Lumina
Genesis

The Generations of Adam

Genesis 5·Kannada Bible

1ಆದಾಮನ ವಂಶಾವಳಿಯ ಪುಸ್ತಕವು ಇದೇ. ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ತನ್ನ ಹೋಲಿಕೆಯಲ್ಲಿ ಆತನು ಅವನನ್ನು ಉಂಟುಮಾಡಿದನು.

2ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು; ಅವರು ಸೃಷ್ಟಿಸಲ್ಪಟ್ಟ ದಿನದಲ್ಲಿ ಆತನು ಅವರನ್ನು ಆಶೀರ್ವದಿಸಿ ಅವರನ್ನು ಆದಾಮ ನೆಂದು ಕರೆದನು (ಹೆಸರಿಟ್ಟನು).

3ಆದಾಮನಿಗೆ ನೂರಮೂವತ್ತು ವರುಷವಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.

4ಸೇತನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

5ಆದಾಮನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಮೂವತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.

Genesis 5 illustration - Genesis Chapter 5

6ಸೇತನು ನೂರ ಐದು ವರುಷದವನಾಗಿದ್ದಾಗ ಅವನಿಂದ ಎನೋಷನು ಹುಟ್ಟಿದನು.

7ಸೇತನಿಂದ ಎನೋಷನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರಏಳುವರುಷ ಗಳಾಗಿದ್ದವು. ಇದಲ್ಲದೆ ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

8ಸೇತನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಹನ್ನೆರಡು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.

9ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು.

10ಎನೋಷನಿಂದ ಕೇನಾ ನನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಹದಿನೈದು ವರುಷಗಳಾಗಿದ್ದವು. ಇದಲ್ಲದೆ ಅವ ನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

Genesis 5 illustration - Genesis Chapter 5

11ಎನೋಷನ ದಿನಗಳೆಲ್ಲಾ ಒಟ್ಟು ಒಂಭೈನೂರ ಐದು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.

12ಕೇನಾನನು ಎಪ್ಪತ್ತು ವರುಷದವನಾಗಿ ದ್ದಾಗ ಅವನಿಂದ ಮಹಲಲೇಲನು ಹುಟ್ಟಿದನು.

13ಕೇನಾನನಿಂದ ಮಹಲಲೇಲನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ನಾಲ್ವತ್ತು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

14ಕೇನಾನನ ದಿನಗಳೆಲ್ಲಾ ಒಟ್ಟು ಒಂಭೈನೂರ ಹತ್ತು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.

15ಮಹಲಲೇಲನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಯೆರೆದನು ಹುಟ್ಟಿ ದನು.

Genesis 5 illustration - Genesis Chapter 5

16ಮಹಲಲೇಲನಿಂದ ಯೆರೆದನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಮೂವತ್ತು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾ ರ್ತೆಯರೂ ಹುಟ್ಟಿದರು.

17ಮಹಲಲೇಲನ ದಿನಗ ಳೆಲ್ಲಾ ಎಂಟುನೂರ ತೊಂಭತ್ತೈದು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು.

18ಯೆರೆ ದನು ನೂರ ಅರುವತ್ತೆರೆಡು ವರುಷದವನಾಗಿದ್ದಾಗ ಅವನಿಂದ ಹನೋಕನು ಹುಟ್ಟಿದನು.

19ಯೆರೆದನಿಂದ ಹನೋಕನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾಗಿದ್ದವು; ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು.

20ಯೆರೆದನ ದಿನಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೆರಡು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.

Genesis 5 illustration - Genesis Chapter 5

21ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು.

22ಹನೋ ಕನಿಂದ ಮೆತೂಷೆಲಹನು ಹುಟ್ಟಿದ ತರುವಾಯ ಅವನು ಮುನ್ನೂರು ವರುಷ ದೇವರೊಂದಿಗೆ ನಡೆದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

23ಹನೋಕನ ದಿನಗಳೆಲ್ಲಾ ಒಟ್ಟು ಮುನ್ನೂರ ಅರುವತ್ತೈದು ವರುಷಗಳಾಗಿದ್ದವು.

24ದೇವರೊಂದಿಗೆ ನಡೆಯುತ್ತಿದ್ದ ಹನೋಕನನ್ನು ಆತನು ತಕ್ಕೊಂಡದ್ದರಿಂದ ಅವನು ಕಾಣದೆಹೋದನು.

25ಮೆತೂಷೆಲಹನು ನೂರ ಎಂಭತ್ತೇಳು ವರುಷದ ವನಾಗಿದ್ದಾಗ ಅವನಿಂದ ಲೆಮೆಕನು ಹುಟ್ಟಿದನು.

Genesis 5 illustration - Genesis Chapter 5

26ಮೆತೂಷೆಲಹನಿಂದ ಲೆಮೆಕನು ಹುಟ್ಟಿದ ಮೇಲೆ ಅವನ ದಿನಗಳು ಏಳುನೂರ ಎಂಭತ್ತೆರಡು ವರುಷ ಗಳಾಗಿದ್ದವು. ಅವನಿಂದ ಕುಮಾರರೂ ಕುಮಾರ್ತೆ ಯರೂ ಹುಟ್ಟಿದರು.

27ಮೆತೂಷೆಲಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು.

28ಲೆಮೆಕನು ನೂರ ಎಂಭತ್ತೆರಡು ವರುಷದವ ನಾಗಿದ್ದಾಗ ಅವನಿಂದ ಒಬ್ಬ ಮಗನು ಹುಟ್ಟಿದನು.

29ಅವನಿಗೆ ನೋಹ ಎಂದು ಕರೆದು--ಕರ್ತನು ಭೂಮಿಯನ್ನು ಶಪಿಸಿದ್ದರಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಆದರಿಸುವನು ಎಂದು ಹೇಳಿದನು.

30ಲೆಮೆಕನಿಂದ ನೋಹನು ಹುಟ್ಟಿದ ಮೇಲೆ ಅವನ ದಿನಗಳು ಐನೂರ ತೊಂಭತೈದು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು.

Genesis 5 illustration - Genesis Chapter 5

31ಲೆಮೆಕನ ದಿನಗಳೆಲ್ಲಾ ಒಟ್ಟು ಏಳುನೂರ ಎಪ್ಪತ್ತೇಳು ವರುಷಗಳಾಗಿದ್ದವು. ತರುವಾಯ ಅವನು ಸತ್ತನು.

32ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್‌ ಹಾಮ್‌ ಯೆಫೆತ್‌ ಎಂಬವರು ಹುಟ್ಟಿದರು.

Chapter Complete

You have read Genesis 5

32 verses