Lumina
Job

Job's Continued Lament

Job 10·Kannada Bible

1ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.

2ನಾನು ದೇವರಿಗೆ ಹೀಗೆ ಹೇಳುತ್ತೇನೆ--ನನ್ನನ್ನು ಖಂಡಿಸಬೇಡ; ಯಾವದಕ್ಕೋ ಸ್ಕರ ನನ್ನ ಸಂಗಡ ವ್ಯಾಜ್ಯಮಾಡುತ್ತೀ ಎಂದು ನನಗೆ ತಿಳಿಸು.

3ನೀನು ಬಲಾತ್ಕಾರ ಮಾಡುವದೂ ನಿನ್ನ ಕೈಕೆಲಸವನ್ನು ಅಲಕ್ಷ್ಯಮಾಡುವದೂ ದುಷ್ಟರ ಆಲೋ ಚನೆಯ ಮೇಲೆ ಪ್ರಕಾಶಿಸುವದೂ ನಿನಗೆ ಒಳ್ಳೆಯದೆ ನಿಸುತ್ತದೆಯೋ?

4ನಿನಗೆ ಮಾಂಸದ ಕಣ್ಣುಗಳುಂಟೋ ಅಥವಾ ಮನುಷ್ಯನು ನೋಡುವಂತೆಯೇ ನೀನೂ ನೋಡುತ್ತೀಯೋ;

5ನಿನ್ನ ದಿವಸಗಳು ಮನುಷ್ಯನ ದಿವಸಗಳ ಹಾಗಿವೆಯೋ ಅಥವಾ ನಿನ್ನ ವರುಷಗಳು ಮನುಷ್ಯನ ದಿವಸಗಳಂತಿವೆಯೋ

Job 10 illustration - Job Chapter 10

6ನನ್ನ ಅಕ್ರಮವನ್ನು ವಿಚಾರಿಸುತ್ತೀ; ನನ್ನ ಪಾಪವನ್ನು ಹುಡುಕುತ್ತೀ.

7ನಾನು ದುಷ್ಟನಲ್ಲವೆಂದೂ ನಿನ್ನ ಕೈಯಿಂದ ತಪ್ಪಿಸುವವನಿಲ್ಲ ವೆಂದೂ ನೀನು ತಿಳುಕೊಳ್ಳುತ್ತೀಯಲ್ಲವೇ;

8ನಿನ್ನ ಕೈಗಳು ನನ್ನನ್ನು ನಿರ್ಮಿಸಿ ನನ್ನನ್ನು ಸುತ್ತಲೆಲ್ಲಾ ರೂಪಿಸಿದವು. ಆದಾಗ್ಯೂ ನೀನು ನನ್ನನ್ನು ನಾಶಮಾಡುತ್ತೀ.

9ಕುಂಬಾ ರನ ಮಣ್ಣಿನಂತೆ ನನ್ನನ್ನು ರೂಪಿಸಿದ್ದೀ ಎಂದು ಜ್ಞಾಪಕ ಮಾಡಿಕೋ ಎಂದು ಬೇಡಿಕೊಳ್ಳುತ್ತೇನೆ; ಆದಾಗ್ಯೂ ನನ್ನನ್ನು ಧೂಳಿಗೆ ತಿರುಗಿಸುತ್ತಿಯೋ?

10ಹಾಲಿನಂತೆ ನನ್ನನ್ನು ಹೊಯ್ಯಲಿಲ್ಲವೋ? ಮೊಸರಿನಂತೆ ನನ್ನನ್ನು ಹೆಪ್ಪಾಗ ಮಾಡಲಿಲ್ಲವೋ?

Job 10 illustration - Job Chapter 10

11ಚರ್ಮವನ್ನೂ ಮಾಂಸ ವನ್ನೂ ನನಗೆ ತೊಡಿಸಿದಿ; ಎಲುಬುಗಳಿಂದಲೂ ನರಗ ಳಿಂದಲೂ ನನಗೆ ಬೇಲಿ ಹಾಕಿದಿ.

