Lumina
Job

Zophar's First Speech

Job 11·Kannada Bible

1ಆಗ ನಾಮಾಥ್ಯನಾದ ಚೋಫರನು ಉತ್ತರಿಸಿ ಹೀಗೆ ನುಡಿದನು;

2ಬಹಳ ಮಾತುಗಳಿಂದ ಉತ್ತರ ಕೊಡಬಾರದೋ? ಹರಟೆ ಗಾರನು ನೀತಿವಂತನೆಂದು ಎಣಿಸಲ್ಪಡುವನೋ?

3ನಿನ್ನ ಸುಳ್ಳುಗಳಿಗೆ ಮನುಷ್ಯರು ಮೌನವಾಗಿರಬೇಕೋ? ನೀನು ಗೇಲಿ ಮಾಡುವಾಗ ಯಾವನೂ ನಿನ್ನನ್ನು ನಾಚಿಕೆ ಪಡಿಸಕೂಡದೋ?

4ನೀನು--ನನ್ನ ಬೋಧನೆ ನಿರ್ಮ ಲವಾದದ್ದು, ನಿನ್ನ ಕಣ್ಣುಗಳ ಮುಂದೆ ನಾನು ಶುದ್ಧನಾಗಿ ದ್ದೇನೆ ಎಂದು ಹೇಳಿದ್ದೀ.

5ದೇವರು ಮಾತನಾಡಿ ನಿನ್ನ ಕಡೆಗೆ ತನ್ನ ತುಟಿಗಳನ್ನು ತೆರೆದು ಜ್ಞಾನದ ಮರ್ಮ ಗಳನ್ನು ನಿನಗೆ ತೋರಿಸಿದರೆ ಒಳ್ಳೆಯದು.

Job 11 illustration - Job Chapter 11

6ಸುಜ್ಞಾನವು ಇಮ್ಮಡಿಯಾಗಿದೆ. ಹಾಗಾದರೆ ದೇವರು ನಿನ್ನ ಅಕ್ರಮ ಕ್ಕಿಂತ ಕಡಿಮೆಯಾದದ್ದನ್ನು ನಿನಗೆ ಮನ್ನಿಸಿ ಬಿಡುತ್ತಾ ನೆಂದು ತಿಳಿದುಕೋ.

7ದೇವರನ್ನು ಶೋಧಿಸಿ ಕಂಡುಕೊಳ್ಳುವಿಯೋ? ಸರ್ವಶಕ್ತನ ಸಂಪೂರ್ಣತ್ವವನ್ನು ನಿನ್ನಿಂದ ಕಂಡು ಹಿಡಿಯ ಲಾದೀತೆ?

8ಅದು ಆಕಾಶಕ್ಕಿಂತಲೂ ಎತ್ತರವಾಗಿದೇ; ನೀನೇನು ಮಾಡುವಿ? ಅದು ಪಾತಾಳಕ್ಕಿಂತಲೂ ಆಳ ವಾಗಿದೆ; ನೀನೇನು ತಿಳಿದುಕೊಳ್ಳುವಿ?

9ಅದರ ಅಳತೆ ಭೂಮಿಗಿಂತ ಉದ್ದವೂ ಸಮುದ್ರಕ್ಕಿಂತ ಅಗಲವೂ ಆಗಿದೆ.

10ಆತನು ಅದನ್ನು ಕಡಿಯುವದಾದರೆ ಇಲ್ಲವೆ ಮುಚ್ಚುವದಾದರೆ ಅಥವಾ ಒಟ್ಟು ಗೂಡಿಸುವದಾದರೆ ಆತನನ್ನು ತಡೆಯುವವರು ಯಾರಿದ್ದಾರೆ?

Job 11 illustration - Job Chapter 11

11ಆತನು ವ್ಯರ್ಥ ಜನರನ್ನು ತಿಳಿದಿದ್ದಾನೆ. ದುಷ್ಟತನವನ್ನು ನೋಡಿ ಆತನು ಅದನ್ನು ಗ್ರಹಿಸಿಕೊಳ್ಳದೆ ಇರುತ್ತಾನೋ?

12ಕಾಡುಕತ್ತೆಯ ಮರಿಯ ಹಾಗೆ ಮನುಷ್ಯನು ಹುಟ್ಟಿ ದರೂ ವ್ಯರ್ಥ ಮನುಷ್ಯನು ಜ್ಞಾನಿಯಾಗಿರುವನು.

13ನೀನು ನಿನ್ನ ಹೃದಯವನ್ನು ಸಿದ್ಧಮಾಡಿ ನಿನ್ನ ಕೈಗಳನ್ನು ಆತನ ಕಡೆಗೆ ಚಾಚಿದರೆ,

14ನಿನ್ನ ಕೈಯಲ್ಲಿರುವ ಅಪರಾಧವನ್ನು ದೂರಮಾಡಿ ದುಷ್ಟತನವನ್ನು ನಿನ್ನ ಗುಡಾರಗಳಲ್ಲಿ ವಾಸಮಾಡಗೊಡಿಸದಿದ್ದರೆ

15ನಿನ್ನ ಮುಖವನ್ನು ದೋಷವಿಲ್ಲದೆ ಎತ್ತುವಿ; ಹೌದು, ಸ್ಥಿರ ವಾಗಿದ್ದು ಹೆದರದೆ ಇರುವಿ.

Job 11 illustration - Job Chapter 11

16ನೀನು ಕಷ್ಟವನ್ನು ಮರೆತುಬಿಡುವಿ. ಹರಿದು ಹೋದ ನೀರಿನ ಹಾಗೆ ಅದನ್ನು ಜ್ಞಾಪಕಮಾಡಿಕೊಳ್ಳುವಿ.

17ಮಧ್ಯಾಹ್ನಕ್ಕಿಂತ ನಿನ್ನ ಪ್ರಾಯವು ಸ್ಪಷ್ಟವಾಗಿರುವದು; ನೀನು ಪ್ರಕಾಶಿ ಸುವವನಾಗಿ ಪ್ರಾತಃಕಾಲದ ಹಾಗೆಯೇ ಇರುವಿ.

18ನಿರೀಕ್ಷೆ ಇದೆ ಎಂದು ಭರವಸದಿಂದಿರುವಿ; ಹೌದು, ನೀನು ನಿನ್ನ ಸುತ್ತಲೂ ಅಗೆದು ಭರವಸದಿಂದ ವಿಶ್ರಾಂತಿ ತಕ್ಕೊಳ್ಳುವಿ.

19ನೀನು ಮಲಗಿಕೊಂಡಾಗ ಯಾರೂ ನಿನ್ನನ್ನು ಹೆದರಿಸರು; ಹೌದು, ಅನೇಕರು ನಿನಗೆ ವ್ಯಾಜ್ಯವನ್ನು ಒಪ್ಪಿಸುವರು.

20ಆದರೆ ದುಷ್ಟರ ಕಣ್ಣುಗಳು ಕುಂದುವವು; ಅವರು ತಪ್ಪಿಸಿಕೊಳ್ಳುವದಿಲ್ಲ. ಅವರ ಪ್ರಾಣದ ಕೊನೆಯ ಉಸಿರೇ ಅವರ ನಿರೀಕ್ಷೆಯಾಗಿದೆ.

Chapter Complete

You have read Job 11

20 verses