Lumina
1Chronicles

From Adam to Esau

1Chronicles 1·Kannada Bible

1ಆದಾಮನು, ಶೇತನು, ಎನೋಷನು,

2ಕೇನಾನನು, ಮಹಲಲೇಲನು, ಯೆರೆ ದನು,

3ಹನೋಕನು, ಮೆತೂಷೆಲಹನು, ಲೆಮೆಕನು,

4ನೋಹನು, ಶೇಮನು, ಹಾಮನು, ಮತ್ತು ಯೆಫೆತನು,

5ಯೆಫೆತನ ಮಕ್ಕಳು--ಗೋಮೆರನು ಮಾಗೋ ಗನು ಮಾದಯನು, ಯಾವಾನನು, ತೂಬಲನು, ಮೇಷಕನು, ತೀರಾಸನು.

1Chronicles 1 illustration - 1Chronicles Chapter 1

6ಗೋಮೆರನ ಮಕ್ಕಳ --ಅಷ್ಕೆನಜನು, ರೀಫತನು, ತೊಗರ್ಮನು

7ಯಾವಾ ನನ ಮಕ್ಕಳು -- ಎಲೀಷನು, ತಾರ್ಷೀಷನು, ಕಿತ್ತೀ ಮನು, ದೋದಾನೀಮನು.

8ಹಾಮನ ಮಕ್ಕಳು -- ಕೂಷನು, ಮಿಚ್ರಯಾ ಮನು, ಪೂಟನು, ಕಾನಾನನು.

9ಕೂಷನ ಮಕ್ಕಳು --ಸೇಬನು, ಹವೀಲನು, ಸಬ್ತನು, ರಮ್ಮನು, ಸಬ್ತೆಕನು. ರಮ್ಮನ ಮಕ್ಕಳು--ಶೆಬನು, ದೆದಾನನು.

10ಕೂಷನು ನಿಮ್ರೋದನನ್ನು ಪಡೆದನು; ಅವನು ಭೂಮಿಯಲ್ಲಿ ಪರಾಕ್ರಮಶಾಲಿಯಾಗಲು ಪ್ರಾರಂಭಿಸಿದನು.

1Chronicles 1 illustration - 1Chronicles Chapter 1

11ಮಿಚ್ರಯಿಮ್ಯನ್ನೂ ಲೂದ್ಯರನ್ನೂ ಅನಾಮ್ಯರನ್ನೂ ಲೆಹಾಬ್ಯರನ್ನೂ ನಫ್ತುಹ್ಯರನ್ನೂ ಪತ್ರುಸ್ಯರನ್ನೂ ಕಫ್ತೋರ್ಯರನ್ನೂ ಕಸ್ಲುಹ್ಯರನ್ನೂ ಪಡೆದನು;

12ಕಸ್ಲುಹ್ಯರೊಳಗಿಂದ ಫಿಲಿಷ್ಟಿಯರು ಉಂಟಾದರು.

13ಕಾನಾನನು ತನ್ನ ಚೊಚ್ಚಲ ಮಗನಾದ ಸೀದೋನ ನನ್ನೂ

14ಹೇತನನ್ನೂ ಯೆಬೂಸ್ಯರನ್ನೂ ಅಮೋರ್ಯ ರನ್ನೂ ಗಿರ್ಗಾಷಿಯರನ್ನೂ ಹಿವ್ವಿಯರನ್ನೂ

15ಅರ್ಕಿ ಯರನ್ನೂ ಸೀನೀಯರನ್ನೂ ಅರ್ವಾದಿಯರನ್ನೂ

1Chronicles 1 illustration - 1Chronicles Chapter 1

16ಚೆಮಾರಿಯರನ್ನೂ ಹಮಾತಿಯರನ್ನೂ ಪಡೆದನು.

17ಶೇಮನ ಮಕ್ಕಳು--ಏಲಾಮನು ಅಶ್ಯೂರನು, ಅರ್ಪಕ್ಷದನು, ಲೂದನು, ಅರಾಮನು, ಊಚನು, ಹೂಲನು, ಗೆತೆರನು, ಮೆಷಕನು.

18ಅರ್ಪಕ್ಷದನು ಶೆಲಹನನ್ನು ಪಡೆದನು; ಶೆಲಹನು ಏಬೆರನನ್ನು ಪಡೆ ದನು.

19ಏಬೆರನಿಗೆ ಇಬ್ಬರು ಕುಮಾರರು ಹುಟ್ಟಿದರು. ಒಬ್ಬನಿಗೆ ಪೆಲೆಗನೆಂದು ಹೆಸರಿಡಲ್ಪಟ್ಟಿತು; ಯಾಕಂದರೆ ಅವನ ದಿವಸಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು, ಅವನ ತಮ್ಮನ ಹೆಸರು ಯೊಕ್ತಾನನು.

