Lumina
Genesis

Genesis 36

Genesis 36·Kannada Bible

1ಎದೋಮ್‌ ಎಂಬ ಏಸಾವನ ವಂಶಾವಳಿಗಳು ಇವೇ:

2ಏಸಾವನು ಕಾನಾನ್ಯರ ಕುಮಾರ್ತೆಯರನ್ನು ಅಂದರೆ ಹಿತ್ತಿಯನಾದ ಏಲೋನನ ಮಗಳಾದ ಆದಾ, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳಾಗಿದ್ದ ಒಹೊಲೀಬಾಮ,

3ಇಷ್ಮಾಯೇಲನ ಮಗಳೂ ನೆಬಾಯೋತನ ಸಹೋ ದರಿಯೂ ಆಗಿದ್ದ ಬಾಸೆಮತ್‌ ಇವರನ್ನು ತನ್ನ ಹೆಂಡತಿಯರನ್ನಾಗಿ ತಕ್ಕೊಂಡನು.

4ಆದಾ ಎಂಬಾಕೆಯು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.

5ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು. ಇವರು ಕಾನಾನ್‌ ದೇಶದಲ್ಲಿ ಏಸಾವನಿಗೆ ಹುಟ್ಟಿದ ಕುಮಾರರು.

Genesis 36 illustration - Genesis Chapter 36

6ತರುವಾಯ ಏಸಾವನು ತನ್ನ ಹೆಂಡತಿಯರನ್ನೂ ಕುಮಾರ ಕುಮಾರ್ತೆಯರನ್ನೂ ತನ್ನ ಮನೆಯಲ್ಲಿದ್ದ ಎಲ್ಲಾ ಮನುಷ್ಯರನ್ನೂ ತನ್ನ ಹಿಂಡುಗಳನ್ನೂ ತನ್ನ ಎಲ್ಲಾ ದನಗಳನ್ನೂ ಕಾನಾನ್‌ ದೇಶದಲ್ಲಿ ತಾನು ಸಂಪಾದಿಸಿದ್ದ ಎಲ್ಲಾ ಸಂಪತ್ತನ್ನೂ ತೆಗೆದುಕೊಂಡು ತನ್ನ ಸಹೋದರನಾದ ಯಾಕೋಬನ ಎದುರಿನಿಂದ ಮತ್ತೊಂದು ದೇಶಕ್ಕೆ ಹೋದನು.

7ಅವರು ಕೂಡಿ ಇರುವದಕ್ಕೆ ಆಗದಷ್ಟು ಅವರ ಸಂಪತ್ತು ಅಭಿವೃದ್ಧಿ ಯಾಗಿತ್ತು. ಅವರ ಹಿಂಡುಗಳಿಗೋಸ್ಕರ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.

8ಹೀಗೆ ಏಸಾವನು ಸೇಯಾರ್‌ ಪರ್ವತದಲ್ಲಿ ವಾಸವಾಗಿದ್ದನು. ಏಸಾವನೇ ಎದೋಮನು.

9ಸೇಯಾರ್‌ ಪರ್ವತದಲ್ಲಿರುವ ಎದೋಮ್ಯರ ತಂದೆಯಾದ ಏಸಾವನ ವಂಶಾವಳಿಗಳು ಇವೇ:

10ಏಸಾವನ ಕುಮಾರರ ಹೆಸರುಗಳು ಯಾವವಂದರೆ: ಏಸಾವನ ಹೆಂಡತಿಯಾಗಿರುವ ಆದಾಳ ಮಗನಾಗಿರುವ ಎಲೀಫಜನು, ಏಸಾವನ ಹೆಂಡತಿಯಾದ ಬಾಸೆಮತಳ ಮಗನಾದ ರೆಗೂವೇಲನು.

Genesis 36 illustration - Genesis Chapter 36

11ಎಲೀಫಜನ ಮಕ್ಕಳು ಯಾರಂದರೆ: ತೇಮಾನ್‌ ಓಮಾರ್‌ ಚೆಫೋ ಗತಾಮ್‌ ಕೆನಜ್‌;

12ತಿಮ್ನಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿ ಯಾಗಿದ್ದು ಅಮಾಲೇಕನನ್ನು ಹೆತ್ತಳು. ಏಸಾವನ ಹೆಂಡತಿಯಾಗಿದ್ದ ಆದಾಳ ಕುಮಾರರು ಇವರೇ.

13ರೆಗೂವೇಲನ ಮಕ್ಕಳು ಯಾರಂದರೆ: ನಹತ್‌ ಜೆರಹ ಶಮ್ಮಾ ಮಿಜ್ಜಾ; ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು.

