Lumina
1Samuel

David Saves Keilah

1Samuel 23·Kannada Bible

1ಇಗೋ, ಫಿಲಿಷ್ಟಿಯರು ಕೆಯಾಲಾಕ್ಕೆ ವಿರೋಧವಾಗಿ ಯುದ್ಧಮಾಡಿ ಕಣಗಳನ್ನು ಕೊಳ್ಳೆಮಾಡುತ್ತಿದ್ದಾರೆಂದು ದಾವೀದನಿಗೆ ತಿಳಿಸಿದರು.

2ಆದದರಿಂದ ದಾವೀದನು--ನಾನು ಈ ಫಿಲಿಷ್ಟಿ ಯರನ್ನು ಹೊಡೆಯಲು ಹೋಗಲೋ ಎಂದು ಕರ್ತ ನನ್ನು ಕೇಳಿದನು; ಅದಕ್ಕೆ ಕರ್ತನು--ನೀನು ಹೋಗಿ ಫಿಲಿಷ್ಟಿಯರನ್ನು ಹೊಡೆದು ಕೆಯಾಲಾವನ್ನು ರಕ್ಷಿಸು ಅಂದನು.

3ಆಗ ದಾವೀದನ ಮನುಷ್ಯರು ಅವನಿಗೆಇಗೋ, ನಾವು ಇಲ್ಲಿ ಯೆಹೂದದಲ್ಲಿರುವಾಗಲೇ ಭಯಪಡುತ್ತೇವೆ; ಆದರೆ ನಾವು ಫಿಲಿಷ್ಟಿಯರ ಸೈನ್ಯ ಗಳಿಗೆ ವಿರೋಧವಾಗಿ ಕೆಯಾಲಾಕ್ಕೆ ಹೋದರೆ ಎಷ್ಟು ಅಧಿಕವಾದ ಭಯವಾಗುವದು ಅಂದರು.

4ದಾವೀ ದನು ತಿರಿಗಿ ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ಪ್ರತ್ಯುತ್ತರವಾಗಿ--ನೀನೆದ್ದು ಕೆಯಾಲಾಕ್ಕೆ ಹೋಗು; ನಾನು ಫಿಲಿಷ್ಟಿಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡು ವೆನು ಅಂದನು.

5ಹಾಗೆಯೇ ದಾವೀದನೂ ತನ್ನ ಮನುಷ್ಯರೂ ಕೆಯಾಲಾಕ್ಕೆ ಹೋಗಿ ಫಿಲಿಷ್ಟಿಯರ ಸಂಗಡ ಯುದ್ಧಮಾಡಿ ಅವರ ದನಗಳನ್ನು ಹಿಡುಕೊಂಡು ಬಂದು ಅವರನ್ನು ಪೂರ್ಣವಾಗಿ ಸಂಹರಿಸಿದನು. ಈ ಪ್ರಕಾರ ದಾವೀದನು ಕೆಯಾಲಾದ ನಿವಾಸಿಗಳನ್ನು ರಕ್ಷಿಸಿದನು.

1Samuel 23 illustration - 1Samuel Chapter 23

6ಆದರೆ ಅಹೀಮೆಲೆಕನ ಮಗನಾದ ಎಬ್ಯಾತಾರನು ಕೆಯಾಲಾದಲ್ಲಿ ಇರುವ ದಾವೀದನ ಬಳಿಗೆ ಓಡಿಬಂದಾಗ ಅವನ ಕೈಯಲ್ಲಿ ಎಫೋದು ಇತ್ತು.

7ದಾವೀದನು ಕೆಯಾಲಾಕ್ಕೆ ಬಂದಿದ್ದಾನೆಂದು ಸೌಲನಿಗೆ ತಿಳಿಸಲ್ಪಟ್ಟಾಗ ಸೌಲನು--ದೇವರು ಅವನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನು, ಯಾಕಂದರೆ ಅವನು ಬಾಗಲುಗಳೂ ಅಗುಳಿಗಳೂ ಇರುವ ಪಟ್ಟಣದ ಒಳಗೆ ಪ್ರವೇಶಿಸಿದ್ದರಿಂದ ಮುಚ್ಚಲ್ಪಟ್ಟಿ ದ್ದಾನೆ ಅಂದುಕೊಂಡನು.

