್ಲಿ ನನ್ನನ್ನು ಉಂಟುಮಾಡಿ ದಾತನು ಅವನನ್ನೂ ಉಂಟು ಮಾಡಿದ್ದಾನಲ್ಲಾ? ನಮ್ಮನ್ನು ಗರ್ಭದಲ್ಲಿ ರೂಪಿಸಿದಾತನು ಒಬ್ಬನೇ ಅಲ್ಲವೋ?

Job 31 illustration - Job Chapter 31

16ನಾನು ಬಡವರ ಇಷ್ಟವನ್ನು ಹಿಂತೆಗೆದಿದ್ದರೆ ವಿಧ ವೆಯ ಕಣ್ಣುಗಳನ್ನು ನಿರಾಶೆಪಡಿಸಿದ್ದರೆ,

17ದಿಕ್ಕಿಲ್ಲದ ವನು ಅದರಲ್ಲಿ ಉಣ್ಣದ ಹಾಗೆ ನಾನು ಮಾತ್ರ ನನ್ನ ತುತ್ತು ಉಂಡಿದ್ದರೆ,

18(ಯಾಕಂದರೆ ನನ್ನ ಯೌವನದಿಂದ ನನ್ನೊಂದಿಗೆ ನಾನು ಅವನನ್ನು ತಂದೆ ಯಂತೆ ಬೆಳೆಸಿದೆನಲ್ಲಾ. ನನ್ನ ತಾಯಿಯ ಗರ್ಭದಿಂದ ಅವಳನ್ನು ನಡಿಸಿದೆನಲ್ಲಾ).

19ಬಟ್ಟೆ ಇಲ್ಲದೆ ನಾಶ ವಾಗುವವನನ್ನೂ ದರಿದ್ರನಿಗೆ ಹೊದಿಕೆ ಇಲ್ಲದಿರುವ ದನ್ನೂ ನಾನು ನೋಡಿದ್ದರೆ

20ಅವನ ಸೊಂಟವು ನನ್ನನ್ನು ಆಶೀರ್ವದಿಸದಿದ್ದರೆ ನನ್ನ ಕುರಿ ಮಂದೆಯ ಉಣ್ಣೆಯಿಂದ ಅವನಿಗೆ ಬೆಚ್ಚಗೆ ಆಗದಿದ್ದರೆ

Job 31 illustration - Job Chapter 31

21ದ್ವಾರ ದಲ್ಲಿ ನನ್ನ ಸಹಾಯವನ್ನು ಕಂಡು ನಾನು ದಿಕ್ಕಿಲ್ಲದ ವನ ಮೇಲೆ ನನ್ನ ಕೈಚಾಚಿದ್ದರೆ,

22ನನ್ನ ಹೆಗಲು ಬೆನ್ನಿನ ಗುಬ್ಬೆಯಿಂದ ಬೀಳಲಿ. ನನ್ನ ತೋಳು ಎಲುಬಿ ನಿಂದ ಮುರಿದು ಹೋಗಲಿ.

23ದೇವರಿಂದ ಬರುವ ನಾಶವು ನನಗೆ ಹೆದರಿಕೆಯಾಗಿತ್ತು; ಆತನ ಉನ್ನತ ಕ್ಕೋಸ್ಕರ ನಾನು ತಾಳಲಾರದೆ ಇದ್ದೆನು.

24ನಾನು ಬಂಗಾರವನ್ನು ನನ್ನ ನಿರೀಕ್ಷೆಯನ್ನಾಗಿ ಇಟ್ಟಿದ್ದರೆ, ಅಪ ರಂಜಿಗೆ--ನೀನು ನನ್ನ ಭರವಸವು ಎಂದು ಹೇಳಿದ್ದರೆ,

25ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ,

Job 31 illustration - Job Chapter 31

26ಸೂರ್ಯನು ಹೊಳೆಯುವದನ್ನು ಚಂದ್ರನು ಪ್ರಭೆಯಲ್ಲಿ ನಡೆಯುವದನ್ನು ನಾನು ನೋಡಲಾಗಿ,

27ನನ್ನ ಹೃದಯವು ಅಂತರಂಗದಲ್ಲಿ ಮರುಳುಗೊಂಡು, ನನ್ನ ಬಾಯಿಂದ ನನ್ನ ಕೈಯನ್ನು ಮುದ್ದಿಟ್ಟಿದ್ದರೆ;

28ಇದು ಸಹ ನ್ಯಾಯಾಧಿಪತಿಯಿಂದ ಶಿಕ್ಷಿಸಲ್ಪಡುವ ಅಪರಾಧವಾಗಿದೆ; ಯಾಕಂದರೆ ಉನ್ನತ ದಲ್ಲಿರುವ ದೇವರನ್ನು ಬೊಂಕಿದವನಾಗಿರುವೆನು.