12ಜೀವವನ್ನೂ ಕೃಪೆಯನ್ನೂ ನನಗೆ ಅನುಗ್ರಹಿಸಿದಿ; ನಿನ್ನ ದರ್ಶನವು ನನ್ನ ಆತ್ಮವನ್ನು ಕಾಪಾಡಿತು.

13ಆದಾಗ್ಯೂ ಇವುಗ ಳನ್ನು ನಿನ್ನ ಹೃದಯದಲ್ಲಿ ಮರೆಮಾಡಿದಿ; ಇದು ನಿನ್ನ ಬಳಿಯಲ್ಲಿ ಇದೆ ಎಂದು ತಿಳಿದಿದ್ದೇನೆ.

14ನಾನು ಪಾಪಮಾಡಿದರೆ ನನ್ನನ್ನು ಗುರುತಿಸಿ ನನ್ನ ಅಕ್ರಮವನ್ನು ಪರಿಹರಿಸುವದಿಲ್ಲ.

15ನಾನು ದುಷ್ಟನಾಗಿದ್ದರೆ ನನಗೆ ಅಯ್ಯೋ! ನಾನು ನೀತಿವಂತನಾಗಿದ್ದರೂ ನನ್ನ ತಲೆ ಎತ್ತುವದಿಲ್ಲ; ಗಲಿಬಿಲಿಯಿಂದ ನಾನು ತುಂಬಿದ್ದೇನೆ, ಆದದರಿಂದ ನನ್ನ ಬಾಧೆಯನ್ನು ನೋಡು.

Job 10 illustration - Job Chapter 10

16ಅದು ಹೆಚ್ಚುತ್ತಿದೆ; ಸಿಂಹದಂತೆ ನನ್ನನ್ನು ಬೇಟೆಯಾಡುವಿ; ಇನ್ನೂ ಆಶ್ಚರ್ಯವಾದವುಗಳನ್ನು ನನಗೆ ತೋರಿಸುವಿ.

17ಹೊಸ ಸಾಕ್ಷಿಗಳನ್ನು ನನಗೆ ವಿರೋಧವಾಗಿ ಇಡುತ್ತೀ. ನಿನ್ನ ಕೋಪವು ನನ್ನ ಮೇಲೆ ಅಧಿಕಗೊಳ್ಳುತ್ತದೆ; ಬದಲಾವಣೆಗಳೂ ಯುದ್ಧವೂ ನನಗೆ ಎದುರಾಗಿವೆ.

18ಹಾಗಾದರೆ ಯಾಕೆ ನನ್ನನ್ನು ಗರ್ಭದಿಂದ ಹೊರಡ ಮಾಡಿದಿ? ಯಾವ ಕಣ್ಣು ನನ್ನನ್ನು ನೋಡದ ಹಾಗೆ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.

19ನಾನು ಇರದವನಂತಿದ್ದು ಗರ್ಭದೊಳಗಿಂದಲೇ ಸಮಾಧಿ ಸೇರುತ್ತಿದ್ದೆನು.

20ನನ್ನ ದಿವಸಗಳು ಸ್ವಲ್ಪವಲ್ಲವೋ? ಅವುಗಳನ್ನು ತೀರಿಸಿ ನನ್ನನ್ನು ಬಿಟ್ಟುಬಿಡು.

Job 10 illustration - Job Chapter 10

21ಆಗ ನಾನು ತಿರುಗಿಕೊಳ್ಳದವನಾಗಿ ಕತ್ತಲೆಯ ದೇಶಕ್ಕೆ, ಮರಣದ ನೆರಳಿಗೆ

22ಮರಣದ ನೆರಳಿನ ಅಂಧಕಾರದ ಹಾಗೆ ಮೊಬ್ಬಿರುವ ಕ್ರಮವಿಲ್ಲದ ಪ್ರಕಾಶವೇ ಅಂಧ ಕಾರದ ಹಾಗಿರುವ ದೇಶಕ್ಕೆ ಹೋಗುವದಕ್ಕಿಂತ ಮುಂಚೆ ಸ್ವಲ್ಪ ವಿಶ್ರಮಿಸಿಕೊಳ್ಳುವೆನು.

Chapter Complete

You have read Job 10

22 verses