Lumina
2Kings

Josiah and the Book of the Law

2Kings 22·Kannada Bible

1ಯೋಷೀಯನು ಆಳಲು ಆರಂಭಿಸಿದಾಗ ಎಂಟು ವರುಷದವನಾಗಿದ್ದು ಮೂವ ತ್ತೊಂದು ವರುಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿ ಬೊಚ್ಕತೂರಿನ ಅದಾಯನ ಮಗಳಾ ಗಿದ್ದು, ಯೆದೀದಾಳೆಂಬ ಹೆಸರುಳ್ಳವಳಾಗಿದ್ದಳು.

2ಅವನು ಕರ್ತನ ದೃಷ್ಟಿಗೆ ಒಳ್ಳೆಯದ್ದನ್ನು ಮಾಡಿ ತನ್ನ ತಂದೆಯಾದ ದಾವೀದನ ಎಲ್ಲಾ ಮಾರ್ಗಗಳಲ್ಲಿ ಬಲ, ಎಡ ಪಾರ್ಶ್ವವಾಗಿ ತಿರುಗದೆ ನಡೆದನು.

3ಅರಸನಾದ ಯೋಷೀಯನ ಆಳ್ವಿಕೆಯ ಹದಿನೆಂಟನೇ ವರುಷದಲ್ಲಿ ಏನಾಯಿತಂದರೆ, ಅರಸನು ಲೇಖಕನಾದ ಮೆಷುಲ್ಲಾ ಮನ ಮಗನಾದ ಅಚಲ್ಯನ ಮಗನಾದ ಶಾಫಾನನನ್ನು ಕರ್ತನ ಮನೆಗೆ ಕಳುಹಿಸಿ ಹೇಳಿದ್ದೇನಂದರೆ--

4ನೀನು ಪ್ರಧಾನ ಯಾಜಕನಾದ ಹಿಲ್ಕೀಯನ ಬಳಿಗೆ ಹೋಗು, ಅವನು ಕರ್ತನ ಮನೆಯಲ್ಲಿ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ.

5ಅವರು ಅದನ್ನು ಕರ್ತನ ಮನೆಯ ಕೆಲಸಮಾಡು ವವರ ಮೇಲೆ ಇರುವ ಕಾವಲುಗಾರರ ಕೈಯಲ್ಲಿ ಒಪ್ಪಿಸಲಿ.

2Kings 22 illustration - 2Kings Chapter 22

6ಮನೆ ದುರಸ್ತುಮಾಡುವ ಹಾಗೆ ಕರ್ತನ ಮನೆಯಲ್ಲಿ ಕೆಲಸ ಮಾಡುವವರಾದ ಬಡಿಗೆಯವ ರಿಗೂ ಶಿಲ್ಪಿಗಾರರಿಗೂ ಕಲ್ಲು ಕೆಲಸದವರಿಗೂ ಕೊಟ್ಟು ಮನೆಯನ್ನು ದುರಸ್ತು ಮಾಡಲು ಮರಗಳನ್ನೂ ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವದಕ್ಕೆ ಕೊಡಲಿ.

7ಆದರೆ ಅವರು ನಂಬಿಗಸ್ತರಾಗಿ ಕೆಲಸಮಾಡಿದ್ದರಿಂದ ಅವರ ಕೈಗೆ ಒಪ್ಪಿಸಿದ ಹಣವನ್ನು ಕುರಿತು ಅವರಿಂದ ಲೆಕ್ಕ ಕೇಳಲಿಲ್ಲ.

8ಆಗ ಪ್ರಧಾನ ಯಾಜಕನಾದ ಹಿಲ್ಕೀಯನು ಲೇಖಕ ನಾದ ಶಾಫಾನನಿಗೆ--ನಾನು ಕರ್ತನ ಮನೆಯಲ್ಲಿ ನ್ಯಾಯಪ್ರಮಾಣದ ಪುಸ್ತಕವನ್ನು ಕಂಡುಕೊಂಡಿದ್ದೇನೆ ಅಂದನು; ಹಿಲ್ಕೀಯನು ಆ ಪುಸ್ತಕವನ್ನು ಶಾಫಾನನಿಗೆ ಕೊಟ್ಟನು; ಅವನು ಅದನ್ನು ಓದಿದನು.

9ಲೇಖಕನಾದ ಶಾಫಾನನು ಅರಸನ ಬಳಿಗೆ ಬಂದು ಅರಸನಿಗೆಕರ್ತನ ಮನೆಯಲ್ಲಿ ದೊರಕಿದ ಹಣವನ್ನು ನಿನ್ನ ಸೇವಕರು ಕೂಡಿಸಿ ಕರ್ತನ ಆಲಯದ ಕೆಲಸ ಮಾಡು ವವರ ಮೇಲಿರುವ ಕೆಲಸಗಾರರ ಕೈಯಲ್ಲಿ ಒಪ್ಪಿಸಿದ್ದಾರೆ ಅಂದನು.

10ಇದಲ್ಲದೆ ಲೇಖಕನಾದ ಶಾಫಾನನು ಅರಸನಿಗೆ--ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಒಪ್ಪಿಸಿದ್ದಾನೆಂದು ತೋರಿಸಿದನು; ಶಾಫಾ ನನು ಅದನ್ನು ಅರಸನ ಮುಂದೆ ಓದಿದನು.