29ನನ್ನನ್ನು ಹಗೆಮಾಡುವವನ ನಾಶಕ್ಕೆ ನಾನು ಸಂತೋಷಪಟ್ಟು, ಅವನನ್ನು ಕೇಡು ಕಂಡು ಹಿಡಿಯಿ ತೆಂದು ಗರ್ವಪಟ್ಟರೆ,

30ಶಾಪದಿಂದ ಅವನ ಪ್ರಾಣ ವನ್ನು ಕೇಳುವುದರಿಂದ ನನ್ನ ಬಾಯಿಯು ಪಾಪ ಮಾಡಗೊಡಿಸಲಿಲ್ಲ.

Job 31 illustration - Job Chapter 31

31ಅವನ ಮಾಂಸದಿಂದ ನಮಗೆ ತೃಪ್ತಿ ಕೊಡುವವನಾರು ಎಂದು, ನನ್ನ ಗುಡಾರದ ಮನುಷ್ಯರು ಹೇಳಲಿಲ್ಲವೋ?

32ಪರದೇಶಸ್ಥನು ಬೀದಿ ಯಲ್ಲಿ ಇಳುಕೊಳ್ಳಲಿಲ್ಲ; ಆದರೆ ನನ್ನ ಬಾಗಲನ್ನು ಮಾರ್ಗಸ್ಥರಿಗೆ ತೆರೆಯುತ್ತಾ ಇದ್ದೆನು.

33ನಾನು ಎದೆ ಯಲ್ಲಿ ನನ್ನ ಅನ್ಯಾಯವನ್ನು ಅಡಗಿಸಿ, ಆದಾಮನ ಪ್ರಕಾರ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ.

34ದೊಡ್ಡ ಸಮೂಹಕ್ಕೆ ಹೆದರಿದೆನೋ? ಕುಲಗಳ ಉದಾಸೀನದಿಂದ ಕಳವಳಗೊಂಡೆನೋ? ಹೊರಗೆ ಬಾರದೆ ಮೌನವಾಗಿದ್ದೆನೋ?

35ಕೇಳುವವನು ನನಗೆ ಸಿಕ್ಕಿದರೆ ವಾಸಿ; ಇಗೋ, ಸರ್ವಶಕ್ತನು ನನಗೆ ಉತ್ತರಕೊಡಲಿ; ನನ್ನ ವಿರೋ ಧಿಯು ಪುಸ್ತಕವನ್ನು ಬರೆಯಲಿ, ಇದೇ ನನ್ನ ಆಶೆ.

Job 31 illustration - Job Chapter 31

36ನನ್ನ ಹೆಗಲಲ್ಲಿ ಅದನ್ನು ನಿಶ್ಚಯವಾಗಿ ಹೊರುವೆನು; ಅದನ್ನು ಕಿರೀಟವಾಗಿ ಕಟ್ಟಿಕೊಳ್ಳುವೆನು.

37ನನ್ನ ಹೆಜ್ಜೆ ಗಳ ಎಣಿಕೆಯನ್ನು ಆತನಿಗೆ ತೋರಿಸುವೆನು; ಅಧಿಪತಿ ಯಾಗಿ ಆತನ ಸವಿಾಪಕ್ಕೆ ಬರುವೆನು.

38ನನ್ನ ಭೂಮಿಯು ನನಗೆ ವಿರೋಧವಾಗಿ ಕೂಗಿದರೆ, ಅದರ ಸಾಲುಗಳು ಕೂಡ ದೂರಿದರೆ,

39ಅದರ ಫಲವನ್ನು ನಾನು ಹಣಕೊಡದೆ ತಿಂದಿದ್ದರೆ, ಅದರ ಯಾಜಮಾನರ ಪ್ರಾಣವನ್ನು ತೆಗೆದುಬಿಟ್ಟಿದ್ದರೆ,

40ಗೋಧಿಗೆ ಬದಲಾಗಿ ಮುಳ್ಳೂ ಜವೆಗೋಧಿಗೆ ಬದಲಾಗಿ ಕಳೆಯೂ ಬೆಳೆಯಲಿ. ಯೋಬನ ನುಡಿಗಳು ಮುಗಿದವು.

Chapter Complete

You have read Job 31

40 verses