20ಯೊಕ್ತಾನನು ಅಲ್ಮೋದಾದನನ್ನೂ,

1Chronicles 1 illustration - 1Chronicles Chapter 1

21ಶೇಲೆಫನನ್ನೂ, ಹಚರ್ಮಾ ವೇತನನ್ನೂ, ಯೆರಹನನ್ನೂ, ಹದೋರಾಮನನ್ನೂ,

22ಊಜಾಲನನ್ನೂ, ದಿಕ್ಲನನ್ನೂ, ಏಬಾಲನನ್ನೂ, ಅಬೀ ಮಾಯೇಲನನ್ನೂ,

23ಶೆಬಾನನ್ನೂ, ಓಫೀರನನ್ನೂ ಹವೀಲಾನನ್ನೂ, ಯೋಬಾಬನನ್ನೂ ಪಡೆದನು. ಇವ ರೆಲ್ಲರು ಯೊಕ್ತಾನನ ಮಕ್ಕಳು.

24ಶೇಮನು ಅರ್ಪಕ್ಷದನು, ಶೆಲಹನು,

25ಏಬೆ ರನು, ಪೆಲೆಗನು, ರೆಯೂ,

1Chronicles 1 illustration - 1Chronicles Chapter 1

26ಸೆರೂಗನು, ನಾಹೋ ರನು, ತೆರಹನು;

27ಅಬ್ರಹಾಮನೆಂಬ ಅಬ್ರಾಮನು.

28ಅಬ್ರಹಾಮನ ಮಕ್ಕಳು -- ಇಸಾಕನು, ಇಷ್ಮಾಯೇಲನು.

29ಇವರ ವಂಶಾವಳಿ ಏನಂದರೆ--ಇಷ್ಮಾಯೇಲನ ಚೊಚ್ಚಲ ಮಗನು ನೆಬಾಯೋತನು, ತರುವಾಯ ಕೇದಾರನು, ಅದ್ಬೆಯೇಲನು, ಮಿಬ್ಸಾಮನು, ಮಿಷ್ಮನು,

30ದೂಮನು, ಮಸ್ಸನು, ಹದದನು, ತೇಮನು,

1Chronicles 1 illustration - 1Chronicles Chapter 1

31ಯೆಟೂರನು, ನಾಫೀಷನು, ಕೇದೆಮನು. ಇವರೇ ಇಷ್ಮಾಯೇಲನ ಕುಮಾರರು.

32ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಮಕ್ಕಳು. ಅವಳು ಜಿಮ್ರಾನನನ್ನೂ, ಯೊಕ್ಷಾನನನ್ನೂ, ಮೆದಾನನನ್ನೂ, ಮಿದ್ಯಾನನನ್ನೂ, ಇಷ್ಬಾಕನನ್ನೂ, ಶೂಹನನ್ನೂ ಹೆತ್ತಳು. ಯೊಕ್ಷಾನನ ಮಕ್ಕಳು--ಶೆಬನು, ದೆದಾನನು.

33ಮಿದ್ಯಾನನ ಮಕ್ಕಳು -- ಏಫನು, ಏಫರನು, ಹನೋಕನು, ಅಬೀದನು ಎಲ್ದಾಯನು. ಇವರೆಲ್ಲರೂ ಕೆಟೂರಳ ಮಕ್ಕಳು.

34ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನ ಮಕ್ಕಳು ಏಸಾವನು, ಇಸ್ರಾಯೇಲನು.

35ಏಸಾವನ ಮಕ್ಕಳು -- ಎಲೀಫಜನು, ರೆಯೂ ವೇಲನು, ಯೆಯೂಷನು, ಯಳಾಮ್‌ನು, ಕೋರ ಹನು.

1Chronicles 1 illustration - 1Chronicles Chapter 1

36ಎಲೀಫಜನ ಮಕ್ಕಳು -- ತೇಮಾನನು, ಓಮಾರನು, ಜೆಫೀ, ಗತಾಮನು, ಕೆನಜನು, ತಿಮ್ನಳು, ಅಮಾಲೇಕನು.

37ರೆಯೂವೇಲನ ಮಕ್ಕಳು--ನಹ ತನು, ಜೆರಹನು, ಶಮ್ಮನು, ಮಿಜ್ಜನು.

38ಸೇಯಾರನ ಮಕ್ಕಳು--ಲೋಟಾನನು, ಶೋಬಾ ಲನು, ಚಿಬ್ಬೋನನು, ಅನಾಹನು, ದೀಶೋನನು, ಏಚೆರನು, ದೀಶಾನನು.

39ಲೋಟಾನನ ಮಕ್ಕಳುಹೋರೀ, ಹೋಮಾಮನು, ಲೋಟಾನನ ಸಹೋ ದರಿ ತಿಮ್ನಳು.