14ಏಸಾವನ ಹೆಂಡತಿಯಾಗಿದ್ದ ಸಿಬೆಯೋನನ ಮಗಳಾಗಿರುವ ಅನಾಹಳ ಮಗಳಾದ ಒಹೊಲೀ ಬಾಮಳ ಕುಮಾರರು ಯಾರಂದರೆ: ಆಕೆಯು ಏಸಾವನಿಗೆ ಯೆಗೂಷನನ್ನು ಯಳಾಮನನ್ನು ಕೋರಹನನ್ನು ಹೆತ್ತಳು.

15ಏಸಾವನ ಕುಮಾರರ ಮುಖಂಡರು ಯಾರಂದರೆ: ಏಸಾವನ ಚೊಚ್ಚಲ ಮಗನಾಗಿರುವ ಎಲೀಫಜನ ಮಕ್ಕಳಾದ ತೇಮಾನ್‌ ಓಮಾರ್‌ ಚೆಫೋ ಕೆನಜ್‌

Genesis 36 illustration - Genesis Chapter 36

16ಕೋರಹ ಗತಾಮ್‌ ಅಮಾಲೇಕ್‌ ಎದೋಮ್ಯ ದೇಶದಲ್ಲಿದ್ದ ಎಲೀಫಜನಿಂದ ಬಂದ ಮುಖಂಡರು ಇವರೇ. ಇವರು ಆದಾಳ ಕುಮಾರರು.

17ಏಸಾವನ ಮಗನಾದ ರೆಗೂವೇಲನ ಕುಮಾರರು ಯಾರಂದರೆ: ನಹತ್‌, ಜೆರಹ, ಶಮ್ಮಾ, ಮಿಜ್ಜಾ; ಎದೋಮ್‌ ದೇಶದಲ್ಲಿದ್ದ ರೆಗೂವೇಲನಿಂದ ಬಂದ ಮುಖಂಡರು ಇವರೇ. ಇವರು ಏಸಾವನ ಹೆಂಡತಿ ಯಾದ ಬಾಸೆಮತಳ ಕುಮಾರರು.

18ಏಸಾವನ ಹೆಂಡತಿಯಾದ ಒಹೊಲೀಬಾಮಳ ಕುಮಾರರ ಮುಖಂಡರು ಯಾರಂದರೆ: ಯೆಗೂಷ ಯಳಾಮ ಕೋರಹ ಇವರೇ. ಏಸಾವನ ಹೆಂಡತಿ ಯಾದ ಅನಾಹಳ ಮಗಳಾದ ಒಹೊಲೀಬಾಮಳಿಂದ ಬಂದ ಮುಖಂಡರು.

19ಇವರು ಎದೋಮ್‌ ಎಂಬ ಏಸಾವನ ಕುಮಾರರು; ಇವರೇ ಅವರ ಮುಖಂಡರು.

20ಹೋರಿಯನಾದ ಸೇಯಾರನ ಕುಮಾರರೂ ದೇಶದ ನಿವಾಸಿಗಳೂ ಯಾರಂದರೆ: ಲೋಟಾನ್‌ ಶೋಬಾಲ್‌ ಸಿಬೆಯೋನ್‌ ಅನಾಹ

Genesis 36 illustration - Genesis Chapter 36

21ದೀಶೋನ್‌ ಏಚೆರ್‌ ದೀಶಾನ್‌ ಇವರು ಎದೋಮ್‌ ದೇಶದಲ್ಲಿದ್ದ ಸೇಯಾರನ ಮಕ್ಕಳಾದ ಹೋರಿಯರ ಮುಖಂಡರು.

22ಲೋಟಾನನ ಕುಮಾರರು ಯಾರಂದರೆ: ಹೋರಿ ಹೇಮಾಮ್‌ ಲೋಟಾನನ ಸಹೋದರಿ ಯಾದ ತಿಮ್ನಾ.

23ಶೋಬಾಲನ ಮಕ್ಕಳು ಯಾರಂದರೆ: ಅಲ್ವಾನ್‌ ಮಾನಹತ್‌ ಗೇಬಾಲ್‌ ಶೆಫೋ ಮತ್ತು ಓನಾಮ್‌.

24ಸಿಬೆಯೋನನ ಮಕ್ಕಳು ಯಾರಂದರೆ: ಅಯ್ಯಾ ಮತ್ತು ಅನಾಹ ಎಂಬವರು. ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನು ಕಾಯುವಾಗ ಅರಣ್ಯದಲ್ಲಿ ಹೇಸರಕತ್ತೆಗಳನ್ನು ಕಂಡುಕೊಂಡವನು ಈ ಅನಾಹನೇ.

25ಅನಾಹನ ಮಕ್ಕಳು ಯಾರಂದರೆ: ದೀಶೋನ್‌ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.

Genesis 36 illustration - Genesis Chapter 36

26ದೀಶೋನನ ಮಕ್ಕಳು ಯಾರಂದರೆ: ಹೆಮ್ದಾನ್‌ ಎಷ್ಬಾನ್‌ ಇತ್ರಾನ್‌ ಕೆರಾನ್‌.

