Lumina
Job

Eliphaz's Third Speech

Job 22·Kannada Bible

1ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟು ಹೇಳಿದ್ದೇನಂದರೆ--

2ಮನುಷ್ಯನು ದೇವರಿಗೆ ಪ್ರಯೋಜನಕರವಾಗಿರುವನೋ? ಬುದ್ಧಿ ವಂತನು ಪ್ರಯೋಜನಕರವಾಗಿರುವದು ತನಗೆ ಸರಿಯೋ?

3ನೀನು ನೀತಿವಂತನಾಗಿದ್ದರೆ ಸರ್ವಶಕ್ತನು ಮೆಚ್ಚಬೇಕೋ? ನೀನು ನಿನ್ನ ಮಾರ್ಗಗಳನ್ನು ಸಂಪೂರ್ಣ ಮಾಡಿಕೊಂಡರೆ ಆತನಿಗೆ ಲಾಭ ಉಂಟೋ?

4ನಿನ್ನ ಭಯದ ನಿಮಿತ್ತ ನಿನ್ನನ್ನು ಗದರಿಸಿ ನಿನ್ನ ಸಂಗಡ ನ್ಯಾಯಕ್ಕೆ ಬರುವನೋ?

5ನಿನ್ನ ಕೆಟ್ಟ ತನವು ಬಹಳವಲ್ಲವೋ? ನಿನ್ನ ಅಕ್ರಮಗಳಿಗೆ ಅಂತ್ಯ ವಿಲ್ಲವಷ್ಟೇ.

Job 22 illustration - Job Chapter 22

6ಸುಮ್ಮನೆ ನಿನ್ನ ಸಹೋದರನಿಂದ ಈಡು ತೆಗೆದು ಕೊಂಡಿ; ಬೆತ್ತಲೆಯಾಗಿರುವವರ ವಸ್ತ್ರಗಳನ್ನು ನೀನು ಸುಲುಕೊಂಡಿ.

7ದಣಿದವನಿಗೆ ನೀರನ್ನು ಕುಡಿಯ ಕೊಡಲಿಲ್ಲ; ಹಸಿದವನಿಂದ ರೊಟ್ಟಿಯನ್ನು ಹಿಂದೆ ಗೆದಿದ್ದಿ.

8ಬಲಿಷ್ಠನಿಗಾದರೋ ದೇಶವು ಅವನದೇ; ಗೌರವದ ಮನುಷ್ಯನು ಅದರಲ್ಲಿ ವಾಸಿಸಿದನು.

9ವಿಧವೆಯರನ್ನು ಬರಿದಾಗಿ ಕಳುಹಿಸಿದಿ; ದಿಕ್ಕಿಲ್ಲದ ವರ ತೋಳುಗಳನ್ನು ಜಜ್ಜಿದಿ.

10ಆದದರಿಂದ ನಿನ್ನ ಸುತ್ತಲೂ ಉರುಲುಗಳು ಉಂಟು; ಭಯವು ನಿನ್ನನ್ನು ಫಕ್ಕನೆ ತಲ್ಲಣಪಡಿಸುತ್ತದೆ.

Job 22 illustration - Job Chapter 22

11ಇಲ್ಲವೆ ನೀನು ನೋಡದ ಹಾಗೆ ಕತ್ತಲುಂಟು; ಜಲ ಪ್ರವಾಹವು ನಿನ್ನನ್ನು ಮುಚ್ಚುತ್ತದೆ.

12ದೇವರು ಆಕಾಶದ ಎತ್ತರದಲ್ಲಿದ್ದಾನಲ್ಲವೋ? ನಕ್ಷತ್ರಗಳ ಎತ್ತರ ನೋಡು, ಅವು ಎಷ್ಟು ಉನ್ನತ!

13ಆದರೆ ನೀನು ಹೇಳುತ್ತೀ--ದೇವರು ಏನು ಬಲ್ಲನು? ಆತನು ಕಾರ್ಗತ್ತಲಿಂದ ನ್ಯಾಯತೀರಿಸುವನೋ?

14ಮಂದವಾದ ಮೇಘಗಳು ಆತನ ಮರೆ; ಆತನು ನೋಡುವದಿಲ್ಲ; ಆತನು ಆಕಾಶ ಮಂಡಲದ ಮೇಲೆ ನಡೆಯುತ್ತಾನೆ.

15ದುಷ್ಟ ಜನರು ನಡೆದ ಪೂರ್ವಕಾಲದ ದಾರಿ ಯನ್ನು ನೋಡಿಕೊಂಡಿಯೋ?

Job 22 illustration - Job Chapter 22

16ಅವರು ಆ ಕಾಲ ದಲ್ಲಿ ಕಡಿಯಲ್ಪಟ್ಟರು; ಅವರ ಅಸ್ತಿವಾರವು ಪ್ರವಾಹ ದಲ್ಲಿ ಕೊರೆದು ಹೋಯಿತು.

