Lumina
1Chronicles

Sons of Israel; Judah

1Chronicles 2·Kannada Bible

1ಇಸ್ರಾಯೇಲನ ಮಕ್ಕಳು -- ರೂಬೇನನು, ಸಿಮೆಯೋನನು, ಲೇವಿಯು,

2ಯೆಹೂ ದನು, ಇಸ್ಸಾಕಾರನು, ಜೆಬುಲೂನನು, ದಾನನು, ಯೋಸೇಫನು, ಬೆನ್ಯಾವಿಾನನು, ನಫ್ತಾಲಿಯು, ಗಾದನು, ಆಶೇರನು.

3ಯೆಹೂದನ ಮಕ್ಕಳು -- ಏರನು, ಓನಾನನು, ಶೇಲಾಹನು ಈ ಮೂವರು ಅವನಿಗೆ ಶೂನನ ಮಗ ಳಾದ ಕಾನಾನ್‌ ದೇಶದವಳಿಂದ ಹುಟ್ಟಿದರು. ಆದರೆ ಯೆಹೂದನ ಚೊಚ್ಚಲ ಮಗನಾದ ಏರನು ಕರ್ತನ ಸಮ್ಮುಖದಲ್ಲಿ ಕೆಟ್ಟವನಾದದರಿಂದ ಆತನು ಅವನನ್ನು ಕೊಂದುಹಾಕಿದನು.

4ಅವನ ಸೊಸೆಯಾದ ತಾಮಾ ರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಕುಮಾರರೆಲ್ಲರೂ ಐದು ಮಂದಿ.

5ಪೆರೆಚನ ಮಕ್ಕಳು--ಹೆಚ್ರೋನನು, ಹಾಮುಲನು;

1Chronicles 2 illustration - 1Chronicles Chapter 2

6ಜೆರಹನ ಮಕ್ಕಳು ಜಿಮ್ರಿಯು, ಏತಾನನು, ಹೇಮಾನನು, ಕಲ್ಕೋಲನು, ದಾರನನು ಇವರೆಲ್ಲರು ಐದು ಮಂದಿ.

7ಕರ್ವಿಾಯ ಮಕ್ಕಳು--ಶಪಿಸಲ್ಪಟ್ಟಿ ದ್ದರಲ್ಲಿ ಅಕೃತ್ಯಮಾಡಿ ಇಸ್ರಾಯೇಲನ್ನು ತೊಂದರೆ ಪಡಿಸುವವನಾದ ಆಕಾರನು.

8ಏತಾನನ ಮಗನುಅಜರ್ಯನು.

9ಹೆಚ್ರೋನನಿಗೆ ಹುಟ್ಟಿದ ಮಕ್ಕಳುಯೇರಹ್ಮೇಲನು, ರಾಮನು, ಕೆಲೂಬಾಯ್‌.

10ರಾಮನು ಅವ್ಮೆಾನಾದಾಬನನ್ನು ಪಡೆದನು. ಅವ್ಮೆಾನಾದಾಬನು ಯೆಹೂದನ ಮಕ್ಕಳಿಗೆ ಪ್ರಭು ವಾದ ನಹಶೋನನನ್ನು ಪಡೆದನು,

1Chronicles 2 illustration - 1Chronicles Chapter 2

11ನಹಶೋನನು ಸಲ್ಮನನ್ನು ಪಡೆದನು. ಸಲ್ಮನು ಬೋವಜನನ್ನು ಪಡೆದನು.

12ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು.

13ಇಷಯನು ತನ್ನ ಚೊಚ್ಚಲ ಮಗನಾದ ಎಲೀಯಾಬನನ್ನೂ ಎರಡನೆಯವನಾದ ಅಬೀನಾದಾಬನನ್ನೂ

14ಮೂರ ನೆಯವನಾದ ಶಿಮ್ಮನನ್ನೂ ನಾಲ್ಕನೆಯವನಾದ ನೆತ್‌ ನೇಲನನ್ನೂ

15ಐದನೆಯವನಾದ ರದ್ದೈಯನನ್ನೂ ಆರನೆಯವನಾದ ಓಚೇಮನನ್ನೂ ಏಳನೆಯವನಾದ ದಾವೀದನನ್ನೂ ಪಡೆದನು.