8ಸೌಲನು ದಾವೀದನನ್ನೂ ಅವನ ಮನುಷ್ಯರನ್ನೂ ಮುತ್ತಿಕೊಳ್ಳುವ ಹಾಗೆ ತನ್ನವರನೆಲ್ಲಾ ಕೆಯಾಲಾಕ್ಕೆ ಯುದ್ಧಕ್ಕೆ ಹೋಗಲು ಕರೆದನು.

9ಸೌಲನು ತನಗೆ ಕೇಡನ್ನು ಮಾಡಲು ಗುಟ್ಟಾಗಿ ಯೋಚಿಸುತ್ತಿದ್ದಾನೆಂದು ದಾವೀದನು ತಿಳಿದಿ ದ್ದರಿಂದ ಯಾಜಕನಾದ ಎಬ್ಯಾತಾರನಿಗೆ--ಎಫೋದನ್ನು ಇಲ್ಲಿಗೆ ತಕ್ಕೊಂಡು ಬಾ ಅಂದನು.

10ದಾವೀದನುಓ ಇಸ್ರಾಯೇಲ್‌ ದೇವರಾದ ಕರ್ತನೇ, ಸೌಲನು ಕೆಯಾಲಾಕ್ಕೆ ಬಂದು ನನ್ನ ನಿಮಿತ್ತ ಪಟ್ಟಣವನ್ನು ಕೆಡಿಸಲು ಹುಡುಕುತ್ತಿದ್ದಾನೆಂದು ನಿನ್ನ ಸೇವಕನು ಖಂಡಿತವಾಗಿ ಕೇಳಿದನು.

1Samuel 23 illustration - 1Samuel Chapter 23

11ಕೆಯಾಲಾ ಪಟ್ಟಣದವರು ನನ್ನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡುವರೋ? ನಿನ್ನ ಸೇವಕನು ಕೇಳಿದ ಹಾಗೆ ಸೌಲನು ಇಲ್ಲಿಗೆ ಬರುವನೋ? ಇಸ್ರಾಯೇಲಿನ ದೇವರಾದ ಕರ್ತನೇ, ದಯ ಮಾಡಿ ಇದನ್ನು ನಿನ್ನ ಸೇವಕನಿಗೆ ತಿಳಿಸು ಅಂದನು. ಅದಕ್ಕೆ ಕರ್ತನು--ಅವನು ಬರುವನು ಅಂದನು.

12ಕೆಯಾಲಾ ಪಟ್ಟಣದವರು ನನ್ನನ್ನು ನನ್ನ ಜನರನ್ನು ಸೌಲನ ಕೈಯಲ್ಲಿ ಒಪ್ಪಿಸಿಕೊಡುವರೋ ಎಂದು ದಾವೀದನು ಕೇಳಿದಾಗ ಕರ್ತನು--ಅವರು ಒಪ್ಪಿಸಿ ಕೊಡುವರು ಅಂದನು.

13ಆದದರಿಂದ ದಾವೀದನು ಹೆಚ್ಚು ಕಡಿಮೆ ಆರು ನೂರು ಮಂದಿಯಾದ ತನ್ನ ಜನರು ಎದ್ದು ಕೆಯಾಲಾವನ್ನು ಬಿಟ್ಟು ಹೊರಟು ತಾವು ಹೋಗಬೇಕಾದಲ್ಲಿಗೆ ಹೋದರು. ದಾವೀದನು ಕೆಯಾಲಾದಿಂದ ತಪ್ಪಿಸಿಕೊಂಡು ಹೋದನೆಂದು ಸೌಲನಿಗೆ ತಿಳಿಸಲ್ಪಟ್ಟಾಗ ಅವನು ಹೊರಡುವದನ್ನು ನಿಲ್ಲಿಸಿಬಿಟ್ಟನು.

