Lumina
Job

Bildad's Second Speech

Job 18·Kannada Bible

1ಆಗ ಶೂಹ್ಯನಾದ ಬಿಲ್ದದನು ಉತ್ತರ ಕೊಟ್ಟು ಹೇಳಿದ್ದೇನಂದರೆ--

2ಎಲ್ಲಿಯ ವರೆಗೆ ಮಾತುಗಳನ್ನು ಮುಂದುವರಿಸುವಿರಿ? ಗ್ರಹಿಸಿ ಕೊಳ್ಳಿರಿ, ಆಮೇಲೆ ಮಾತನಾಡೋಣ.

3ಯಾಕೆ ನಾವು ಪಶುವಿನ ಹಾಗೆ ಎಣಿಸಲ್ಪಟ್ಟೆವು? ಯಾಕೆ ನಿಮ್ಮ ಕಣ್ಣುಗಳಿಗೆ ತುಚ್ಛವಾಗಿದ್ದೇವೆ?

4ಕೋಪದಿಂದ ತನ್ನನ್ನು ತಾನೇ ಹರಿಯುವವನೇ, ನಿನ್ನ ನಿಮಿತ್ತ ಭೂಮಿ ಬಿಡಲ್ಪಡಬೇಕೋ? ಬಂಡೆ ತನ್ನ ಸ್ಥಳದಿಂದ ತೊಲಗ ಬೇಕೋ?

5ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿ ಹೋಗುವದು; ಅವನ ಬೆಂಕಿಯ ಜ್ವಾಲೆಯು ಪ್ರಕಾಶಿ ಸದು.

Job 18 illustration - Job Chapter 18

6ಬೆಳಕು ಅವನ ಗುಡಾರದಲ್ಲಿ ಕತ್ತಲಾಗುವದು; ಅವನ ದೀಪವು ಅವನ ಕೂಡ ಆರಿ ಹೋಗುವದು

7ಅವನ ಬಲದ ಹೆಜ್ಜೆಗಳು ಇಕ್ಕಟ್ಟಾಗುವವು; ಅವನ ಆಲೋಚನೆಯು ಅವನನ್ನು ದೊಬ್ಬುವದು.

8ತನ್ನ ಕಾಲುಗಳಿಂದ ಬಲೆಯಲ್ಲಿ ಸಿಕ್ಕಿಕೊಂಡನು; ಉರ್ಲಿನ ಮೇಲೆ ನಡೆದುಕೊಳ್ಳುತ್ತಾನೆ.

9ನೇಣು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವದು; ಕಳ್ಳನು ಅವನ ಮೇಲೆ ಬಲಗೊಳ್ಳುವನು.

10ಅವನ ಪಾಶವು ಭೂಮಿ ಯಲ್ಲಿಯೂ ಅವನ ಕೊಂಡಿಯು ಹಾದಿಯಲ್ಲಿಯೂ ಇಡಲ್ಪಟ್ಟಿದೆ.

Job 18 illustration - Job Chapter 18

11ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ ಅವನ ಕಾಲುಗಳನ್ನು ಎಬ್ಬಿಸುತ್ತವೆ.

12ಅವನ ಬಲವು ಕುಸಿಯುವುದು, ನಾಶನವು ಅವನ ಬಳಿಯಲ್ಲಿ ಸಿದ್ಧವಾಗಿರುವದು.

13ಅವನ ಚರ್ಮದ ಬಲವನ್ನು ತಿನ್ನುವನು; ಮರಣದ ಚೊಚ್ಟಲ ಮಗನು ಅವನ ಬಲವನ್ನು ತಿನ್ನುವನು.

14ಅವನ ಭರವಸವು ಅವನ ಗುಡಾರದೊಳಗಿಂದ ಕೀಳಲ್ಪಡುವುದು; ಅದು ಅವ ನನ್ನು ದಿಗಿಲುಗಳ ಅರಸನ ಬಳಿಗೆ ನಡಿಸುವದು.

15ಅವನಿಗಿಲ್ಲದ ಅವನ ಗುಡಾರದಲ್ಲಿ ಅದು ವಾಸಿ ಸುವುದು; ಅವನ ನಿವಾಸದ ಮೇಲೆ ಗಂಧಕ ಚದುರಿ ಬರುವದು.

Job 18 illustration - Job Chapter 18

16ಕೆಳಗಿನಿಂದ ಅವನ ಬೇರುಗಳು ಒಣ ಗುವವು; ಮೇಲಿನಿಂದ ಅವನ ಕೊಂಬೆಯು ಕೊಯ್ಯ ಲ್ಪಡುವದು;

17ಅವನ ಜ್ಞಾಪಕವು ದೇಶದೊಳಗಿಂದ ನಾಶವಾಗುವದು; ಬೀದಿಗಳಲ್ಲಿ ಅವನಿಗೆ ಹೆಸರು ಇಲ್ಲದೆ ಇರುವದು.

18ಬೆಳಕಿನಿಂದ ಅವನನ್ನು ಕತ್ತ ಲೆಗೆ ದೊಬ್ಬುವರು; ಲೋಕದಿಂದ ಓಡಿಸುವರು.

19ಅವನ ಜನರಲ್ಲಿ ಅವನಿಗೆ ಮಗನೂ ಇಲ್ಲ, ಮೊಮ್ಮಗನೂ ಇಲ್ಲ; ಅವನ ನಿವಾಸಗಳಲ್ಲಿ ಉಳಿ ದವನೂ ಇಲ್ಲ.

20ಅವನ ತರುವಾಯ ಬರುವವರು ಆಶ್ಚರ್ಯಪಡುವರು; ಮುಂದೆ ಹೋದವರನ್ನು ದಿಗಿಲು ಹಿಡಿಯುವದು.

Job 18 illustration - Job Chapter 18

21ನಿಶ್ಚಯವಾಗಿ ದುಷ್ಟರ ಮನೆಗಳು ಇಂಥವುಗಳೇ; ದೇವರನ್ನು ತಿಳಿಯದವನ ಸ್ಥಳವು ಇದೇ.

Chapter Complete

You have read Job 18

21 verses