1Chronicles 2 illustration - 1Chronicles Chapter 2

16ಅವರ ಸಹೋದರಿಗಳು ಚೆರೂಯಳು ಅಬೀಗೈಲಳು. ಚೆರೂಯಳ ಮಕ್ಕಳುಅಬ್ಷೈನು ಯೋವಾಬನು ಅಸಾಹೇಲನು ಎಂಬ ಈ ಮೂವರು.

17ಅಬೀಗೈಲಳು ಅಮಾಸನನ್ನು ಹೆತ್ತಳು. ಅಮಾಸನ ತಂದೆಯು ಇಷ್ಮಾಯೇಲ್ಯನಾದ ಯೇತೆರನು.

18ಹೆಚ್ರೋನನ ಮಗನಾದ ಕಾಲೇಬನು ತನ್ನ ಹೆಂಡ ತಿಯಾದ ಅಜೂಬಳಿಂದ ಯೆರ್ಯೋತಳನ್ನು ಪಡೆದನು. ಇವಳ ಮಕ್ಕಳು -- ಯೇಷೆರನು, ಶೋಬಾಬನು, ಅರ್ದೋನನು.

19ಅಜೂಬಳು ಸತ್ತ ತರುವಾಯ ಕಾಲೇಬನು ಎಫ್ರಾತಳನ್ನು ಮದುವೆಯಾದನು.

20ಅವಳು ಅವನಿಗೆ ಹೂರನನ್ನು ಹೆತ್ತಳು. ಹೂರನು ಊರಿಯನನ್ನು ಪಡೆದನು; ಊರಿಯನು ಬೆಚಲೇಲ ನನ್ನು ಪಡೆದನು.

1Chronicles 2 illustration - 1Chronicles Chapter 2

21ತರುವಾಯ ಹೆಚ್ರೋನನು ಗಿಲ್ಯಾದನ ತಂದೆಯಾದ ಮಾಕೀರನ ಮಗಳ ಬಳಿಗೆ ಹೋದನು; ಅವನು ಅರವತ್ತು ವರುಷದವನಾಗಿರು ವಾಗ ಅವಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬನನ್ನು ಹೆತ್ತಳು.

22ಸೆಗೂಬನು ಯಾಯಾರನನ್ನು ಪಡೆದನು.

23ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತ ಮೂರು ಪಟ್ಟಣಗಳು ಉಂಟಾಗಿದ್ದವು. ಇದಲ್ಲದೆ ಅವನು ಗೆಷೂರ್ಯನ್ನೂ ಅರಾಮ್ಯನ್ನೂ ಯಾಯಾರನ ಪಟ್ಟಣಗಳನ್ನೂ ಕೆನತನ್ನೂ ಅದರ ಪಟ್ಟಣಗಳನ್ನೂಅಂದರೆ ಅರುವತ್ತು ಪಟ್ಟಣಗಳನ್ನು ತೆಗೆದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ಮಕ್ಕಳಿಗೆ ಇದ್ದವು.

24ಹೆಚ್ರೋನನು ಕಾಲೇಬನ ಎಫ್ರಾ ತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವಿನ ತಂದೆಯು.

25ಹೆಚ್ರೋನನ ಚೊಚ್ಚಲ ಮಗನಾದ ಯೆರಹ್ಮೇ ಲನ ಮಕ್ಕಳು--ಚೊಚ್ಚಲ ಮಗನಾದ ರಾಮನು, ಬೂನನು, ಓರೆನನು, ಓಚೆಮನು, ಅಹೀಯನು.