14ದಾವೀದನು ಅರಣ್ಯದಲ್ಲಿರುವ ಬಲವಾದ ಕೋಟೆಗಳಲ್ಲಿಯೂ ಜೀಫ್‌ ಎಂಬ ಅರಣ್ಯದ ಬೆಟ್ಟದ ಲ್ಲಿಯೂ ವಾಸವಾಗಿದ್ದನು. ಸೌಲನು ದಿನಾಲು ಅವ ನನ್ನು ಹುಡುಕುತ್ತಿದ್ದನು; ಆದರೆ ದೇವರು ಅವನನ್ನು ಅವನ ಕೈಯಲ್ಲಿ ಒಪ್ಪಿಸಿಕೊಡಲಿಲ್ಲ.

15ತನ್ನ ಪ್ರಾಣವನ್ನು ಹುಡುಕುವದಕ್ಕೆ ಸೌಲನು ಹೊರಟನೆಂದು ದಾವೀದನು ತಿಳಿದಾಗ ತಾನು ಜೀಫ್‌ ಎಂಬ ಅಡವಿಯೊಳಗೆ ಅರಣ್ಯದ ಒಂದು ಸ್ಥಳದಲ್ಲಿದ್ದನು.

1Samuel 23 illustration - 1Samuel Chapter 23

16ಆಗ ಸೌಲನ ಮಗನಾದ ಯೋನಾತಾನನು ಎದ್ದು ಅರಣ್ಯದಲ್ಲಿರುವ ದಾವೀದನ ಬಳಿಗೆ ಹೋಗಿ ದೇವರಲ್ಲಿ ಅವನ ಕೈಯನ್ನು ಬಲಪಡಿಸಿ ಅವನಿಗೆ--ಭಯಪಡಬೇಡ;

17ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ; ನಾನು ನಿನ್ನ ತರುವಾಯ ಇರುವೆನು. ಹೀಗೆ ಆಗುವದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ ಅಂದನು.

18ಅವರಿಬ್ಬರೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಅರಣ್ಯದಲ್ಲೇ ಉಳಿದನು; ಆದರೆ ಯೋನಾತಾನನು ತನ್ನ ಮನೆಗೆ ಹೋದನು.

19ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದುದಾವೀದನು ನಮ್ಮ ಪಕ್ಷವಾಗಿಯೇ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯ ದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದಾನಲ್ಲವೇ?

20ಅರಸನೇ, ನೀನು ನಿನ್ನ ಪ್ರಾಣದ ಇಚ್ಛೆ ಇದ್ದ ಹಾಗೆ ಇಳಿದು ಬಾ; ಅವನನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವ ಭಾರವು ನಮ್ಮದು ಅಂದರು.

1Samuel 23 illustration - 1Samuel Chapter 23

21ಆಗ ಸೌಲನು--ನೀವು ನನ್ನ ಮೇಲೆ ಕನಿಕರಪಟ್ಟ ಕಾರಣ ಕರ್ತನಿಂದ ನಿಮಗೆ ಆಶೀರ್ವಾದವಾಗಲಿ.

22ನೀವು ದಯಮಾಡಿ ಹೋಗಿ ಅವನ ಹೆಜ್ಜೆ ಇಡುವ ಸ್ಥಳವನ್ನೂ ಅಲ್ಲಿ ಅವನನ್ನು ನೋಡಿದವರು ಯಾರು ಎಂಬದನ್ನೂ ಇನ್ನೂ ಸೂಕ್ಷ್ಮವಾಗಿ ತಿಳುಕೊಂಡು ನೋಡಿರಿ;

23ಅವನು ಬಹು ಉಪಾಯದಿಂದ ಪ್ರವರ್ತಿಸುತ್ತಾ ನೆಂದು ನನಗೆ ಹೇಳುತ್ತಾರೆ. ಅವನು ಅಡಗಿಕೊಂಡಿರುವ ಎಲ್ಲಾ ರಹಸ್ಯ ಸ್ಥಳಗಳನ್ನು ನೋಡಿ ತಿಳುಕೊಂಡು ನಿಜವಾದ ವರ್ತಮಾನವನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ; ಆಗ ನಾನು ನಿಮ್ಮ ಸಂಗಡ ಬಂದು ಅವನು ದೇಶದಲ್ಲಿದ್ದರೆ ಯೆಹೂದದ ಸಹಸ್ರಗಳಲ್ಲಿ ಅವನನ್ನು ಹುಡುಕ ಹೋಗುವೆನು ಅಂದನು.

