Lumina
Job

Job's Reply

Job 26·Kannada Bible

11 ಯೋಬನು ಉತ್ತರ ಕೊಟ್ಟು ಹೇಳಿದ್ದೇನಂದರೆ --

2ಶಕ್ತಿ ಇಲ್ಲದವನಿಗೆ ನೀನು ಏನು ಸಹಾಯಮಾಡಿದಿ? ತ್ರಾಣವಿಲ್ಲದ ಕೈಗೆ ಏನು ರಕ್ಷಣೆ ಮಾಡಿದಿ?

3ಜ್ಞಾನವಿಲ್ಲದವನಿಗೆ ಏನು ಆಲೋಚನೆ ಹೇಳಿದಿ? ಇದ್ದಂತೆ ಇರುವದನ್ನು ನೀನು ಬಹಳ ವಾಗಿ ಬೋಧಿಸಿದಿಯಲ್ಲಾ;

4ಯಾವನ ಸಂಗಡ ಮಾತನಾಡುತ್ತೀ? ಯಾವನ ಶ್ವಾಸವು ನಿನ್ನಿಂದ ಹೊರಡುತ್ತದೆ?

5ಸತ್ತು ಹೋದವುಗಳೂ ಅವುಗಳ ನಿವಾಸಿಗಳೂ ನೀರುಗಳ ಕೆಳಗೆ ರೂಪಿಸಲ್ಪಡುತ್ತವೆ.

Job 26 illustration - Job Chapter 26

6ಆತನ ಮುಂದೆ ನರಕವು ಬೆತ್ತಲೆಯಾಗಿದೆ; ನಾಶನಕ್ಕೆ ಮರೆ ಇಲ್ಲ.

7ಉತ್ತರವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾನೆ; ಭೂಮಿ ಯನ್ನು ಏನೂ ಇಲ್ಲದ್ದರ ಮೇಲೆ ತೂಗ ಹಾಕಿದ್ದಾನೆ.

8ನೀರನ್ನು ತನ್ನ ಮಂದವಾದ ಮೇಘಗಳಲ್ಲಿ ಕಟ್ಟುತ್ತಾನೆ. ಮೇಘವು ಅದರ ಕೆಳಗೆ ಸೀಳಿಹೋಗದು;

9ಸಿಂಹಾ ಸನದ ಮುಖವನ್ನು ಹಿಂದೆಗೆಯುತ್ತಾನೆ; ಅದರ ಮೇಲೆ ತನ್ನ ಮೇಘವನ್ನು ವಿಸ್ತರಿಸುತ್ತಾನೆ.

10ಹಗಲು ರಾತ್ರಿ ಮುಗಿಯುವ ವರೆಗೆ ಆತನು ನೀರಿನ ಸುತ್ತಲೂ ಮೇರೆ ಯನ್ನು ಕಟ್ಟಿದ್ದಾನೆ.

Job 26 illustration - Job Chapter 26

11ಆಕಾಶದ ಸ್ತಂಭಗಳು ಅಲ್ಲಾಡು ತ್ತವೆ; ಆತನ ಗದರಿಕೆಗೆ ಆಶ್ಚರ್ಯಪಡುತ್ತವೆ.

12ತನ್ನ ಶಕ್ತಿಯಿಂದ ಸಮುದ್ರವನ್ನು ಭೇದಿಸುತ್ತಾನೆ. ತನ್ನ ವಿವೇ ಕದಿಂದ ಗರ್ವಿಷ್ಟನನ್ನು ಹೊಡೆಯುತ್ತಾನೆ.

13ಆತನ ಆತ್ಮನಿಂದ ಆಕಾಶವು ಶೃಂಗಾರವಾಗಿದೆ; ಆತನ ಕೈ ಓಡುವ ಸರ್ಪವನ್ನು ರೂಪಿಸಿತು.

14ಇಗೋ, ಇವು ಆತನ ಮಾರ್ಗಗಳ ಭಾಗಗಳು; ಆತನನ್ನು ಕುರಿತು ಸ್ವಲ್ಪ ಭಾಗ ಮಾತ್ರ ಕೇಳಿದ್ದೇವೆ; ಆದರೆ ಆತನ ಪರಾಕ್ರಮದ ಗುಡುಗನ್ನು ಯಾವನು ಗ್ರಹಿಸಿಕೊಳ್ಳು ವನು ಎಂಬದು.

Chapter Complete

You have read Job 26

14 verses