2Kings 22 illustration - 2Kings Chapter 22

11ಅರಸನು ನ್ಯಾಯಪ್ರಮಾಣದ ಪುಸ್ತಕದ ಮಾತು ಗಳನ್ನು ಕೇಳಿದಾಗ ತನ್ನ ವಸ್ತ್ರಗಳನ್ನು ಹರಿದುಕೊಂಡನು.

12ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ ಶಾಫಾನನ ಮಗನಾದ ಅಹೀಕಾಮ್‌ನಿಗೂ ವಿಾಕಾ ಯನ ಮಗನಾದ ಅಕ್ಬೋರ್‌ನಿಗೂ ಲೇಖಕನಾದ ಶಾಫಾನನಿಗೂ ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ ಹೇಳಿದ್ದೇನಂದರೆ--

13ನೀವು ಹೋಗಿ ಸಿಕ್ಕಿದ ಈ ಪುಸ್ತಕದ ಮಾತುಗಳನ್ನು ಕುರಿತು ನನಗೋಸ್ಕರವೂ ಜನರಿಗೋಸ್ಕರವೂ ಎಲ್ಲಾ ಯೆಹೂದ್ಯರಿಗೋಸ್ಕರವೂ ಕರ್ತನ ಬಳಿಯಲ್ಲಿ ವಿಚಾರಿಸಿರಿ. ಯಾಕಂದರೆ ನಮ್ಮನ್ನು ಕುರಿತು ಬರೆಯಲ್ಪಟ್ಟ ಎಲ್ಲಾದರ ಪ್ರಕಾರ ಮಾಡಲು ನಮ್ಮ ಪಿತೃಗಳು ಈ ಪುಸ್ತಕದ ಮಾತುಗಳನ್ನು ಕೇಳದೆ ಹೋದದರಿಂದ ನಮಗೆ ವಿರೋಧವಾಗಿ ಉರಿ ಯುವ ದೇವರ ಕೋಪವು ದೊಡ್ಡದಾಗಿದೆ ಅಂದನು.

14ಹಾಗೆಯೇ ಯಾಜಕನಾದ ಹಿಲ್ಕೀಯನೂ ಅಹೀಕಾ ಮನೂ ಅಕ್ಬೋರನೂ ಶಾಫಾನನೂ ಅಸಾಯನೂ ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ಆದ ವಸ್ತ್ರಗಳ ಕೆಲಸಗಾರರಾದ ಶಲ್ಲೂಮನ ಹೆಂಡತಿಯಾದ ಪ್ರವಾದಿನಿಯಾದ ಹುಲ್ದಳ ಬಳಿಗೆ ಹೋಗಿ ಅವಳ ಸಂಗಡ ಮಾತನಾಡಿದರು. ಅವಳು ಯೆರೂಸಲೇಮಿ ನೊಳಗೆ ಎರಡನೇ ಭಾಗದಲ್ಲಿ ವಾಸವಾಗಿದ್ದಳು.

15ಆಗ ಅವಳು--ಅವರಿಗೆ ಹೇಳಿದ್ದು--ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ--ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಹೇಳಬೇಕಾದದ್ದು ಇದೇ--ಇಗೋ, ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಕೇಡನ್ನು

2Kings 22 illustration - 2Kings Chapter 22

16ಅಂದರೆ ಯೆಹೂದದ ಅರಸನು ಓದಿದ ಪುಸ್ತಕದ ಮಾತುಗ ಳನ್ನೆಲ್ಲಾ ಬರಮಾಡುವೆನು.

17ಅವರು ತಮ್ಮ ಎಲ್ಲಾ ಕೈ ಕೆಲಸಗಳಿಂದ ನನಗೆ ಕೋಪವನ್ನು ಎಬ್ಬಿಸುವ ಹಾಗೆ ನನ್ನನ್ನು ಬಿಟ್ಟು ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ನನ್ನ ಕೋಪ ಈ ಸ್ಥಳದ ಮೇಲೆ ಹೊತ್ತಿ ಉರಿಯುವದು, ಆರಿಹೋಗದು ಎಂದು ಕರ್ತನು ಹೇಳುತ್ತಾನೆ.

18ಆದರೆ ಕರ್ತನಿಂದ ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ--ನೀವು ಕೇಳಿದ ಮಾತು ಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇನಂದರೆ --

19ಈ ಸ್ಥಳಕ್ಕೂ ಅದರ ನಿವಾಸಿಗಳಿಗೂ ವಿರೋಧವಾಗಿ ಅವರು ನಾಶವೂ ಶಾಪವೂ ಆಗುವದೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ ನಿನ್ನ ಹೃದಯವು ಮೆತ್ತಗಾಗಿ ನೀನು ನಿನ್ನನ್ನು ಕರ್ತನ ಮುಂದೆ ತಗ್ಗಿಸಿ ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಮುಂದೆ ಅತ್ತದ್ದನ್ನು ನಾನೇ ಕೇಳಿದ್ದೇನೆಂದು ಕರ್ತನು ಹೇಳುತ್ತಾನೆ.

20ಆದದರಿಂದ ಇಗೋ, ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವಿ; ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವದಿಲ್ಲ ಎಂಬದು. ಅವರು ಹೋಗಿ ಈ ಪ್ರತ್ಯುತ್ತರವನ್ನು ಅರಸನಿಗೆ ತಿಳಿಸಿದರು.

Chapter Complete

You have read 2Kings 22

20 verses