24ಆದದರಿಂದ ಅವರು ಎದ್ದು ಸೌಲನ ಮುಂದೆ ಜೀಫಕ್ಕೆ ಹೊರಟು ಹೋದರು. ಆದರೆ ದಾವೀದನೂ ಅವನ ಜನರೂ ಯೆಷಿಮೋನಿನ ದಕ್ಷಿಣ ದಿಕ್ಕಿನ ಬೈಲಲ್ಲಿರುವ ಮಾವೋನಿನ ಅರಣ್ಯದಲ್ಲಿದ್ದರು.

25ಸೌಲನೂ ಅವನ ಮನುಷ್ಯರೂ ಅವನನ್ನು ಹುಡುಕಲು ಬಂದರು. ಇದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಬಂಡೆಗೆ ಇಳಿದು ಮಾವೋನಿನ ಅರಣ್ಯದಲ್ಲಿ ವಾಸಿಸಿದನು. ಅದನ್ನು ಸೌಲನು ಕೇಳಿ ಮಾವೋನಿನ ಅರಣ್ಯದಲ್ಲಿ ದಾವೀದ ನನ್ನು ಹಿಂದಟ್ಟಿದನು.

1Samuel 23 illustration - 1Samuel Chapter 23

26ಸೌಲನು ಬೆಟ್ಟದ ಇನ್ನೊಂದು ಕಡೆಯಲ್ಲಿ ಹೋದನು; ದಾವೀದನೂ ಅವನ ಜನರೂ ಬೆಟ್ಟದ ಆ ಕಡೆಯಲ್ಲಿ ಹೋದರು; ಸೌಲನಿಗೆ ಭಯ ಪಟ್ಟು ತಪ್ಪಿಸಿಕೊಂಡು ಹೋಗಲು ದಾವೀದನು ತ್ವರೆ ಮಾಡುವಾಗ ಸೌಲನೂ ಅವನ ಮನುಷ್ಯರೂ ಹಿಡಿ ಯುವ ಹಾಗೆ ಅವರನ್ನು ಸುತ್ತಿಕೊಂಡರು.

27ಆದರೆ ಒಬ್ಬ ದೂತನು ಸೌಲನ ಬಳಿಗೆ ಬಂದು--ನೀನು ತ್ವರೆಯಾಗಿ ಬಾ; ಯಾಕಂದರೆ ಫಿಲಿಷ್ಟಿಯರು ದೇಶದ ಮೇಲೆ ದಂಡೆತ್ತಿ ಬಂದಿದ್ದಾರೆ ಅಂದನು.

28ಸೌಲನು ದಾವೀದನನ್ನು ಹಿಂದಟ್ಟುವದನ್ನು ಬಿಟ್ಟು ಫಿಲಿಷ್ಟಿಯ ರಿಗೆ ಎದುರಾಗಿ ಹೋದನು. ಆದಕಾರಣ ಆ ಸ್ಥಳಕ್ಕೆ ಶಿಲಾಹಮಹ್ಲೆಕೋತ್‌ ಎಂದು ಹೆಸರಿಟ್ಟರು.

29ದಾವೀದನು ಆ ಸ್ಥಳವನ್ನು ಬಿಟ್ಟುಹೋಗಿ ಏಂಗೆದಿ ಯಲ್ಲಿರುವ ಬಲವಾದ ಗವಿಗಳಲ್ಲಿ ವಾಸಿಸಿದನು.

Chapter Complete

You have read 1Samuel 23

29 verses