17ನಮ್ಮನ್ನು ಬಿಟ್ಟು ಹೋಗು ಎಂದೂ ಸರ್ವಶಕ್ತನು ನಮಗೆ ಏನು ಮಾಡುವನೆಂದೂ ದೇವರಿಗೆ ಹೇಳಿದವರು ಅವರೇ.

18ಆದರೆ ಆತನು ಅವರ ಮನೆಗಳನ್ನು ಒಳ್ಳೇದರಿಂದ ತುಂಬಿದ್ದಾನೆ; ಆದರೂ ದುಷ್ಟರ ಆಲೋಚನೆಯು ನನಗೆ ದೂರವಾಗಿದೆ.

19ನೀತಿವಂತರು ನೋಡಿ ಸಂತೋಷಪಡುವರು. ನಿರಪರಾಧಿಯು ಅವರಿಗೆ ಗೇಲಿ ಮಾಡುವನು.

20ನಿಶ್ಚಯವಾಗಿ ನಮ್ಮ ಆಸ್ತಿಯು ತೆಗೆ ಯಲ್ಪಡಲಿಲ್ಲ; ಅವರಲ್ಲಿ ಉಳಿದವರನ್ನು ಬೆಂಕಿ ದಹಿಸಿಬಿಡುತ್ತದೆ.

Job 22 illustration - Job Chapter 22

21ಆತನಿಗೆ ಪರಿಚಿತನಾಗಿ ಸಮಾಧಾನದಿಂದಿರು; ಇದರಿಂದ ನಿನಗೆ ಮೇಲು ಬರುವದು.

22ಆತನ ಬಾಯಿಂದ ನ್ಯಾಯಪ್ರಮಾಣವನ್ನು ತಕ್ಕೋ; ಆತನ ಮಾತುಗಳನ್ನು ನಿನ್ನ ಹೃದಯದಲ್ಲಿ ಇಟ್ಟುಕೋ.

23ಸರ್ವಶಕ್ತನ ಕಡೆಗೆ ನೀನು ತಿರುಗಿ ಕೊಂಡರೆ ಕಟ್ಟಲ್ಪಡುವಿ; ನಿನ್ನ ಗುಡಾರಗಳಿಂದ ದುಷ್ಟತ್ವವನ್ನು ದೂರ ಮಾಡುವಿ.

24ಧೂಳಿನಂತೆ ಬಂಗಾರವನ್ನು, ಹಳ್ಳಗಳ ಕಲ್ಲುಗಳಂತೆ ಓಫಿರ್‌ ಬಂಗಾರವನ್ನು ತೆಗೆದು ಹಾಕುವಿ.

25ಆಗ ಸರ್ವಶಕ್ತನು ನಿನಗೆ ರಕ್ಷಣೆಯೂ ಸಮೃದ್ಧಿಯಾದ ಬೆಳ್ಳಿಯೂ ಆಗಿರುವನು.

Job 22 illustration - Job Chapter 22

26ಆಗ ಸರ್ವಶಕ್ತನಲ್ಲಿ ನೀನು ಆನಂದಗೊಂಡು ನಿನ್ನ ಮುಖ ವನ್ನು ದೇವರ ಕಡೆಗೆ ಎತ್ತುವಿ.

27ನೀನು ಆತನಿಗೆ ವಿಜ್ಞಾಪನೆ ಮಾಡಲು ನಿನ್ನನ್ನು ಕೇಳುವನು; ನಿನ್ನ ಪ್ರಮಾಣಗಳನ್ನು ಸಲ್ಲಿಸುವಿ.

28ನೀನು ಏನಾದರೂ ನಿರ್ಣಯಿಸಿದರೆ ಅದು ನಿನಗೆ ಸ್ಥಿರವಾಗುವದು ಮತ್ತು ನಿನ್ನ ಮಾರ್ಗಗಳಲ್ಲಿ ಬೆಳಕು ಮೂಡುವದು.

29ಒಬ್ಬನು ತಗ್ಗುವಲ್ಲಿ ಎತ್ತುವದುಂಟು ಅನ್ನುವಿ; ದೀನ ನನ್ನು ಆತನು ರಕ್ಷಿಸುವನು.

30ಒಂಟಿಯಾದ ನಿರ ಪರಾಧಿಯನ್ನು ತಪ್ಪಿಸುವನು; ನಿನ್ನ ಕೈಗಳ ಶುದ್ಧತ್ವದಿಂದ ಅವನು ತಪ್ಪಿಸಿಕೊಳ್ಳುವನು.

Chapter Complete

You have read Job 22

30 verses