1Chronicles 2 illustration - 1Chronicles Chapter 2

26ಈ ಯೆರಹ್ಮೇಲನಿಗೆ ಮತ್ತೊಬ್ಬ ಹೆಂಡತಿ ಇದ್ದಳು; ಅವಳ ಹೆಸರು ಅಟಾರಳು; ಅವಳು ಓನಾಮನ ತಾಯಿ. ಯೆರಹ್ಮೇಲನ ಚೊಚ್ಚಲ ಮಗನಾದ ರಾಮನ ಮಕ್ಕಳು

27ಮಾಚನು, ಯಾವಿಾನನು, ಏಕೆರೆನು.

28ಓನಾಮನ ಮಕ್ಕಳು--ಶಮ್ಮೈಯನು, ಯಾದಾವನು. ಶಮ್ಮೈಯನ ಮಕ್ಕಳು--ನಾದಾಬನು, ಅಬೀಷೂರನು.

29ಅಬೀ ಷೂರನ ಹೆಂಡತಿಯ ಹೆಸರು ಅಬೀಹೈಲು; ಅವಳು ಅವನಿಗೆ ಅಹ್ಬಾನನನ್ನೂ, ಮೋಲೀದನನ್ನೂ ಹೆತ್ತಳು.

30ನಾದಾಬನ ಮಕ್ಕಳು--ಸೆಲೆದನು, ಅಪ್ಪಯಿಮನು. ಸೆಲೆದನು ಮಕ್ಕಳಿಲ್ಲದೆ ಸತ್ತನು.

1Chronicles 2 illustration - 1Chronicles Chapter 2

31ಅಪ್ಪಯಿಮನ ಮಗನು ಇಷ್ಷೀಯು; ಇಷ್ಷೀಯ ಮಗನು ಶೇಷಾನನು;

32ಶೇಷಾನನ ಮಗನು ಅಹ್ಲೈಯನು. ಶಮ್ಮೈಯನ ಸಹೋದರನಾದ ಯಾದನ ಮಕ್ಕಳು--ಯೆತೆರ್‌, ಯೋನಾತಾನನು.

33ಯೆತೆರನು ಮಕ್ಕಳಿಲ್ಲದೆ ಸತ್ತನು. ಯೋನಾತಾನನ ಮಕ್ಕಳು--ಪೆಲೆತನು, ಜಾಜನು. ಇವರೇ ಯೆರಹ್ಮೇಲನ ಮಕ್ಕಳಾಗಿದ್ದರು.

34ಆದರೆ ಶೇಷಾನನಿಗೆ ಕುಮಾರರಿಲ್ಲದೆ ಕುಮಾರ್ತೆಗಳಿದ್ದರು. ಮತ್ತು ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಐಗುಪ್ತನಾದ ಸೇವಕನಿದ್ದನು.

35ಶೇಷಾನನು ತನ್ನ ಕುಮಾರ್ತೆಯನ್ನು ತನ್ನ ಸೇವಕನಾದ ಯರ್ಹನಿಗೆ ಹೆಂಡತಿಯಾಗಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು.

1Chronicles 2 illustration - 1Chronicles Chapter 2

36ಅತ್ತೈಯು ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು.

37ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು.

38ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು.

39ಅಜ ರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸ ನನ್ನು ಪಡೆದನು.

40ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.

1Chronicles 2 illustration - 1Chronicles Chapter 2

41ಶಲ್ಲೂಮನು ಯೆಕಮ್ಯಾಹನನ್ನು ಪಡೆದನು; ಯೆಕಮ್ಯಾಹನು ಎಲೀಷಾಮನನ್ನು ಪಡೆದನು.

42ಯೆರಹೇಲ್ಮನ ಸಹೋದರನಾದ ಕಾಲೇಬನ ಮಕ್ಕಳು -- ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಮತ್ತು ಹೆಬ್ರೋ ನ್ಯನ ತಂದೆಯಾದ ಮಾರೇಷನಿಗೆ ಮಕ್ಕಳು ಉಂಟಾ ಗಿದ್ದರು.

43ಹೆಬ್ರೋನನ ಮಕ್ಕಳು--ಕೋರಹನು, ತಪ್ಪೊಹನು, ರೆಕಮನು, ಶೆಮವನು.