27ಏಚೆರನ ಮಕ್ಕಳು ಯಾರಂದರೆ: ಬಿಲ್ಹಾನ್‌ ಜಾವಾನ್‌ ಆಕಾನ್‌.

28ದೀಶಾನನ ಮಕ್ಕಳು ಯಾರಂದರೆ: ಊಚ್‌ ಅರಾನ್‌.

29ಹೋರಿಯರಿಂದ ಬಂದ ಮುಖಂಡರು ಯಾರಂದರೆ: ಲೋಟಾನ್‌ ಶೋಬಾಲ್‌ ಸಿಬೆಯೋನ್‌ ಅನಾಹ.

30ದೀಶೋನ್‌ ಏಚೆರ್‌ ದೀಶಾನ್‌ ಇವರೇ. ಇವರು ಸೇಯಾರ್‌ ದೇಶದಲ್ಲಿ ಮುಖಂಡರಾಗಿದ್ದ ಹೋರಿಯರಿಂದ ಬಂದ ಮುಖಂಡರು.

Genesis 36 illustration - Genesis Chapter 36

31ಇಸ್ರಾಯೇಲ್‌ ಮಕ್ಕಳನ್ನು ಯಾವ ಅರಸನೂ ಆಳುವದಕ್ಕಿಂತ ಮುಂಚೆ ಎದೋಮ್‌ ದೇಶದಲ್ಲಿ ಆಳಿದ ಅರಸರು ಇವರೇ.

32ಎದೋಮಿನಲ್ಲಿ ಬೆಯೋರನ ಮಗನಾದ ಬೆಲಗನು ಆಳಿದನು; ಅವನ ಪಟ್ಟಣದ ಹೆಸರು ದಿನ್ಹಾಬಾ.

33ಬೆಲಗನು ಸತ್ತ ಮೇಲೆ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗನಾದ ಯೋಬಾಬನು ಆಳಿದನು.

34ಯೋಬಾ ಬನು ಸತ್ತ ಮೇಲೆ ಅವನ ಬದಲಾಗಿ ತೇಮಾನೀಯ ದೇಶದ ಹುಷಾಮನು ಆಳಿದನು.

35ಹುಷಾಮನು ಸತ್ತ ಮೇಲೆ ಅವನ ಬದಲಾಗಿ ಮೋವಾಬ್ಯರ ಹೊಲದಲ್ಲಿ ಮಿದ್ಯಾನರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತ್‌.

Genesis 36 illustration - Genesis Chapter 36

36ಹದದನು ಸತ್ತಾಗ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.

37ಸಮ್ಲಾಹನು ಸತ್ತ ಮೇಲೆ ಅವನ ಬದಲಾಗಿ ನದಿಯ ಬಳಿಯಲ್ಲಿದ್ದ ರೆಹೋಬೋತೂರಿನವನಾದ ಸೌಲನು ಆಳಿದನು.

38ಸೌಲನು ಸತ್ತ ಮೇಲೆ ಅವನ ಬದಲಾಗಿ ಅಕ್ಬೋರನ ಮಗನಾದ ಬಾಳ್ಹಾನಾ ನನು ಆಳಿದನು.

39ಅಕ್ಬೋರನ ಮಗನಾದ ಬಾಳ್ಹಾನಾ ನನು ಸತ್ತ ಮೇಲೆ ಅವನ ಬದಲಾಗಿ ಹದರನು ಆಳಿದನು. ಅವನ ಪಟ್ಟಣದ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್‌; ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.

40ಕುಟುಂಬ ಸ್ಥಳ ಮತ್ತು ಹೆಸರುಗಳ ಪ್ರಕಾರವಾಗಿ ಏಸಾವನ ಮುಖಂಡರ ಹೆಸರುಗಳು ಯಾವವಂದರೆ: ತಿಮ್ನಾ ಅಲ್ವಾ ಯೆತೇತ.

Genesis 36 illustration - Genesis Chapter 36

41ಒಹೋಲೀಬಾಮ ಏಲಾ ಪೀನೋನ್‌.

42ಕೆನಜ್‌ ತೇಮಾನ್‌ ಮಿಪ್ಚಾರ

43ಮಗ್ದೀಯೇಲ್‌ ಗೀರಾಮ್‌. ತಮ್ಮ ಸ್ವಾಸ್ಥ್ಯದ ದೇಶದಲ್ಲಿ ವಾಸವಾಗಿದ್ದ ಪ್ರಕಾರ ಎದೋಮ್ಯರ ಮುಖಂಡರು ಇವರೇ. ಎದೋಮ್ಯರ ತಂದೆಯಾದ ಏಸಾವನು ಇವನೇ.

Chapter Complete

You have read Genesis 36

43 verses