Lumina
Job

Job's Despair Continues

Job 17·Kannada Bible

1ನನ್ನ ಉಸಿರು ಕಟ್ಟಿದೆ; ನನ್ನ ದಿವಸಗಳು ಮುಗಿದಿವೆ; ಸಮಾಧಿಗಳು ನನಗೆ ಸಿದ್ಧ ವಾಗಿವೆ.

2ಹಾಸ್ಯಗಾರರು ನನ್ನ ಬಳಿಯಲ್ಲಿ ಇದ್ದಾರ ಲ್ಲವೋ? ಅವರ ಕೋಪದಲ್ಲಿ ನನ್ನ ಕಣ್ಣು ಮುಂದು ವರಿಯುತ್ತದಲ್ಲಾ.

3ದಯಮಾಡಿ ನನ್ನ ಸಂಗಡ ಇದ್ದು ನಿನ್ನೊಂದಿಗೆ ನನಗೆ ಹೊಣೆಯಾಗು; ನನ್ನೊಂದಿಗೆ ಕೈ ತಟ್ಟುವವರು ಯಾರು?

4ಅವರ ಹೃದಯವನ್ನು ಬುದ್ಧಿಗೆ ಅಡಗಿಸಿದಿ; ಆದದರಿಂದ ನೀನು ಅವರನ್ನು ಉನ್ನತಕ್ಕೇರಿಸುವದಿಲ್ಲ.

5ತನ್ನ ಸ್ನೇಹಿತರನ್ನು ಹೊಗಳಿ ಮಾತನಾಡುವವನ ಮಕ್ಕಳ ಕಣ್ಣುಗಳು ಕ್ಷೀಣವಾಗುವವು.

Job 17 illustration - Job Chapter 17

6ನನ್ನನ್ನು ಜನರಿಗೆ ಗಾದೆಯಾಗ ಮಾಡಿದನು; ಅವರ ಮುಂದೆ ನಾನು ಬಾರಿಸುವ ವಾದ್ಯವಾದೆನು.

7ನನ್ನ ಕಣ್ಣು ದುಃಖದಿಂದ ಮೊಬ್ಬಾಯಿತು; ನನ್ನ ಅಂಗಗಳೆಲ್ಲಾ ನೆರಳಿನ ಹಾಗೆ ಅವೆ.

8ಇದಕ್ಕೋಸ್ಕರ ಯಥಾರ್ಥರು ಆಶ್ಚರ್ಯ ಪಡುವರು: ನಿರ್ಮಲನು ಕಪಟಿಗೆ ವಿರೋಧವಾಗಿ ತನ್ನನ್ನು ಉದ್ರೇಕಿಸಿಕೊಳ್ಳುವನು.

9ಆದರೆ ನೀತಿವಂತನು ತನ್ನ ಮಾರ್ಗವನ್ನು ಹಿಡಿದುಕೊಳ್ಳುವನು. ಶುದ್ಧ ಕೈಗಳು ಳ್ಳವನು ಬರಬರುತ್ತಾ ಬಲಗೊಳ್ಳುವನು.

10ಆದಾಗ್ಯೂ ನೀವೆಲ್ಲರೂ ತಿರುಗಿಕೊಂಡು ಬನ್ನಿರಿ; ನಿಮ್ಮಲ್ಲಿ ನಾನು ಜ್ಞಾನಿಯನ್ನು ಕಂಡುಕೊಳ್ಳಲಿಲ್ಲ.

Job 17 illustration - Job Chapter 17

11ನನ್ನ ದಿವಸಗಳು ಹಾದು ಹೋದವು: ನನ್ನ ಹೃದ ಯಕ್ಕೆ ಸ್ವಂತವಾಗಿರುವ ನನ್ನ ಉದ್ದೇಶಗಳು ಭಂಗವಾ ದವು.

12ಅವರು ರಾತ್ರಿಯನ್ನು ಹಗಲನ್ನಾಗಿ ಮಾಡು ತ್ತಾರೆ; ಬೆಳಕು ಕತ್ತಲೆಯ ನಿಮಿತ್ತ ಚಿಕ್ಕದಾಗಿದೆ.

13ನಾನು ನಿರೀಕ್ಷಿಸಿದರೆ ಸಮಾಧಿಯೇ ನನ್ನ ಮನೆ; ಕತ್ತಲೆಯಲ್ಲಿ ನನ್ನ ಹಾಸಿಗೆಯನ್ನು ಹಾಸಿದ್ದೇನೆ.

14ಕೊಳೆಯುವಿಕೆಗೆ -- ನೀನು ನನ್ನ ತಂದೆ ಎಂದೂ ಹುಳಕ್ಕೆ--ನನ್ನ ತಾಯಿಯೇ, ನನ್ನ ಅಕ್ಕನೇ ಎಂದೂ ನಾನು ಹೇಳಿದೆನು.

15ಹಾಗಾದರೆ ಈಗ ನನ್ನ ನಿರೀಕ್ಷೆ ಎಲ್ಲಿ? ನನ್ನ ನಿರೀಕ್ಷೆಯನ್ನು ಯಾರು ನೋಡುವರು?

Job 17 illustration - Job Chapter 17

16ನಮ್ಮ ಸಂಗಡ ಧೂಳಿನಲ್ಲಿ ವಿಶ್ರಾಂತಿಯಲ್ಲಿರುವಾಗ ಅವರು ಪಾತಾಳದ ಅಗುಳಿಗಳಿಗೆ ಇಳಿದು ಹೋಗುವರು.

Chapter Complete

You have read Job 17

16 verses