44ಶೆಮವನು ಯೊರ್ಕೆಯಾಮ್ಯನ ತಂದೆಯಾದ ರಹಮ್ಯನನ್ನು ಪಡೆ ದನು; ರೆಕಮನು ಶಮ್ಮೈಯನನ್ನು ಪಡೆದನು.

45ಶಮ್ಮೈ ಯಿಯ ಮಗನು ಮಾವೋನನು; ಈ ಮಾವೋನನು ಬೆತ್ಸೂರಿಗೆ ತಂದೆಯಾಗಿದ್ದನು.

1Chronicles 2 illustration - 1Chronicles Chapter 2

46ಕಾಲೇಬನ ಉಪ ಪತ್ನಿಯಾದ ಏಫಳು ಹಾರಾನನನ್ನೂ, ಮೋಚನನ್ನೂ, ಗಾಜೇಜನನ್ನೂ ಹೆತ್ತಳು. ಹಾರಾನನು ಗಾಜೇಜನನ್ನು ಪಡೆದನು.

47ಯಾದೈಯಳ ಮಕ್ಕಳು--ರೆಗೆಮನು, ಯೋತಾಮನು, ಗೇಷಾನನು, ಪೆಲಟನು, ಏಫನು, ಶಾಫನು.

48ಕಾಲೇಬನ ಉಪಪತ್ನಿಯಾದ ಮಾಕಳು ಶೆಬೆರನನ್ನೂ ತಿರ್ಹನನ್ನೂ ಹೆತ್ತಳು.

49ಇದಲ್ಲದೆ ಅವಳು ಮದ್ಮನ್ನನ ತಂದೆಯಾದ ಶಾಫನನ್ನೂ ಮಕ್‌ ಬೇನನಿಗೂ ಗಿಬ್ಯನಿಗೂ ತಂದೆಯಾದ ಶೆವನನ್ನೂ ಹೆತ್ತಳು. ಕಾಲೇಬನ ಮಗಳು ಅಕ್ಸಾಹಳು.

50ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಗನಾದ ಕಾಲೇ ಬನ ಮಗನು -- ಕಿರ್ಯತ್ಯಾರೀಮನ ತಂದೆಯಾದ ಶೋಬಾಲನು.

1Chronicles 2 illustration - 1Chronicles Chapter 2

51ಬೇತ್ಲೆಹೇಮ್ಯರಿಗೆ ತಂದೆಯಾದ ಸಲ್ಮನು, ಬೇತ್ಗಾ ದೇರಿಗೆ ತಂದೆಯಾದ ಹಾರೇಫನು.

52ಇದಲ್ಲದೆ ಕಿರ್ಯತ್ಯಾರೀಮನ ತಂದೆಯಾದ ಶೋಬಾಲನಿಗೆ ಮಕ್ಕ ಳಿದ್ದರು; ಅವರು ಯಾರಂದರೆ ಹಾರೋಯೆನು, ಮಾನ ಹತಿಯರ ಅರ್ಧಜನರು.

53ಕಿರ್ಯತ್ಯಾರೀಮಿನವರ ಸಂತತಿಗಳು ಯಾರಂದರೆ, ಯೆತೆರಿನವರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು ಇವರಿಂದ ಚೊರ್ರಾ ತ್ಯರೂ ಎಷ್ಟಾವೋಲ್ಯರೂ ಹುಟ್ಟಿದರು;

54ಸಲ್ಮನ ಮಕ್ಕಳು -- ಬೇತ್ಲೆಹೇಮ್ಯರು, ನೆಟೋಫಾದವರು, ಅಟರೋತರು, ಬೇತ್ಯೋವಾಬ್‌ ಮನೆಯವರುಮಾನಹತಿಯರಲ್ಲಿ ಅರ್ಧಜನರೂ ಚೊರಾತ್ಯರೂ.

55ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.

Chapter Complete

You have read 1Chronicles 2

55 verses