40ಶೋಬಾಲನ ಮಕ್ಕಳು--ಅಲ್ಯಾ ನನು, ಮಾನಹತನು, ಏಬಾಲನು, ಶೆಫೀಯು, ಓನಮನು. ಚಿಬ್ಬೋನನ ಮಕ್ಕಳು--ಅಯ್ಯಾಹನು, ಅನಾಹನು.

1Chronicles 1 illustration - 1Chronicles Chapter 1

41ಅನಾಹನ ಮಗನು--ದೀಶೋನನು. ದೀಶೋನನ ಮಕ್ಕಳು--ಹಮ್ರಾನನು, ಎಷ್ಬಾನನು, ಇತ್ರಾನನು, ಕೆರಾನನು.

42ಏಚೆರನ ಮಕ್ಕಳು-- ಬಿಲ್ಹಾನನು, ಜಾವಾನನು, ಯಾಕಾನನು. ದೀಶಾನನ ಮಕ್ಕಳು--ಊಚನು, ಅರಾನನು.

43ಇಸ್ರಾಯೇಲಿನ ಮಕ್ಕಳ ಮೇಲೆ ಯಾವ ಅರ ಸನೂ ಆಳದ ಮುಂಚೆ ಎದೋಮ್‌ ದೇಶದಲ್ಲಿ ಆಳಿದ ಅರಸುಗಳು ಯಾರಂದರೆ--ಬೆಯೋರನ ಮಗನಾದ ಬೆಳನು.

44ಅವನ ಪಟ್ಟಣದ ಹೆಸರು ದಿನ್ಹಾಬಾ. ಬೆಳನು ಸತ್ತ ತರುವಾಯ ಅವನಿಗೆ ಬದಲಾಗಿ ಬೊಚ್ರ ದವನಾದಂಥ ಜೆರಹನ ಮಗನಾದ ಯೋಬಾಬನು ಆಳಿದನು.

45ಯೋಬಾಬನು ಸತ್ತ ತರುವಾಯ ಅವನಿಗೆ ಬದಲಾಗಿ ತೇಮಾನೀಯರ ದೇಶದವನಾದ ಹೂಷಾಮನು ಆಳಿದನು.

1Chronicles 1 illustration - 1Chronicles Chapter 1

46ಹೂಷಾಮನು ಸತ್ತಾಗ ಅವನಿಗೆ ಬದಲಾಗಿ ಮೋವಾಬಿನ ಹೊಲದಲ್ಲಿ ಮಿದ್ಯಾನ್ಯರನ್ನು ಹೊಡೆದ ಬೆದದನ ಮಗನಾದ ಹದದನು ಆಳಿದನು. ಅವನ ಪಟ್ಟಣದ ಹೆಸರು ಅವೀತು.

47ಹದದನು ಸತ್ತ ತರುವಾಯ ಅವನಿಗೆ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಆಳಿದನು.

48ಸಮ್ಲಾಹನು ಸತ್ತ ತರುವಾಯ ಅವನಿಗೆ ಬದಲಾಗಿ ನದಿಯ ತೀರದಲ್ಲಿರುವ ರೆಹೋಬೋತ್‌ ಊರಿನ ಸೌಲನು ಆಳಿದನು.

49ಸೌಲನು ಸತ್ತ ತರುವಾಯ ಅವನಿಗೆ ಬದಲಾಗಿ ಅಕ್ಬೋರನ ಮಗನಾದ ಬಾಳ್ಹ ನಾನನು ಆಳಿದನು.

50ಬಾಳ್ಹನಾನನು ಸತ್ತ ತರುವಾಯ ಅವನಿಗೆ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲಳು; ಅವಳು ಮಟ್ರೇದಳ ಮಗಳೂ ಮೆಜಾಹಾಬನ ಮೊಮ್ಮಗಳೂ ಆಗಿದ್ದಳು.

1Chronicles 1 illustration - 1Chronicles Chapter 1

51ಹದದನು ಸತ್ತನು. ಎದೋಮ್ಯನ ಪ್ರಭುಗಳು ಯಾರಂದರೆ

52ತಿಮ್ನ ಪ್ರಭು, ಅಲ್ಯ ಪ್ರಭು, ಯೆತೇತ್‌ ಪ್ರಭು, ಒಹೊಲೀಬಾಮ ಪ್ರಭು, ಏಲ ಪ್ರಭು, ಪೀನೋನ್‌ ಪ್ರಭು,

53ಕೆನಜ್‌ ಪ್ರಭು, ತೇಮಾನ್‌ ಪ್ರಭು, ಮಿಬ್ಚಾರ ಪ್ರಭು, ಮಗ್ದಿಯೇಲ್‌ ಪ್ರಭು, ಗೀರಾಮ್‌ ಪ್ರಭು.

54ಇವರೇ ಎದೋಮ್ಯರ ಪ್ರಭುಗಳು.

Chapter Complete

You have read 1Chronicles 1

54 verses